ಕನ್ನಡ ನಾಡು | Kannada Naadu

ಹಿರಿಯ ಕಲಾವಿದೆ ದಿ. ಲೀಲಾವತಿಯವರ ಸ್ಮಾರಕಕ್ಕೆ ಭೇಟಿಕೋಟ್ಟು ಶ್ರದ್ದಾಂಜಲಿ ಅರ್ಪಿಸಿದ ಚಲನಚಿತ್ರ ಪೋಷಕ ಕಲಾವಿದರ ಸಂಘದ ಸದಸ್ಯರು.

07 Dec, 2024

 

 


ಬೆಂಗಳೂರು - ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ  ದಕ್ಷಿಣ ಭಾರತದಹೆಸರಾಂತ ವರನಟಿ ಡಾ. ಎಂ ಲೀಲಾವತಿ ಚಿತ್ರರಂಗವನ್ನಗಲಿ ಒಂದು ವರ್ಷವಾಯಿತು.  ಅವರ ಪುಣ್ಯಸ್ಮರಣಿಯ ನಿಮಿತ್ತ ಮಗ ವಿನೋದ್ ರಾಜ್  ಹುಟ್ಟೋರು ಸೋಲದೇವನಹಳ್ಳಿಯಲ್ಲಿ ಪ್ರೀತಿಯ ಅಮ್ಮನ ಸ್ಮಾರಕ  ಮತ್ತು ಅವರ ನೆನಪಿನ ಸಂಗ್ರಹ ನಿರ್ಮಿಸಿದ್ದಾರೆ   ವೀಕ್ಷಿಸಲು ಬರುವವರಿಗೆ ನಿತ್ಯ ದಾಸೋಹವಿದೆ.


ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಚುನಾಯಿತ ಅಧ್ಯಕ್ಷರಾದ  ಪದ್ಮಿನಿ ನಂದಾ, ಹಂಗಾಮಿ ಕಾರ್ಯದರ್ಶಿ ಹಿರಿಯ ಹಾಸ್ಯ ಕಲಾವಿದ ಮೂಗ್ ಸುರೇಶ್, ಆಡಳಿತ ಮಂಡಳಿಯ ಸದಸ್ಯರು, ಅನೇಕ 
ಸದಸ್ಯ ಕಲಾವಿದರು ಹಿರಿಯ ಕಲಾವಿದರು ಇಂದು ಸ್ಮಾರಕಕ್ಕೆ ಭೇಟಿಕೋಟ್ಟು ಹೃದಯಪೂರ್ವಕ ಶ್ರದ್ಧಾಂಜಲಿ ಅರ್ಪಿಸಿ ಸ್ಮಾರಕ ಹಾಗೂ ಅವರ ಚಲನಚಿತ್ರ ಕ್ಷೇತ್ರದ ಸಂಗ್ರಹವನ್ನ ವೀಕ್ಷಿಸಿದರು. ಈ ಸಂದರ್ಭದಲ್ಲಿ ವಿನೋದ್ ರಾಜ್ ಅವರು ಸಲ್ಲಿಸುತ್ತಿರುವ ಸಾಮಾಜಿಕ ರೈತ ಸೇವೆ ಹಾಗೂ ಚಿತ್ರರಂಗದ ಕಲಾವಿದರ ಸೇವೆಗಾಗಿ ಪೋಷಕ ಕಲಾವಿದರ ಸಂಘದವತಿಯಿಂದ ಆತ್ಮೀಯವಾಗಿ ಸತ್ಕಾರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಟ ವಿನೋದ್ ರಾಜ್ ಅಮ್ಮನವರು ಚಿತ್ರಕ್ಷೇತ್ರದಲ್ಲಿ ನಡೆದುಬಂದ ದಾರಿಯನ್ನ, ಅವರು ರೈತರ ಮತ್ತು ಕಲಾವಿದರ ಬಗ್ಗೆ ಇಟ್ಟಿದ್ದ ಕಾಳಜಿಯನ್ನ ವಿವರಿಸಿದರು.  ನಟ ಗಾಯಕ ಪೋಷಕ ಕಲಾವಿದರು ವಿಜಯಕುಮಾರ್ ಚಿತೋರಿ ಅವರ ಜೊತೆಗೂಡಿ ಗಾಯನದ ಮುಖಾಂತರ ಶ್ರದ್ಧಾಂಜಲಿ ಅರ್ಪಿಸಿದರು

Publisher: ಕನ್ನಡ ನಾಡು | Kannada Naadu

Login to Give your comment
Powered by