ಬೆಂಗಳೂರು : ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ನವೆಂಬರ್ 29, 2024 ರಿಂದ ಡಿಸೆಂಬರ್ 04, 2024 ರವರೆಗೆ ವಿವಿಧ ಕಾರ್ಯಕ್ರಮಗಳಿಗಾಗಿ ಇಟಲಿ ದೇಶದ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಭಾರತೀಯ ರಾಯಭಾರಿಗಳಾದ ಶ್ರೀಮತಿ ವಾಣಿ ರಾವ್, ಮಿಲನ್ ನ ಕಾನ್ಸುಲ್ ಜನರಲ್ ಶ್ರೀಮತಿ ಲಾವಣ್ಯ ಕುಮಾರ್ ಮತ್ತು ಟೂರಿನ್ ನಗರದ ಉಪ ಮಹಾ ಪೌರರಾದ ಕುಮಾರಿ ಮಿಶೆಲ್ಲಾ ಫಾವರೋ ರವರನ್ನು ಭೇಟಿ ಮಾಡಿ ಅನಿವಾಸಿ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಇಟಲಿಯ ವ್ಯಾಟಿಕನ್ ಸಿಟಿಯಲ್ಲಿ ಪೆÇೀಪ್ ನೇತೃತ್ವದ ಸರ್ವ ಧರ್ಮ ಸಮ್ಮೇಳನ ಕಾರ್ಯಕ್ರಮ ಮುಗಿಸಿ ಇಟಲಿಯ ಈ ಹಿಂದಿನ ರಾಜಧಾನಿ ಹಾಗೂ ಕನ್ನಡಿಗರು ಹೆಚ್ಚಾಗಿ ನೆಲೆಸಿರುವ ನಗರವೂ ಆಗಿರುವ ಟೂರಿನ್‍ನಲ್ಲಿ ಇಟಲಿ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇಟಲಿಯಲ್ಲಿ ಸುಮಾರು 4,000 ಕನ್ನಡಿಗರಿದ್ದು ಬಹುಪಾಲು ಜನರು ವಿದ್ಯಾರ್ಥಿಗಳು, ಉದ್ಯೋಗಕ್ಕೆಂದು ತೆರಳುವವರಲ್ಲಿ ಶುಶ್ರೂಶಕಿಯರು, ಮಾಹಿತಿ ತಂತ್ರಜ್ಞಾನ ಹಾಗು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಹೆಚ್ಚಾಗಿದ್ದು, ಉಪಾಧ್ಯಕ್ಷರು ಕಾರ್ಯಕ್ರಮದ ನಂತರ ಅನಿವಾಸಿ ಕನ್ನಡಿಗರೊಂದಿಗೆ ಸುದೀರ್ಘವಾಗಿ ಮಾತನಾಡಿ ಅವರುಗಳ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ, ಸಲಹೆಗಳನ್ನು ಪಡೆದರು. ಮುಖ್ಯವಾಗಿ marriage certificate ಮತ್ತು 'one and same certificate’ ಪಡೆಯಲು ಸರ್ಕಾರಿ ಕಛೇರಿಗಳಿಂದ ತಡವಾಗುತ್ತಿರುವ ಕಾರಣ ಸಮಸ್ಯೆಯಾಗುತ್ತಿದ್ದು ಆನ್ ಲೈನ್ ಮುಖಾಂತರ ಪಡೆಯುವ ಅಥವಾ ನವೀಕರಿಸುವ ವ್ಯವಸ್ಥೆಯ ಜತೆಗೆ ಸಕಾಲದಲ್ಲಿ ಅವಕಾಶ ನೀಡಿದರೆ ಅನುಕೂಲವಾಗುತ್ತದೆ ಎಂದು ಕೋರಿದರು.
ಈ ಸಮಸ್ಯೆ ಅರಿತ ಉಪಾಧ್ಯಕ್ಷರು ಕೇರಳ ಹಾಗು ಕೆಲವು ರಾಜ್ಯಗಳಲ್ಲಿ ಈ ವ್ಯವಸ್ಥೆ ಈಗಾಗಲೇ ಲಭ್ಯವಿದ್ದು, ಕರ್ನಾಟಕದಲ್ಲೂ ಜಾರಿಗೊಳಿಸಲು ಕಂದಾಯ ಇಲಾಖೆಯೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಹೆಚ್ಚಾಗಿ ಭಾರತದಿಂದ ತೆರಳುವ ಶುಶ್ರೂಷಕರುಗಳಿಗೆ ದೊರೆಯುವ ವೇತನವು ಇಟಲಿಯ ಶುಶ್ರೂಷಕರಿಗೆ ಹೋಲಿಸಿದರೆ ಬಹಳ ಕಡಿಮೆ ಇರುತ್ತದೆ ಮತ್ತು ಮದುವೆಯ ನಂತರ ಸಂಗಾತಿಗೆ ವೀಸಾ ಪಡೆಯುವುದು ಕಷ್ಟಕರವಾಗಿರುತ್ತದೆ ಎಂದು ಕೋರಿದರು. ಈ ಬಗ್ಗೆ ಟೂರಿನ್ ನಗರದ ಉಪ ಮಹಾ ಪೌರರಾದ ಕುಮಾರಿ ಮಿಶೆಲ್ಲಾ ಫಾವರೋರವರನ್ನು ಭೇಟಿಯಾಗಿ, ಸದರಿ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದು ಸಮಸ್ಯೆಗೆ ಸಂಬಂಧಿಸಿದ ಇಟಲಿಯ ಇಲಾಖೆ- ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಪರಿಹಾರವನ್ನು ಒದಗಿಸುವಂತೆ ಕೋರಿದ್ದಾರೆ ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಕಚೇರಿಯ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu