ಉಡುಪಿ: ಪ್ರಧಾನ ಮಂತ್ರಿ ಮೋದಿ ಹಿರಿಯ ಸಹೋದರ ಸೋಮು ಭಾಯ್ ಮೋದಿ ಪತ್ನಿ ಚಂದ್ರಿಕಾ ಭಾಯ್ ಮೋದಿ ಜೊತೆಗೂಡಿ ಗುರುವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ದೇವರ ದರ್ಶನ ಪಡೆದರು.
ಬಳಿಕ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಪುತ್ತಿಗೆ ಶ್ರೀಗಳು ನಡೆಸುತ್ತಿರುವ ಗೀತಾ ಲೇಖನ ಯಜ್ಞ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಗೀತಾ ಲೇಖನ ಯಜ್ಞ ದೀಕ್ಷೆ ಪಡೆದರು.
ಗೀತಾ ಮಂದಿರದಲ್ಲಿ ನಡೆಯುತ್ತಿರುವ ಕಾರ್ತಿಕ ತುಳಸಿ ಸಂಕೀರ್ತನೆ ವೀಕ್ಷಿಸಿ, ಸಾಲುದೀಪ ಬೆಳಗಿದರು. ಶ್ರೀಗಳು ಸೋಮು ಭಾಯ್ ಅವರನ್ನು ಗೌರವಿಸಿದರು.
ಸೋಮು ಅವರ ಸ್ನೇಹಿತ ಗೋವಿಂದ ಭಾಯ್, ಖ್ಯಾತ ನೇತ್ರ ತಜ್ಞ ಡಾ. ಕೃಷ್ಣಪ್ರಸಾದ್ ಕೂಡ್ಲು, ಪುತ್ತಿಗೆ ಮಠ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನಾಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ ಮೊದಲಾದವರಿದ್ದರು.
Publisher: ಕನ್ನಡ ನಾಡು | Kannada Naadu