ಕನ್ನಡ ನಾಡು | Kannada Naadu

ಹಬ್ಬದ ಹಿನ್ನೆಲೆಯಲ್ಲಿ ನಾಯಿಗೆ ಹೊಸ ಬಟ್ಟೆ ತೊಡಿಸಿ ʻಆನಂದʼ ಪಟ್ಟ ʻನಿತ್ಯಾನಂದʼ 

09 Nov, 2024



ಉಡುಪಿ: ಒಂದು ವಾರದ ಹಿಂದೆ ನಡೆದ ದೀಪಾವಳಿ ಸಂದರ್ಭದಲ್ಲಿ ಬಿದಿನಾಯಿಗಳಿಗೆ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದ್ದ ನಿತ್ಯಾನಂದನ ಕೆಲಸವನ್ನು ನೆಟ್ಟಿಗರು ಮೆಚ್ಚಿಕೊಳ್ಳುತ್ತಿದ್ದಾರೆ.
 ಈ ಕುರಿತು ಸಮಾಜ ಸೇವಕ ನಿತ್ಯಾನಂದ ಒಳಕಾಡು  ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ, ಹಬ್ಬದ ಖುಷಿ ಕೇವಲ ಮನುಷ್ಯರಿಗೆ ಮಾತ್ರ ಸಾಕೇ?  ಸಾಕುಪ್ರಾಣಿಗಳಿಗೂ ಬೇಡವೇ? ಅವುಗಳೂ ನಮ್ಮಂತೆ ಸಡಗರ, ಸಂಭ್ರಮಿಸುವುದು ಬೇಡವೇ ಎನ್ನುವ ಮೂಲಕ ಪ್ರಾಣಿ ದಯೆ ತೋರಿಸಿದ್ದು ಈಗ ಮಾದರಿಯಾಗುತ್ತಿದೆ . ಅದಕ್ಕಾಗಿಯೇ ಪ್ರಾಣಿಪ್ರಿಯ ನಿತ್ಯಾನಂದ ಒಳಕಾಡು ನಾಯಿಗೆ ಸ್ನಾನ ಮಾಡಿಸಿ ಹೊಸ‌ ಬಟ್ಟೆ ಉಡಿಸಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದ್ದರು.
ಅವರು ಬೀದಿ ನಾಯಿಗಳಿಗೆ ಹೊಸ‌ ಟಿಶರ್ಟ್‌‌, ಚಡ್ಡಿ‌ ಹಾಕಿಸಿದ್ದರು. ಅವುಗಳು ಉಡುಪಿಯ ಬೀದಿ ಬೀದಿಗಳಲ್ಲಿ ಓಂದು ರೀತಿಯ ಖುಷಿಯಲ್ಲಿ ಓಡಾಡುತ್ತಿರುವುದು ಸಾರ್ವಜನಿಕರ ಗಮನಸೆಳೆಯಿತು. ಒಂದಷ್ಟು ಮಂದಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಕೆಲವರಂತೂ ಮುಸಿ ಮುಸಿ ನಕ್ಕರು. ನಿಜ ಸಂಗತಿ‌ ತಿಳಿದುಬಂದಾಗ ಎಲ್ಲರೂ ವಿಸ್ಮಿತರಾದರು.
    ಈ ಬೀದಿ‌ನಾಯಿ ಕಳೆದ ಎರಡು ವರ್ಷದ ಹಿಂದೆ ವಾಹನ ಅಪಘಾತದಿಂದ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿತ್ತು. ಒಳಕಾಡು ಅವರು ಅದನ್ನು ರಕ್ಷಿಸಿ ಚಿಕಿತ್ಸೆಗೊಳಪಡಿಸಿದ್ದರು. ನಾಯಿಗೆ ಆಹಾರ ನೀಡಿ ಉಪಚರಿಸುತ್ತಿದ್ದರು. ಈ ಮಧ್ಯ ಚಿಕಿತ್ಸೆಪಡೆದ  ನಾಯಿ ಮಾರುತಿ ವೀಥಿಕಾದಲ್ಲಿಯೇ ನೆಲೆ ಕಂಡಿತ್ತು.
ಆ ನಾಯಿಯನ್ನೂ ಸಹ ಸಿಂಗಾರಿಸಿದ್ದು  ನಿತ್ಯಾನಂದ ಒಳಕಾಡು ಅವರ ಶ್ವಾನಪ್ರೀತಿಯನ್ನು ಮೆರೆಯುತ್ತಿದೆ. ನಾಯಿ ಖುಷಿಪಟ್ಟಿತೋ ಗೊತ್ತಿಲ್ಲ, ನಿತ್ಯಾನಂದ ಒಳಕಾಡು ಸೇರಿದಂತೆ ಉಡುಪಿಯ ಕೆಲಜನರು  ಬಹಳ ಸಂತಸಗೊಂಡರು. ಇದನ್ನು ನೆಟ್ಟಿಗರು ಎಲ್ಲರಲ್ಲಿಯೂ ಹಂಚಿಕೊಂಡರು. 

Publisher: ಕನ್ನಡ ನಾಡು | Kannada Naadu

Login to Give your comment
Powered by