ಕನ್ನಡ ನಾಡು | Kannada Naadu

ಉಡುಪಿಯ ದಿ ಓಷಿಯನ್‌ ಪರ್ಲ್ ಟೈಮ್ಸ್‌ ಸ್ಕ್ವೇರ್‌ ಹೊಟೇಲ್‌ ಉದ್ಘಾಟನೆಗೆ ಕ್ಷಣಗಣನೆ

07 Nov, 2024

ಉಡುಪಿ : ಉತ್ತರ ಹಾಗೂ ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ ಓಷಿಯನ್‌ ಪರ್ಲ್ ಹೊಟೇಲ್‌ ಪ್ರೈ.ಲಿ.ನ ಉಡುಪಿಯ ಎರಡನೇ ಶಾಖೆ “ದಿ ಓಷಿಯನ್‌ ಪರ್ಲ್ ಟೈಮ್ಸ್‌ ಸ್ಕ್ವೇರ್‌’ ಕಲ್ಸಂಕದ ಬಳಿ ಇರುವ ಟೈಮ್ಸ್‌ ಸ್ಕ್ವೇರ್‌ ಮಾಲ್‌ನಲ್ಲಿ ಅ. 9ರ ಮಧ್ಯಾಹ್ನ 12ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಓಷಿಯನ್‌ ಪರ್ಲ್ ಸಮೂಹ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬಿ.ಎನ್‌. ಗಿರೀಶ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉದ್ಘಾಟನ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಉಡುಪಿ ಬಿಷಪ್‌ ರೆ|ಫಾ| ಡಾ| ಜೆರಾಲ್ಡ್‌ ಐಸಾಕ್‌ ಲೋಬೊ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಈ ಹೊಟೇಲ್‌ನ “ಗ್ರ್ಯಾಂಡ್ ದಿ ಪೆಸಿಫಿಕ್‌ 1 ಹಾಲ್’ ಸುಮಾರು 2,000 ಅತಿಥಿಗಳಿಗೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದು ಮದುವೆ, ದೊಡ್ಡ ಸಮ್ಮೇಳನ, ಅದ್ದೂರಿ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗಿದೆ. “ಪೆಸಿಫಿಕ್‌ 2 ಹಾಲ್‌’ ಮಧ್ಯಮ ಗಾತ್ರದ ಕಾರ್ಯಕ್ರಮಗಳಿಗೆ ಸೂಕ್ತವಾಗಿದ್ದು, ಇದು ಸುಮಾರು 250 ಮಂದಿ ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದರು.
ಎಂಡಿ ರೋಶನ್‌ ಬನಾನ್‌ ಮಾತನಾಡಿ, ಅತ್ಯುತ್ತಮ ದರ್ಜೆಯ ವಿನ್ಯಾಸ, ಒಳಾಂಗಣಗಳನ್ನು ಹೊಂದಿರುವ ಈ ಹೊಟೇಲ್‌ನಲ್ಲಿ ಪ್ರಸಿಡೆಂಟಲ್‌ ಸೂಟ್‌, ಕ್ಲಬ್‌ ಸೂಟ್ಸ್‌, ಫ್ಯಾಮಿಲಿ ಸೂಟ್‌ ಮತ್ತು ಡಿಲಕ್ಸ್ ರೂಮ್‌ಗಳು ಸಹಿತ 67 ಐಷಾರಾಮಿ ಕೊಠಡಿಗಳು ಲಭ್ಯವಿವೆ. ಜಿಮ್, ಫಿಟ್ನೆಸ್ ಸೆಂಟರ್‌, ಬಿಜಿನೆಸ್‌ ಲಾಂಜ್‌ ಸೌಲಭ್ಯಗಳು ಇಲ್ಲಿವೆ. ಈಜು ಪ್ರಿಯರ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ತಮ ವಿನ್ಯಾಸದ ಈಜುಕೊಳವನ್ನೂ ನಿರ್ಮಿಸಲಾಗಿದೆ ಎಂದರು.

ಆಧುನಿಕ ವಾಸ್ತು ಶೈಲಿಯನ್ನು ಒಳಗೊಂಡಿರುವ ಹೊಟೇಲ್‌ನಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರ ಖಾದ್ಯ, ಕಾಂಟಿನೆಂಟಲ್‌, ಚೈನೀಸ್‌ ಆಹಾರ ಉತ್ಪನ್ನಗಳನ್ನು ಹೊಂದಿರುವ “ಕೋರಲ್’ ರೆಸ್ಟೋರೆಂಟ್‌, ಜಾಸ್‌ ನ್ಪೋರ್ಟ್ಸ್ ಬಾರ್‌ ಮತ್ತು ಜಾಸ್‌ ಎಕ್ಸಿಕ್ಯೂಟಿವ್‌ ಲಾಂಜ್‌ಗಳಿವೆ. ವಿವಿಧ ಬಗೆಯ ಪ್ರಾದೇಶಿಕ ಆಹಾರ ಉತ್ಪನ್ನಗಳು ಇಲ್ಲಿನ ಮತ್ತೂಂದು ವಿಶೇಷತೆ.

ಎಂಡಿ ರೋಶನ್‌ ಬನಾನ್‌ ಮಾತನಾಡಿ, ಅತ್ಯುತ್ತಮ ದರ್ಜೆಯ ವಿನ್ಯಾಸ, ಒಳಾಂಗಣಗಳನ್ನು ಹೊಂದಿರುವ ಈ ಹೊಟೇಲ್‌ನಲ್ಲಿ ಪ್ರಸಿಡೆಂಟಲ್‌ ಸೂಟ್‌, ಕ್ಲಬ್‌ ಸೂಟ್ಸ್‌, ಫ್ಯಾಮಿಲಿ ಸೂಟ್‌ ಮತ್ತು ಡಿಲಕ್ಸ್ ರೂಮ್‌ಗಳು ಸಹಿತ 67 ಐಷಾರಾಮಿ ಕೊಠಡಿಗಳು ಲಭ್ಯವಿವೆ. ಜಿಮ್, ಫಿಟ್ನೆಸ್ ಸೆಂಟರ್‌, ಬಿಜಿನೆಸ್‌ ಲಾಂಜ್‌ ಸೌಲಭ್ಯಗಳು ಇಲ್ಲಿವೆ. ಈಜು ಪ್ರಿಯರ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ತಮ ವಿನ್ಯಾಸದ ಈಜುಕೊಳವನ್ನೂ ನಿರ್ಮಿಸಲಾಗಿದೆ ಎಂದರು.

ಉದ್ಯಮಿ ಜಯರಾಮ್‌ ಬನಾನ್‌ ಅವರು “ಸಾಗರ ರತ್ನ’, “ಶ್ರೀರತ್ನ’ ಮತ್ತು “ಸ್ವಾಗತ್‌’ ಎಂಬ ರೆಸ್ಟೋರೆಂಟ್‌ಗಳನ್ನು ಹೊಂದಿದ್ದು, ದಿಲ್ಲಿ, ಉತ್ತರ ಭಾರತದಾದ್ಯಂತ “ಸಾಗರ ರತ್ನ’ ಹೆಸರಿನ ವೆಜ್‌, “ಸ್ವಾಗತ್‌’ ಹೆಸರಿನ ನಾನ್‌ವೆಜ್‌ ರೆಸ್ಟೋರೆಂಟ್‌ ಮತ್ತು ಇಂಡಸ್ಟ್ರಿಯಲ್‌ ಕ್ಯಾಂಟೀನ್‌ಗಳನ್ನು ನಡೆಸುತ್ತಿದ್ದಾರೆ. ಸಂಸ್ಥೆಯ ಸಾಗರ್‌ ಹಾಗೂ ಸ್ವಾಗತ್‌ ರೆಸ್ಟೋರೆಂಟ್‌ಗಳು ದಿಲ್ಲಿ ಸಹಿತ ಉತ್ತರ ಭಾರತದಲ್ಲಿ ಜನಪ್ರಿಯಗೊಂಡಿವೆ. ಓಷಿಯನ್‌ ಪರ್ಲ್ ಹೊಟೇಲ್‌ ಮಂಗಳೂರು, ಉಡುಪಿ, ಉಜಿರೆ, ಹುಬ್ಬಳ್ಳಿಗಳಲ್ಲೂ ಗ್ರಾಹಕರ ಮೆಚ್ಚುಗೆ ಗಳಿಸಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by