ಹೆಬ್ರಿ: ‘ಸಮಾಜ ಸೇವಕ ಹೆಬ್ರಿ ಜನಾರ್ದನ್ಗೆ ಸಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಿಂದ ನಮ್ಮೂರಿಗೂ ಹೆಮ್ಮ ತಂದಿದೆ’ ಎಂದು ಹೆಬ್ರಿಯ ಹಿರಿಯ ಧಾರ್ಮಿಕ ಮುಂದಾಳು ಎಚ್. ಭಾಸ್ಕರ ಜೋಯಿಸ್ ಹೇಳಿದರು.
ಹೆಬ್ರಿಯ ಚೈತನ್ಯ ಯುವ ವೃಂದ ಮತ್ತು ವಿವಿಧ ಸಂಘ–ಸಂಸ್ಥೆಗಳ ವತಿಯಿಂದ ಶುಕ್ರವಾರ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್. ಜನಾರ್ದನ್ ಅವರಿಗೆ ನಡೆದ ಸಾರ್ವಜನಿಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹೆಬ್ರಿ ಜನಾರ್ದನ್, ‘ಪ್ರಶಸ್ತಿಯು ನನ್ನ ಪ್ರಾಮಾಣಿಕ ಜನಸೇವೆಗೆ ದೊರೆತ ಮನ್ನಣೆ ಎಂದು ಭಾವಿಸುತ್ತೇನೆ. ಇನ್ನಷ್ಟು ಜನಸೇವೆ ಮಾಡಲು ಪ್ರಶಸ್ತಿ ಪ್ರೇರಣೆಯಾಗಿದೆ’ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲ್ಲೂಕು ಘಟಕದ ಜನಜಾಗೃತಿ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲ್ಲೂಕು ಘಟಕ, ಮದಗ ಫೌಂಡೇಷನ್, ಚೈತನ್ಯ ಮಹಿಳಾ ವೃಂದ, ಹೆಬ್ರಿ ಹೆಗ್ಗಡೆ ಸಮಾಜ ಸೇವಾ ಸಂಘ, ಜೇಸಿಐ, ಸೀನಿಯರ್ ಚೇಂಬರ್ ಹೆಬ್ರಿ ಸಹಿತ ವಿವಿಧ ಸಂಘ–ಸಂಸ್ಥೆಗಳಿಂದ ಸಾರ್ವಜನಿಕ ಸನ್ಮಾನ ನಡೆಯಿತು. ಇದೇ ಸಂದರ್ಭ ಹೆಬ್ರಿ ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ ಶೇರಿಗಾರ್ ಅವರನ್ನು ಸನ್ಮಾನಿಸಲಾಯಿತು.

ಹೆಬ್ರಿ ಚೈತನ್ಯ ಯುವ ವೃಂದದ ಅಧ್ಯಕ್ಷ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಬಂಗೇರ, ಉದ್ಯಮಿ ಹೆಬ್ರಿ ಸತೀಶ ಪೈ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲ್ಲೂಕು ಘಟಕದ ಯೋಜನಾಧಿಕಾರಿ ಲೀಲಾವತಿ, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವಿದ್ಯಾಧರ ಹೆಗ್ಡೆ, ಹೆಬ್ರಿ ಚೈತನ್ಯ ಯುವ ವೃಂದದ ಸ್ಥಾಪಕಾಧ್ಯಕ್ಷ ಪ್ರಕಾಶ ಮಲ್ಯ, ಕಾರ್ಯದರ್ಶಿ ಮಠದಬೆಟ್ಟು ರಾಜೇಶ ಆಚಾರ್ಯ, ಕೋಶಾಧಿಕಾರಿ ಪ್ರಸಾದ್ ಶೆಟ್ಟಿ ಇದ್ದರು. ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಸಾದ್ ಶೆಟ್ಟಿ ಬಾಸರಬೆಟ್ಟು ನಿರೂಪಿಸಿದರು. ನಿತೀಶ್ ಎಸ್.ಪಿ ವಂದಿಸಿದರು.
Publisher: ಕನ್ನಡ ನಾಡು | Kannada Naadu