ಕನ್ನಡ ನಾಡು | Kannada Naadu

ಜಟ್ರೋಫಾ ಹಣ್ಣು ಸೇವಿಸುವ ಮುನ್ನ ಎಚ್ಚರಿಕೆ ಅಗತ್ಯ ಎಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ

03 Dec, 2024

 

ಬೆಂಗಳೂರು : ವಿಷಪೂರಿತ ಕಾಯಿ ತಿಂದು 12 ಮಂದಿ ಅಸ್ವಸ್ಥ" ಎಂಬ ಶೀರ್ಷಿಕೆಯಡಿ ಪತ್ರಿಕೆಗಳಲ್ಲಿ ಪ್ರಕಟವಾದ ವಿಷಯಕ್ಕೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಸ್ಪಷ್ಟನೆ ನೀಡಿದ್ದು, ಜಟ್ರೋಫಾ ಸಸ್ಯದ ಎಲ್ಲಾ ಭಾಗಗಳು ವಿಷಪೂರಿತವಾಗಿದ್ದರೂ, ಬೀಜಗಳು ರಿಸಿನ್‍ನ ಹೆಚ್ಚಿನ ಸಾಂದ್ರತೆಯನ್ನು ಹೊಂದಿದ್ದು, ಹೆಚ್ಚು ವಿಷಕಾರಿಯಾಗಿದೆ. ಬೀಜಗಳ ಸೇವನೆಯ ನಂತರದ ಪ್ರತಿಕೂಲ ಪರಿಣಾಮಗಳೆಂದರೆ ವಾಂತಿ, ಅತಿಸಾರ, ಹೊಟ್ಟೆ ನೋವು ಮತ್ತು ಗಂಟಲಿನಲ್ಲಿ ಸುಡುವ ಸಂವೇದನೆ. ಸೇವಿಸಿದ ಹದಿನೈದು ನಿಮಿಷಗಳಲ್ಲಿ ವಾಂತಿ ಮತ್ತು ಭೇದಿ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

ಜಟ್ರೋಫಾ ಸಸ್ಯವು ಸಾಮಾನ್ಯವಾಗಿ ಉಷ್ಣವಲಯದ ನಿತ್ಯಹರಿದ್ವರ್ಣ ಸಸ್ಯವಾಗಿದ್ದು ತೆಳುವಾದ ಕಾಂಡಗಳು ಮತ್ತು ಬಹು ಕಾಂಡಗಳನ್ನು ಹೊಂದಿದೆ. ಇದು ಸಾಮಾನ್ಯವಾಗಿ ಉಷ್ಣವಲಯದ ಮತ್ತು ಉಪೆÇೀಷ್ಣವಲಯದ ಪ್ರದೇಶಗಳಲ್ಲಿ, ವಿಶೇಷವಾಗಿ ಭಾರತದಲ್ಲಿ ಕಂಡುಬರುತ್ತದೆ.

ಜಟ್ರೋಫಾ ಹಣ್ಣಿನ ಸೇವನೆಯಿಂದ ವಾಂತಿ, ಭೇದಿ, ಹೊಟ್ಟೆ ನೋವು ಮತ್ತು ಗಂಟಲಿನಲ್ಲಿ ಸುಡುವ ಸಂವೇದನೆ ರೋಗ ಲಕ್ಷಣಗಳು ಉಂಟಾಗುತ್ತದೆ ಹಾಗೂ ಸೇವಿಸಿದ 15 ನಿಮಿಷಗಳಲ್ಲಿ ವಾಂತಿ ಮತ್ತು ಅತಿಸಾರ ಪ್ರಾರಂಭವಾಗಬಹುದು. ಅಲ್ಲದೆ ಬೀಜಗಳು ಆಕರ್ಷಕ ಮತ್ತು ಆಹ್ಲಾದಕರ ರುಚಿಯನ್ನು ಹೊಂದಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ.

ವಿಷಪೂರಿತ ಹಣ್ಣುಗಳ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇಂತಹ ವಿಷಪೂರಿತ ಹಣ್ಣುಗಳ ಸೇವಿಸಬಾರದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by