CreamA Cream article
Article

ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥಾಪನ ದಿನಾಚರಣೆ

ಕನ್ನಡ ನಾಡು


ಉಡುಪಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಉಡುಪಿ ಜಿಲ್ಲಾ ಸಂಸ್ಥೆ ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವಜ್ರ ಮಹೋತ್ಸವದ ಪ್ರಾರಂಭದ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನ ದಿನವನ್ನು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಚರಿಸಲಾಯಿತುಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಸಮ್ಮುಖದಲ್ಲಿ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ, ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು, ಜಿಲ್ಲಾ ಕಾರ್ಯದರ್ಶಿ ಆನಂದ್ ಅಡಿಗ, ಜಿಲ್ಲಾ ಖಜಾಂಚಿ  ಹರಿಪ್ರಸಾದ್ ರೈ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶೇಖರ್ ಪೂಜಾರಿ, ದಳ ನಾಯಕಿಯರು, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ  ಸುಮನ್ ಶೇಖರ್  ಬನ್ನಿ ಕಬ್, ಬುಲ್ ಬುಲ್ ಸ್ಕೌಟ್ಸ್, ಗೈಡ್ಸ್, ರೋವರ್, ರೇಂಜರ್ಸ್ ಸಮ್ಮುಖದಲ್ಲಿ ಧ್ವಜಚೀಟಿಯನ್ನು ಬಿಡುಗಡೆ ಮಾಡಲಾಯಿತು.    ಜಿಲ್ಲಾಧಿಕಾರಿ ಸ್ಕೌಟ್ಸ್ ಗೈಡ್ಸ್ ನಿಧಿಗೆ ದೇಣಿಗೆ ನೀಡುವುದರ ಮೂಲಕ  ಚಾಲನೆ ನೀಡಿದರು. ಅವರೊಂದಿಗೆ ಜಿಲ್ಲಾ ಪದಾಧಿ ಕಾರಿಗಳು ಕೈಜೋಡಿಸಿದರು ಹಾಗೂ ಇತರ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ದೇಣಿಗೆಯನ್ನು ಸಂಗ್ರಹಿಸಲಾಯಿತು,
    

Read More