ಕನ್ನಡ ನಾಡು | Kannada Naadu

ʻಒಬ್ಬಂಟೀಕರಣʼ  ಕೃತಿ ಲೋಕಾರ್ಪಣೆಯಲ್ಲಿ ಬರಹಗಾರ್ತಿ ಡಾ. ಪದ್ಮಿನಿ ಕಳವಳ

09 Nov, 2024

ಹೈದರಾಬಾದ್ : ಸಂಘಜೀವಿಯಾಗಿರುವ ಮನುಷ್ಯ ಇಂದು ಸಮಾಜದಲ್ಲಿ ಮನುಷ್ಯ ಒಬ್ಬಂಟಿಗಿರುವುದಕ್ಕೆ ಬಯಸುತ್ತಾರೆ. ಇದು ಆತಂಕಕಾರಿ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

    ಅವರು ಹೈದ್ರಾಬಾದನಲ್ಲಿ ಶ್ರೀ ತಾರಕೇಶ್ವರ್  ಅವರ ಕೃತಿ ʻಒಬ್ಬಂಟೀಕರಣʼವನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಪರಸ್ಥಿಗೆ  ಮೂಲಕಾರಣ  ಮೊಬೈಲುಗಳು.  ಇದರಿಂದ  ಸಾಮಾಜಿಕ ಸಂಬಂಧಗಳು ಕುಸಿಯುತ್ತಿವೆ. ಈ ಕೃತಿ  ಹೆಸರಿಗೆ ತಕ್ಕಂತೆ ವಾಸ್ತವದ ಸ್ಥಿತಿಯ ಪ್ರತೀಕವಾಗಿದೆ. ಸಾಹಿತ್ಯದ ಮುದ್ರಣ ತುಂಬಾ ಕಷ್ಟವಾಗುತ್ತಿದೆ. ಕವಿತೆ ಅಥವಾ ಕತೆಗಳನ್ನು ಬರಹಗಾರರೇ ಅಚ್ಚು ಹಾಕಿಸಿಕೊಂಡು ಹಂಚುವ ಪರಿಪಾಠ ಆಗಿಬಿಟ್ಟಿದೆ. ಪುಸ್ತಕದ ಖರೀದಿಗೆ  ಸರಕಾರದಿಂದ ನೆರವು ಕಮ್ಮಿಯಾಗಿದೆ ಎಂದರು. ಇನ್ನೂ ಅನುವಾದಗಳ ವಿಷಯಕ್ಕೆ ಬಂದರೆ, ಬಹುತೆಕ ಅಚಾತುರ್ಯಗಳ ಆಗರವಾಗುತ್ತಿವೆ ವಿಷಾದ ವ್ಯಕ್ತ ಪಡಿಸಿದರು.

ಕನ್ನಡ ಮತ್ತು ತೆಲುಗಿನ ಬಾಂಧವ್ಯ ತುಂಬಾ ಹಳೆಯದು. ರಮೇಶಬಾಬು ಅವರು ಆ ಸಂಬಂಧವನ್ನು  ಮುಂದುವರೆಸಿದ್ದಾರೆ. ಎರಡು ಭಾಷೆಗಳ ನಡುವೆ ಜಾಸ್ತಿ ಅನುವಾದಗಳು ಆಗುತ್ತಿವೆ ಎಂದು ಅಭಿಪ್ರಾಯ ಪಟ್ಟರು .

ಅವರು ಪ್ರೋ. ವಿ.ಬಿ. ತಾರಕೇಶ್ವರ್ ಅವರು ಕೃತಿ ಪ್ರರಿಚಯಿಸಿ  ಮಾತನಾಡುತ್ತಿದ್ದರು. ಪ್ರಸಕ್ತ ಎರಡೂ ಭಾಷೆಗಳ ಸೇವೆಯಲ್ಲಿ ಅನೇಕ ಬರಹಗಾರರು ತೊಡಗಿಸಿಕೊಂಡಿದ್ದಾರೆ. ಈ  ಭಾಷೆಗಳಲ್ಲಿ ಸಿಗುವ ಒಂದೇ ತರದ ಪದಗಳಕೆಗೆ “ಫಾಲ್ಸ್ ಫ್ರೆಂಡ್ಸ್” ಎಂಬ ಪ್ರಯೋಗದ ಬಗ್ಗೆ ಸಭಿಕರಿಗೆ ತಿಳಿಸಿದರು.    

ಕನ್ನಡ ಸಾಹಿತ್ಯ ಪರಿಷತ್ತಿನ ತೆಲಂಗಾಣ ಗಡಿನಾಡು ಘಟಕದ ಸ್ಥಾಪಕ ಅಧ್ಯಕ್ಷ ಡಾ. ಗುಡುಗುಂಟಿ ವಿಠ್ಠಲ್ ಜೋಶಿ ಮಾತನಾಡುತ್ತ ಜಂಟಿ ನಗರಗಳಲ್ಲಿಯ ಸುಮಾರು ೧೭ ಕನ್ನಡ ಸಂಸ್ಥೆಗಳನ್ನು ಒಂದು ಸೂರಿನಡಿಯಲ್ಲಿ ತರಲು ಮಾಡಿರುವ ಪ್ರಯತ್ನವನ್ನು ಸಭೆಗೆ ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by