ಕನ್ನಡ ನಾಡು | Kannada Naadu

ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ : ಷಷ್ಟಿ ಮಹೋತ್ಸವ ಆಚರಣೆ

05 Dec, 2024



 
ಉಡುಪಿ : ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ವಲ್ಲಿ ದೇವಯಾನಿ ಸಹಿತ ಷಟ್ ಶಿರ ಸುಬ್ರಮಣ್ಯ ಸ್ವಾಮಿಯ ಸನ್ನಿಧಾನದಲ್ಲಿ ತಾರೀಕು 7ರಂದು ಚಂಪಾಷಷ್ಟಿಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ.

 ಆ ಪ್ರಯುಕ್ತ ಪಂಚವೀಂಷತಿ ಕಲಶಾರಾಧನೆ, ಪವಮಾನ ಕಲಶಾ ಅಭಿಷೇಕ ಶ್ರೀ ಸುಬ್ರಮಣ್ಯ ಸಹಸ್ರನಾಮ ಪಾಯಸ ಹೋಮ ಬ್ರಾಹ್ಮಣ ಸುವಾಸಿನಿ ಆರಾಧನೆ ಬ್ರಾಹ್ಮಣರಾಧನೆ, ಪ್ರಸನ್ನ ಪೂಜೆ ಅನ್ನ ಸಂತರ್ಪಣೆ ನೆರವೇರಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ

Publisher: ಕನ್ನಡ ನಾಡು | Kannada Naadu

Login to Give your comment
Powered by