ಕನ್ನಡ ನಾಡು | Kannada Naadu

ಕಡಿಯಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಬಿ.ವಿಜಯ ರಾಘವ ರಾವ್

07 Dec, 2024

ಉಡುಪಿ: ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಬಿ.ವಿಜಯರಾಘವ ರಾವ್ ಇಂದು (06.12.2024) ಅಧಿಕಾರ ಸ್ವೀಕರಿಸಿದರು. ನೂತನ ವ್ಯವಸ್ಥಾಪನ ಸಮಿತಿಗೆ 9 ಮಂದಿ ಒಳಗೊಂಡ ವ್ಯವಸ್ಥಾಪನ ಸಮಿತಿಯನ್ನು ರಚಿಸಲಾಗಿದೆ.

      ಶ್ರೀಮಹಿಷಮರ್ದಿನಿ ದೇವರ ಸಮ್ಮುಖದಲ್ಲಿ  ಆಡಳಿತಾಧಿಕಾರಿಗಳಾದ ಮಾರುತಿರವರು ಅಧಿಕಾರವನ್ನು ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿದರು.ನೂತನ ಸಮಿತಿಯ ಸದಸ್ಯರಾಗಿ ಸದಾಶಿವ ದೊಮ್ಮಣ್ಣ ಶೆಟ್ಟಿ ಸಂತೆಕಟ್ಟೆ, ರವಿರಾಜ್ ಆಚಾರ್ಯ ಕುಂಜಿಬೆಟ್ಟು, ಪ್ರಶಾಂತ ಸಗ್ರಿ, ಪ್ರವೀಣ್ ಕುಮಾ‌ರ್, ಸುಜಾತ, ಶಾರದ, ರಮೇಶ್, ಮುರಳಿಕೃಷ್ಣ ಉಪಾಧ್ಯಾಯ ಹಾಜರಿದ್ದರು.

          ನೂತವಾಗಿ ಆಯ್ಕೆಗೊಂಡ ಸಮಿತಿಗೆ ಕಾಂಗ್ರೆಸ್ ಪಕ್ಷದ ಮುಖಂಡರಾದ ಪ್ರಸಾದ್ರಾಜ್ ಕಾಂಚನ್, ಶಶಿರಾಜ್ ಕುಂದರ್, ಪ್ರಕಾಶ್ ಕಾರಂತ್, ನಗರಸಭೆಯ ಮಾಜಿ ಸದಸ್ಯರಾದ ಲತಾ ಆನಂದ ಶೇರಿಗಾರ್, ಭಾಸ್ಕರ್ ರಾವ್ ಕಿದಿಯೂರು, ಕೆ.ಮುರಳೀಧರ ಭಟ್, ಜಗದೀಶ್ ಧನ್ಯ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಣಾಧಿಕಾರಿಗಳಾದ ಸವಿತಾ ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by