ಕನ್ನಡ ನಾಡು | Kannada Naadu

ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ನಿರ್ದೆಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

08 Nov, 2024



  ಉಡುಪಿ :  ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ  ಉಡುಪಿ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ನಿರ್ದೆಶಕರ ಸ್ಥಾನಕ್ಕೆ ತೋನ್ಸೆ ಕೆಮ್ಮಣ್ಣು ಗ್ರಾಮ ಪಂಚಾಯತ್ ಕಾರ್ಯದರ್ಶಿ ದಿನಕರ ಮತ್ತು  ಉದ್ಯಾವರ ಗ್ರಾಮ ಪಂಚಾಯತ್ ನ ಕಾರ್ಯದರ್ಶಿಯಾದ  ಶಿವರಾಜು.ಎಂ  ಇವರುಗಳು ಇಂದು ಉಡುಪಿಯ ಜಿಲ್ಲಾ ಸರಕಾರಿ ನೌಕರರ ಭವನದ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು. 

ಈ ಸಂದರ್ಭದಲ್ಲಿ  ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ಉಡುಪಿ  ಜಿಲ್ಲಾಧ್ಯಕ್ಷ  ಮಂಜುನಾಥ ಶೆಟ್ಟಿ, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ  ಉಮಾಶಂಕರ್ ಹೇರಿಕುದ್ರು, ರಮೇಶ್ ಹೆಚ್ ಆರ್,  ನಾಗೇಂದ್ರ ಹಾಗೂ ಕಾರ್ಯದರ್ಶಿ ಸಂಘದ ಪದಾಧಿಕಾರಿಗಳಾದ ಗಣೇಶ್ ಎಮ್, ದಿನೇಶ್ ಶೆಟ್ಟಿ , ಗುರುರಾಜ್,   ಲೆಕ್ಕ ಸಹಾಯಕರ ಸಂಘದ ಪದಾಧಿಕಾರಿಗಳಾದ ಹರೀಶ್, ಶ್ರೀಮತಿ ವಾರಿಜ ಬಿ,  ಕಲ್ಲಪ್ಪ ಖಾವಸ್ತ ಮತ್ತಿತರರು ಉಪಸ್ಥಿತರಿದ್ದು ಬೆಂಬಲ ವ್ಯಕ್ತಪಡಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by