ಬೆಳ್ತಂಗಡಿ: ಕವಿತಾ ಮೀಡಿಯಾ ಸೋರ್ಸ್ ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ನೀಡುವ 'ಸ್ಟಾರ್ ವುಮನ್' ಪ್ರಶಸ್ತಿಯನ್ನು, ಬೆಂಗಳೂರಿನಲ್ಲಿ ನಡೆದ ಕರುನಾಡ ಸಾಧಕರು ಕಲಾ ಪ್ರತಿಭೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಫೌಝಿಯಾ ಹಾಗು ಇತರ ಸಾಧಕರಿಗೆ ಸ್ಟಾರ್ ವುಮನ್ ಅವಾರ್ಡ್-2024 ಪ್ರದಾನ ಮಾಡಲಾಯಿತು.
ಬೆಳ್ತಂಗಡಿಯ ಪೌಝಿಯಾ ಸೇರಿ ಹಲವು ಮಂದಿ ಮಹಿಳಾ ಸಾಧಕರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಇಲ್ಲಿನ ಗುರುವಾಯನಕೆರೆ ನಿವಾಸಿ ಹೈದರ್ ಮತ್ತು ದಿ. ನೆಬಿಸಾ ದಂಪತಿಯ ಪುತ್ರಿಯಾದ ಪೌಝಿಯಾ ಬಹುಮುಖ ಪ್ರತಿಭೆ. ಜೊತೆಗೆ ದೈಹಿಕ 75% ರಷ್ಟು ವಿಶೇಷ ಚೇತನರಾಗಿದ್ದಾರೆ. ಇವರು ಕರ್ನಾಟಕ ರಾಜ್ಯದಲ್ಲಿರುವಂತಹ 6860 ನಗರ ಪುನರ್ವಸತಿ ಕಾರ್ಯಕರ್ತರು, ಗ್ರಾಮೀಣ ಪುನರ್ವಸತಿ ಕಾರ್ಯಕ ರ್ತರು, ತಾಲೂಕಿನ ವಿವಿಧ ದೇಶ ಪುನರ್ವಸತಿ ಕಾರ್ಯಕರ್ತರು, ಇವರ ಸರ್ಕಾರದ ಮಟ್ಟದಲ್ಲಿ ಖಾಯಮಾತಿ ಗೊಳಿಸಬೇಕು ಇಲ್ಲವೇ ಕನಿಷ್ಠ ವೇತನವನ್ನು ಜಾರಿ ಮಾಡಬೇಕು ಎಂಬ ನಿಟ್ಟಿನಲ್ಲಿ ನವ ಕರ್ನಾಟಕ ಯುಅರ್‌ಡಬ್ಲ್ಯೂ ವಿಆರ್‌ಡಬ್ಲ್ಯೂ ಯುಬಿಡಬ್ಲ್ಯೂ ಸಂಘದ ರಾಜ್ಯ ಸಂಚಾಲಕಿಯಾಗಿ ಹೋರಾಟ ಮಾಡುತ್ತಾ ಬಂದಿರುತ್ತಾರೆ.
ಕವಿತಾ ಮೀಡಿಯಾ ಸೋರ್ಸ್ ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಮುಖ್ಯಸ್ತ ಹಾಗೂ ಕಾರ್ಯಕ್ರಮದ ಮುಖ್ಯಸ್ಥ ಡಾ| ಬಿ.ಎನ್.ಹೊರಪೇಟಿ ಅವರು ಮಾಹಿತಿ ನೀಡುತ್ಥಾ ನಿಸ್ವಾರ್ಥವಾಗಿ ಸಮಾಜದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಸಾಧಕಿಯನ್ನು ಗುರುತಿಸಿ, ಅವರನ್ನು ಹುಡುಕಿ ಈ ಪ್ಶಸ್ತಿಗಳನ್ನು ನೀಡುವುದನ್ನು ನಮ್ಮ ಸಂಸ್ಥ ಮಾಡುತ್ತಿದೆ ಎಂದರು.
ಪ್ರಶಸ್ತಿ ಪುರಸ್ಕೃತರಾದ ಫೌಝಿಯಾ, ಬೆಳ್ತಂಗಡಿ ಮಾತನಾಡಿ ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಸಿದೆ. ಜೊತೆಗೆ ನನ್ನ ಹಾಗೆ ಅಎಷ್ಟೋ ವಿಶೇಷ ಚೇತನ ವ್ಯಕ್ತಿಗಳು, ವಿದ್ಯಾಭ್ಯಾಸ ಇಲ್ಲದೆ ಸಮಾಜದಲ್ಲಿ ಇದ್ದಾರೆ. ಕೆಲವರು ತಮ್ಮ ವಿಕಲತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಗೆ ಬದುಕಬೇಕು ಎಂಬ ಯೋಚನೆಯಲ್ಲಿ ಮುಳುಗಿದ್ದಾರೆ. ಅಂಥವರನ್ನು ಈ ಮುಖ್ಯವಾಹಿನಿಗೆ ತರುವುದೇ ನನ್ನ ಮುಂದಿನ ಗುರಿಯಾಗಿದೆ ಎಂದರು.
Publisher: ಕನ್ನಡ ನಾಡು | Kannada Naadu