ಬೆಂಗಳೂರು : ವಿಶ್ವದಾದ್ಯಂತ್ಯ ಪ್ರತಿ ವರ್ಷ ಡಿಸೆಂಬರ್ 5ರಂದು ವಿಶ್ವ ಮಣ್ಣು ದಿನವನ್ನು ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಮಣ್ಣು ವಿಜ್ಞಾನ ಒಕ್ಕೂಟವು 2002ರಲ್ಲಿ ಮಣ್ಣಿನ ಪ್ರಾಮುಖ್ಯತೆ ಕುರಿತು ಪ್ರಚಾರ ಪಡಿಸಲು ಡಿಸೆಂಬರ್ 5ರಂದು ವಿಶ್ವ ಮಣ್ಣು ದಿನ ಆಚರಿಸಲು ನಿರ್ಧರಿಸಿತು. 2012 ಡಿಸೆಂಬರ್ 20ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಆಹಾರ ಭದ್ರತೆ, ಹವಾಮಾನ ವೈಪರೀತ್ಯ, ಸುಸ್ಥಿರ ಅಭಿವೃದ್ಧಿಗೆ ಮಣ್ಣಿನ ಕೊಡುಗೆಯನ್ನು ಪರಿಗಣಿಸಿ ಡಿಸೆಂಬರ್ 5 ವಿಶ್ವ ಮಣ್ಣು ದಿನವಾಗಿ ಆಚರಿಸಲು ಘೋಷಿಸಿತು.
ಅಂದಿನಿಂದ ಪ್ರತಿ ವರ್ಷ ವಿಶ್ವ ಮಣ್ಣು ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಘೋಷವಾಕ್ಯವೆಂದರೆ “ಮಣ್ಣಿನಆರೈಕೆ”. ಶೇಕಡಾ 95ರಷ್ಟು ಆಹಾರ ಮಣ್ಣಿನ ಮೂಲದಿಂದ ಬಂದಿದೆ. ಒಂದು ಸೆಂಟಿಮೀಟರ್ ಮಣ್ಣು ನಿರ್ಮಾಣವಾಗಲು ಒಂದು ಸಾವಿರ ವರ್ಷ ಬೇಕಾಗುತ್ತದೆ. ಒಂದು ಚಮಚ ಮಣ್ಣಿನಲ್ಲಿ ಒಂಬತ್ತು ಮಿಲಿಯನ್ ಸೂಕ್ಷ್ಮಾಣು ಜೀವಿಗಳಿರುತ್ತವೆ. ಪಂಚಭೂತಗಳಲ್ಲಿ ಒಂದಾಗಿರುವ ಮಣ್ಣನ್ನು ಸಂರಕ್ಷಿಸಿ ಮಾನವಕಲ್ಯಾಣಕ್ಕೆ ನಾಂದಿಯಾಗಬೇಕು. ಮಣ್ಣು ಪ್ರತಿಜೀವಸಂಕುಲಕ್ಕೂ ಅತ್ಯಗತ್ಯ. ವಿಶ್ವದ ಎಲ್ಲೆಡೆ ಶೇ.33 ರಷ್ಟು ಮಣ್ಣಿನ ಫಲವತ್ತತೆ ಕುಸಿದಿದ್ದು 2050ಕ್ಕೆ ಶೇ.50 ರಷ್ಟು ಮಣ್ಣಿನ ಫಲವತ್ತತೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.
ಮಣ್ಣಿನ ಸವಕಳಿ, ಮಾಲಿನ್ಯ ಮತ್ತು ಪೋಷಕಾಂಶಗಳ ಕೊರತೆ ಆಹಾರ ಭದ್ರತೆಗೆ ಬಹುದೊಡ್ಡ ಧಕ್ಕೆಯನ್ನು ತರುತ್ತವೆ ಹಾಗೂ ರೈತರ ಬಡತನಕ್ಕೆ ಪರೋಕ್ಷ ಕಾರಣವಾಗುತ್ತದೆ. ಮಣ್ಣು ಎಂಬುದು ಘನ, ದ್ರÀ್ರವ ಹಾಗೂ ಅನಿಲ ರೂಪದ ವಸ್ತುಗಳಿಂದ ಕೂಡಿರುವ ಸಂಕೀರ್ಣ ವ್ಯವಸ್ಥೆ. ಈ ಘನವಸ್ತುಗಳು ವ್ಯತ್ಯಾಸ ಹೊಂದುವ ಖನಿಜ ವಸ್ತುಗಳನ್ನು ಒಳಗೊಂಡಿರುತ್ತದೆ. ಈ ಖನಿಜ ವಸ್ತುಗಳು ಕಣ್ಣಿಗೆಕಾಣುವ ಹಾಗೂ ಕಾಣದಷ್ಟು ಸೂಕ್ಷ್ಮವಾಗಿಯೂ ಇರುತ್ತವೆ. ಲಕ್ಷಾಂತರ ನಿರ್ಜೀವಿ ಹಾಗೂ ಸಜೀವಿ ಸೂಕ್ಷ್ಮ ಜೀವಿಗಳನ್ನು ಒಳಗೊಂಡಿರುತ್ತದೆ. ಗಾಳಿ ಮತ್ತು ನೀರು ಮಣ್ಣಿನಲ್ಲಿರುವ ನಿರ್ವಾತವನ್ನು ಆಕ್ರಮಿಸುತ್ತವೆ. ಮಣ್ಣಿನ ಸಾಮಥ್ರ್ಯವೇ ಜೀವ ಸೃಷ್ಟಿಗೆ ಕಾರಣವಾಗಿದೆ. ಮಣ್ಣು ಭೂಮಿಯ ಮೇಲ್ಮೈ ಪದರವಾಗಿದ್ದು, ಸಾವಯವ ಮತ್ತು ಅಜೈವಿಕ ವಸ್ತುಗಳನ್ನು ಒಳಗೊಂಡಿದೆ.
ಸಸ್ಯಗಳ ಬೆಳವಣಿಗೆಗೆ ನೆರವು ನೀಡುವ ಮಣ್ಣು ಜಗತ್ತಿನ ಆಹಾರ ಭದ್ರತೆಗೆ ಮಹತ್ತರವಾದÀ ಕೊಡುಗೆ ನೀಡುತ್ತಿದೆ. ಮಣ್ಣಿಲ್ಲದೆ ಜೀವ ಸಂಕುಲವಿಲ್ಲ ಎಂದರೆ ಅದರ ಮಹತ್ವ ಎಷ್ಟಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಇಂದಿನ ಮಾಲಿನ್ಯದ ಯುಗದಲ್ಲಿ ಮಣ್ಣಿನ ಫಲವತ್ತತೆಯನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿದೆ. ಆದರೆ ಮನುಕುಲದ ಭವಿಷ್ಯದ ದೃಷ್ಟಿಯಿಂದ ಇಂದಿನಿಂದಲೇ ಮಣ್ಣಿನ ಮೇಲೆ ಮತ್ತಷ್ಟು ಕಾಳಜಿ ಮೂಡಿಸುವ ದೃಷ್ಟಿಯಿಂದ ವಿಶ್ವ ಮಣ್ಣು ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಮಣ್ಣಿನ ಅಸರ್ಮಪಕ ನಿರ್ವಹಣೆಯಿಂದಾಗಿ ಪ್ರಸ್ತುತ ವಿಶ್ವದಲ್ಲಿ 6.13 ಬಿಲಿಯನ್ ಹೆಕ್ಟೇರ್ ಪ್ರದೇಶವು ಚೌಳು ಮತ್ತು ಕ್ಷಾರ ಸಮಸ್ಯಾತ್ಮಕ ಮಣ್ಣಾಗಿದೆ. ನಮ್ಮ ದೇಶದಲ್ಲಿ 24.63 ಮಿಲಿಯನ್ ಹೆಕ್ಟೇರ್ ಪ್ರದೇಶವು ಸಮಸ್ಯಾತ್ಮಕ ಮಣ್ಣಾಗಿದೆ ಮತ್ತು ಕರ್ನಾಟಕದಲ್ಲಿ 5 ಲಕ್ಷ ಹೆಕ್ಟೇರ್ ಪ್ರದೇಶವು ಚೌಳು ಮತ್ತು ಕ್ಷಾರ ಸಮಸ್ಯಾತ್ಮಕ ಮಣ್ಣಾಗಿ ಬೆಳೆಗಳನ್ನು ಬೆಳೆಯಲು ನಿರುಪಯುಕ್ತ ಮಣ್ಣಾಗಿ ಪರಿಣಮಿಸಿದೆ. ಈ ಸಮಸ್ಯಾತ್ಮಕ ಮಣ್ಣುಗಳ ಸುಧಾರಣೆಗೆ ಬಸಿಗಾಲುವೆಗಳ ನಿರ್ಮಾಣ, ಹಸಿರೆಲೆ ಗೊಬ್ಬರ ಬೆಳೆಯುವುದು. ಜಿಪ್ಸ್‍ಂ ಬಳಕೆ, ಸಾವಯವ ಗೊಬ್ಬರಗಳ ಉಪಯೋಗ, ಆಳವಾದ ಉಳುಮೆ ಮುಂತಾದ ಬೇಸಾಯ ಕ್ರಮಗಳನ್ನು ಕೈಗೊಳ್ಳುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಮುಂದುವರೆದು, ಮಣ್ಣಿನ ಆರೋಗ್ಯ ಕಾಪಾಡುವುದರ ಜೊತೆಗೆ ಆಹಾರ ಭದ್ರತೆಯನ್ನು ಹೆಚ್ಚಿಸುವುದು. ಸಾವಯವ ಗೊಬ್ಬರಗಳ ಬಳಕೆ ಮಣ್ಣು ಪರೀಕ್ಷೆ ಮತ್ತು ಮಣ್ಣಿನ ಫಲವತ್ತತೆಯ ಶಕ್ತಿಯನ್ನು ಹೆಚ್ಚಿಸುವುದು ಹಾಗೂ ಸಾರ್ವಜನಕರಲ್ಲಿ ಮಣ್ಣಿನ ಮಹತ್ವದ ಬಗ್ಗೆ ಅರಿವು ಮೂಡಿಸುವುದಾಗಿದೆ.
Publisher: ಕನ್ನಡ ನಾಡು | Kannada Naadu