ಕನ್ನಡ ನಾಡು | Kannada Naadu

ದುಬೈನಲ್ಲಿ ಅದ್ಧೂರಿ ಕೆಂಪೇಗೌಡ ಉತ್ಸವ

28 Oct, 2024

ದುಬೈನಲ್ಲಿ ನಾಡಪ್ರಭು ಕೆಂಪೇಗೌಡರ ಸ್ಮರಣೆಗಾಗಿ ಕನ್ನಡ ಪರಂಪರೆ ಮತ್ತು ಸಂಸ್ಕೃತಿಯನ್ನು ಸ್ಮರಿಸುವ ಉತ್ಸವ ಅದ್ಧೂರಿಯಾಗಿ ನೆರವೇರಿತು. ದುಬೈನ ಕನ್ನಡ ಒಕ್ಕೂಟಗಳು ಮತ್ತು ದುಬೈ ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸಾವಿರಾರು  ಕನ್ನಡಿಗರು ಮತ್ತು ಕರ್ನಾಟಕದಿಂದ  ಅಥಿತಿಗಳು ಭಾಗವಹಿಸಿದರು.

     ಅದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, “ಕನ್ನಡಿಗರ ಏಕತೆಯ ಪ್ರತಿಬಿಂಬ ಈ ಉತ್ಸವ, ಇದು ಕನ್ನಡ ನಾಡು ಮತ್ತು ಭಾವೈಕ್ಯತೆಯನ್ನು ಜಾಗೃತಗೊಳಿಸುವ ಮಹತ್ವದ ಕಾರ್ಯವಾಗಿದೆ ,ಈ ಉತ್ಸವವು ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಸ್ಮರಿಸುವ ಮತ್ತು ಪ್ರೇರಣೆ ಮಾಡುವ ಕೆಲಸ ಮಾಡಲಿದೆ ಎಂಬುದಾಗಿ ತಿಳಿಸಿದರು.

      ಕಾರ್ಯಕ್ರಮದಲ್ಲಿ, ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರು ಸನ್ಮಾನಿಸಲ್ಪಟ್ಟರು. ರಾಜ್ಯ ಪಶುಸಂಗೋಪನಾ ಸಚಿವರಾದ ಶ್ರೀ ವೆಂಕಟೇಶ್, ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಅಶ್ವಥ್  ನಾರಾಯಣ್, ಮಾಜಿ ಸಚಿವರಾದ ಸಿ.ಟಿ. ರವಿ, ಶಾಸಕರಾದ ರವಿಕುಮಾರ್ ಗಣಿಗ, ಮತ್ತು ಚಿತ್ರನಟ ಉಪೇಂದ್ರ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.



       ಕಾರ್ಯಕ್ರಮದ ಮುಖ್ಯ ಸಂಘಟಕರಾದ ಕಿರಣ್ ಗೌಡ, ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷರು, ನಮ್ಮ ಪರಂಪರೆ, ಸಂಸ್ಕೃತಿ ಮತ್ತು ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಮುಂದಿನ ತಲೆಮಾರಿಗೂ ಪರಿಚಯಿಸಲು ಈ ಉತ್ಸವವೇ ಆದರ್ಶ ಮಾದರಿಯಾಗಿದೆ,ಎಂದು ಸಂತೋಷ ವ್ಯಕ್ತಪಡಿಸಿದರು.

           ಚಿತ್ರನಟ ಉಪೇಂದ್ರ ಈ ಉತ್ಸವದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ, “ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯ,” ಎಂದು ಅಭಿಪ್ರಾಯಪಟ್ಟರು.


  ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ನೃತ್ಯ ಪ್ರದರ್ಶನಗಳು, ಮತ್ತು ಸಾಮಾಜಿಕ ಸೇವಾ ಸನ್ಮಾನಗಳನ್ನು ನಡೆಸಲಾಯಿತು. ಪ್ರತೀ ವರುಷ ಈ ಉತ್ಸವವನ್ನು ಕನ್ನಡ ನಾಡಿನ ಸಂಸ್ಕೃತಿಯ ದೀಪವನ್ನು ಮತ್ತಷ್ಟು ವಿಸ್ತಾರವಾಗಿಸಲು ಸಂಘಟಕರು ನಿರ್ಧರಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by