ಕನ್ನಡ ನಾಡು | Kannada Naadu

ಗ್ರಂಥಾಲಯದಲ್ಲಿ ಉಚಿತ ತರಬೇತಿ ಕಾರ್ಯಾಗಾರ

11 Nov, 2024


ಉಡುಪಿ: ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಉಡುಪಿ ಹಾಗೂ ರಾಜ್ಯ ಶಾಸ್ತ್ರ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲ್ಪಡುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಕುರಿತು ಉಚಿತ ತರಬೇತಿಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭವನ್ನು ಶನಿವಾರದಂದು ಉಡುಪಿ ನಗರ ಕೇಂದ್ರ ಗ್ರಂಥಾಲಯ ಇಲ್ಲಿಯ ವಿದ್ಯಾ ವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ಸ್ಮಾ​ರಕ ನಗರ ಕೇಂದ್ರ ಗ್ರಂಥಾಲಯದ ಅಜ್ಜರಕಾಡು ಇಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಶ್ರೀ ಪ್ರಭಾಕರ ಪೂಜಾರಿ ಗುಂಡಿಬೈಲುಅಧ್ಯಕ್ಷರು ನಗರಸಭೆ ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ​ ಕಾರ್ಯಕ್ರಮ​ ವನ್ನು ಉದ್ಘಾಟಿಸಿದರು​. ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ತರಬೇತಿಗಳನ್ನು ಮಾಡುತ್ತಿರುವುದು ಶ್ಗಾಘನೀಯ​ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು. 

ಇನ್ನೊರ್ವ ಮುಖ್ಯ​ ಅತಿಥಿ ರಶ್ಮಿ ಚಿತ್ತರಂಜನ್ ಭಟ್ ನಗರ ಸಭಾ ಸದಸ್ಯರು ಅಜ್ಜರಕಾಡು ವಾರ್ಡ್ ಇವರು​ ಮಾತನಾಡುತ್ತ ಸಕರಾತ್ಮನೆ ಯೋಚನೆ, ಶಿಸ್ತು, ಜೀವನದಲ್ಲಿ ರೂಢಿಸಿಕೊಳ್ಳಿ, ಇಂತಹ ಉತ್ತಮ​ ಕಾರ್ಯಗಾರವನ್ನು ನೀಡುತ್ತಿರುವುದು ನಿಜ್ಜಕೂ ಪ್ರಶಂಶಿಸುವ ವಿಷಯ ಎಂದರು. ಶ್ರಿ ನಿತ್ಯಾನಂದ ವಿ​ ಗಾಂವ್ಕರ್ ಪ್ರಾಂಶುಪಾಲರು ಸ.ಪ್ರ.ದ.ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕ ನಿಡಿಯೂರು​ ಉಡುಪಿ ಇವರು ಯಾವುದೇ ಕಾರ್ಯಕ್ರಮ ಯಶಸಿಯಾಗಬೇಕಾದರೆ ಅದರಲ್ಲಿ ಪಾಲ್ಗೊಳ್ಳು​ವವರ ಮನಸ್ಥಿತಿ​ ಆಸಕ್ತಿ ತುಂಬಾ ಮುಖ್ಯ .

ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ನೌಕರಿಯಾದರೆ ಅವನನ್ನೆ ನಂಬಿಕೊ​೦ಡು ಇರುವ​ ಇಡೀ ಕುಟುಂಬಕ್ಕೆ ಆದಾರ. ಇಲ್ಲಿ ನಡೆಯುತ್ತಿರುವ ೩೫ ಗಂಟೆಗಳ ತರಬೇತಿಯನ್ನು ಚೆನ್ನಾಗಿ ಉಪಯೋಗ​ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ಪಶ್ರಾಂತ್ ನೀಲಾವರ ಮುಖ್ಯಸ್ಥರು ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇವರು​ ಸ್ಪರ್ಧಾತ್ಮಕ ಪರೀಕ್ಟೆಯ ತಯಾರಿಯ ಬಗ್ಗೆ ಬೋಧನೆ ಮಾಡಿದರು. ಜಿಲ್ಲಾ ಮುಖ್ಯ ಗ್ರಂಥಾಲ ಯಾಧಿಕಾರಿ​ ಜಯಶ್ರೀ ಎಂ ಉಪಸ್ಥಿತರಿದ್ದರು.

ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಶ್ರೀಮತಿ ನಳಿನಿ ಜಿ.ಐ ಪ್ರಾಸ್ತಾವಿಕವಾಗಿ​ ಮಾತನಾಡಿ ಸ್ವಾಗತಿಸಿ​ ದರು. ಪ್ರಥಮ ದರ್ಜೆ ಸಹಾಯಕರಾದ ಶಕುಂತಳಾ ಕುಂದರ್ ಇವರು ಅತಿಥಿ ಗಳಿಗೆ​ ವಂದಿಸಿದರು. ಸುನೀತಾ ಬಿ ಎಸ್ ಇವರು ಪ್ರಾರ್ಥಿಸಿದರು. ಗ್ರಂಥಪಾಲಕರಾದ ರಂಜಿತ ಸಿ. ಕಾರ್ಯಕ್ರಮ​ ನಿರೂಪಿಸಿದರು 

Publisher: ಕನ್ನಡ ನಾಡು | Kannada Naadu

Login to Give your comment
Powered by