ಕನ್ನಡ ನಾಡು | Kannada Naadu

ರಾಷ್ಟ್ರೀಕೃತ ಬ್ಯಾಂಕ್‌ಗಳು ಬಡವರ ಸ್ನೇಹಿಯಾಗಲಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

29 Oct, 2024

ಬ್ಯಾಂಕ್‌ಗಳು ನಿಯಮಗಳ ಬೆನ್ನು ಹತ್ತಿ ಜನರಿಗೆ ಸುಲಭದಲ್ಲಿ ಸಾಲ ಸಿಗುವುದೇ ಕಷ್ಟ, ಪಿಎಂ ವಿಶ್ವಕರ್ಮ ಯೋಜನೆ ಪ್ರಗತಿ ಪರಿಶೀಲನೆ ಸಭೆ

 ಉಡುಪಿ : ರಾಷ್ಟ್ರೀಕೃತ ಬ್ಯಾಂಕ್‌ಗಳು ಬಡ ಜನರ ನೆಚ್ಚಿನ ಬ್ಯಾಂಕ್‌ ಆಗಿದ್ದವು. ಪ್ರಸ್ತುತ ಆ ಸ್ಥಾನವನ್ನು ಸಹಕಾರಿ ಸಂಘಗಳು ವಹಿಸಿಕೊಂಡಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಪುನರಪಿ ಬಡವರ ಬ್ಯಾಂಕ್‌ ಆಗಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
 ರಾಷ್ಟ್ರೀಕೃತ ಬ್ಯಾಂಕ್‌ಗಳು ಬಡ ಜನರ ನೆಚ್ಚಿನ ಬ್ಯಾಂಕ್‌ ಆಗಿದ್ದವು. ಪ್ರಸ್ತುತ ಆ ಸ್ಥಾನವನ್ನು ಸಹಕಾರಿ ಸಂಘಗಳು ವಹಿಸಿಕೊಂಡಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಪುನರಪಿ ಬಡವರ ಬ್ಯಾಂಕ್‌ ಆಗಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಹರೀಶ್‌ ಮಾತನಾಡಿ, 3,303 ಅರ್ಜಿ ಸಲ್ಲಿಕೆಯಾಗಿದ್ದು, ಆ ಪೈಕಿ 2,470 ವಿಲೇವಾರಿಗೆ ಬಾಕಿ ಇದೆ. 13 ಸಂಸ್ಥೆಗಳಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಯೋಜನೆಯ ಫಲಾನುಭವಿಗಳಿಗೆ ನ.8ರಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕಾರ್ಯಕ್ರಮ ಸಂಘಟಿಸಿ, ಸಾಲಪತ್ರ ವಿತರಿಸುವುದಕ್ಕೆ ನಿರ್ಧರಿಸಲಾಯಿತು.

Publisher: ಕನ್ನಡ ನಾಡು | Kannada Naadu

Login to Give your comment
Powered by