ಬೆಂಗಳೂರು : ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ರಕ್ಷಣಾ ಪಡೆಯ ಮುಖ್ಯಸ್ಥರು, ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ನಾಗರಿಕ ಮಿಲಿಟರಿ ಸಂಪರ್ಕ ಜಂಟಿ ಸಮನ್ವಯ ಸಭೆಯನ್ನು ನವೆಂಬರ್ 03ರಂದು ನಡೆಸಲಾಯಿತು.
ಸಭೆಯಲ್ಲಿ ರಕ್ಷಣಾ ಇಲಾಖೆಯ ಜಮೀನುಗಳಿಗೆ ಸಂಬಂಧಿಸಿದಂತೆ ಒತ್ತುವರಿ ತೆರವು, ಸಂಪರ್ಕ ರಸ್ತೆ, ಕಂದಾಯ ದಾಖಲೆಗಳ ಹಕ್ಕು ವರ್ಗಾವಣೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ, ತ್ಯಾಜ್ಯ ವಿಲೇವಾರಿ ಇನ್ನಿತರ ವಿಷಯಗಳ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕಂದಾಯ, ಒಳಾಡಳಿತ, ಬಿಬಿಎಂಪಿ, ಬಿಡಬ್ಲ್ಯೂಎಸ್‍ಎಸ್‍ಬಿ, ಅರಣ್ಯ, ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಹಾಗೂ ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಯಿತು.
ಸಭೆಯಲ್ಲಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿ ಎಸ್.ಆರ್.ಉಮಾಶಂಕರ್, ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮುಖ್ಯ ಆಯುಕ್ತ ತುμÁರ್ ಗಿರಿನಾಥ, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ, ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರರಾವ್, ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರವಿ.ಎಸ್, ಅರಣ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ.ಸಿ.ರೇ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಂತೇಶ ಬೀಳಗಿ, ಬಿಡಬ್ಲ್ಯೂಎಸ್‍ಎಸ್‍ಬಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಮುಂತಾದವರು ಹಾಜರಿದ್ದರು.
ರಕ್ಷಣಾ ಇಲಾಖೆಗಳಿಂದ ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ, ಬ್ರಿಗೇಡಿಯರ್ ರಂಜೀತ್ ಆಳ್ವ, ಬ್ರಿಗೇಡಿಯರ್ ಬಿಜುಶಾಂತಾರಾಮ್, ಮೇಜರ್ ವರುಣ್ ಯಾದವ್, ಕರ್ನಲ್ ಪುನೀತ್ ಭಾರದ್ವಾಜ್, ಕರ್ನಲ್ ರಜಾ ಇಸ್ರೇಲ್, ಕರ್ನಲ್ ಮಹದೇವ್ ನಾಯರ್, ಕರ್ನಲ್ ಕೆ.ಪಿ.ರಾಜೇಂದ್ರಕುಮಾರ್, ಕರ್ನಲ್ ಅರ್ಪಿತ್ ಥಾಪ, ಶ್ರೀಮತಿ ದಿವ್ಯ. ಎಸ್ ಹೊಸೂರು, ಐಡಿಇಎಸ್, ಡಿಇಓ ಕರ್ನಾಟಕ ಮುಂತಾದವರು ಹಾಗೂ ನೌಕಾಪಡೆಯಿಂದ ಶ್ರೀಮತಿ ಪ್ರತಿಭಾ, ಕಮ್ಯಾಂಡೆಂಟ್ ಹಾಜರಿದ್ದರು.
Publisher: ಕನ್ನಡ ನಾಡು | Kannada Naadu