ಮಂಗಳೂರು : ಚಂಪಾಷಷ್ಠಿ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಮಣ್ಯದಲ್ಲಿ ರಥೋತ್ಸವ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಮಣ್ಯಕ್ಕೆ ಅಮೆರಿಕಾದ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಅವರ ಬಿಸಿನೆಸ್ ಪಾರ್ಟ್ನರ್ ಶಶಿಭೂಷಣ್ ಭೇಟಿ ನೀಡಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಹೈದರಾಬಾದ್ ಮೂಲದ ಶಶಿಭೂಷಣ್ ಅವರು ಅಮೆರಿಕಾದಲ್ಲಿ ನೆಲೆಸಿದ್ದಾರೆ.
ಶಶಿಭೂಷಣ್ ಅಮೆರಿಕಾದಲ್ಲಿ 500 ಎಕರೆ ಜಾಗದಲ್ಲಿ 3000 ಕೋಟಿ ವೆಚ್ಚದಲ್ಲಿ ಶಂಕರಾಚಾರ್ಯರ ಆಧ್ಯಾತ್ಮಿಕ ಕೇಂದ್ರ ಮತ್ತು ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಶಶಿಭೂಷಣ್ ಅವರು ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ‘ಎ’ ಪ್ಯಾಕ್ ಮುನ್ನೆಡಿಸಿದ್ದಾರೆ. ಟ್ರಂಪ್ ಗೆಲುವಿನಲ್ಲಿ ಎ ಪ್ಯಾಕ್ ಸಾಕಷ್ಟು ಶ್ರಮ ವಹಿಸಿದೆ.
ಸುಬ್ರಮಣ್ಯ ಸ್ವಾಮಿ ದರ್ಶನ ಬಳಿಕ ಮಾತನಾಡಿದ ಶಶಿಭೂಷಣ್, ಕುಕ್ಕೆ ಸುಬ್ರಹ್ಮಣ್ಯ ಅತ್ಯಂತ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಬಂದು ಪುಳಕಿತನಾಗಿದ್ದೇನೆ. ಸನಾತನ ಧರ್ಮ ಉಳಿಸಲು ಅಮೇರಿಕಾದಲ್ಲಿ 500 ಎಕರೆ ಜಾಗದಲ್ಲಿ ಸನಾತನ ಧಾರ್ಮಿಕ ಕೇಂದ್ರ ಕಟ್ಟಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರಿಂದ ಸನಾತನ ಧರ್ಮಕ್ಕೆ ಒಳ್ಳೆಯದಾಗಲಿದೆ.
ಚಂಪಾಷಷ್ಠಿ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 6.57ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಉಮಮಹೇಶ್ವರ ಸ್ವಾಮೀಯ ಬ್ರಹ್ಮರಥೋತ್ಸವ ನಡೆಯಿತು. ಶುಕ್ರವಾರ (ಡಿ.06) ರಾತ್ರಿ ಚಂಪಾಷಷ್ಠಿ ಹಿನ್ನಲೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ತಂದು ಮೆರವಣಿಗೆ ಮಾಡಲಾಯಿತು. ಪಟಾಕಿ ಸಿಡಿಸುವುದನ್ನು ನೋಡಲು ಮದ್ಯರಾತ್ರಿ 2 ಗಂಟೆವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
Publisher: ಕನ್ನಡ ನಾಡು | Kannada Naadu