ಕನ್ನಡ ನಾಡು | Kannada Naadu

ರೇಡಿಯೊ ಮಣಿಪಾಲ್ ನಲ್ಲಿ ಕಥೆ ಕೇಳೋಣದ 132ನೇ ಸಂಚಿಕೆ ಪ್ರಸಾರ

09 Nov, 2024



ಮಣಿಪಾಲ : ಈ ತಿಂಗಳ  ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ 90.4 ಮೆಗಾಹರ್ಟ್ಝ್ ಸಮುದಾಯ ಬಾನುಲಿ ಕೇಂದ್ರವು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಅರ್ಪಿಸುತ್ತಿರುವ ಕಥೆ ಕೇಳೋಣ ಸರಣಿ ಕಾರ್ಯಕ್ರಮದ 132 ನೇ ಸಂಚಿಕೆ ನವೆಂಬರ್ ತಿಂಗಳ ದಿನಾಂಕ 9 ರಂದು ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ. ಈ ಸಂಚಿಕೆಯಲ್ಲಿ ಸಾಹಿತ್ಯಾಸಕ್ತ ವಿದ್ಯಾರ್ಥಿನಿ ನಿರೀಕ್ಷಿತಾ ನೆಲ್ಲಿಗುಡ್ಡೆ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ. ನವೆಂಬರ್ 10 ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು. ರೇಡಿಯೊದಲ್ಲಿ ಮಾತ್ರವಲ್ಲದೆ

 ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal

ಮತ್ತು ಐಫೋನ್ ನ

https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿಕೊಂಡು ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ನ ಪ್ರಕಟಣೆ ತಿಳಿಸಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by