ಉಡುಪಿ: ದೀಪಾವಳಿ ಹಬ್ಬದ ಪ್ರಯುಕ್ತ ಪರ್ಯಾಯ ಶ್ರೀಕೃಷ್ಣ ಮಠದಿಂದ ಆಯೋಜಿಸಲ್ಪಟ್ಟ ಗೂಡು ದೀಪ ಸ್ಪರ್ಧೆಯನ್ನು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಸಾಂಪ್ರದಾಯಿಕ ವಿಭಾಗ, ಆಧುನಿಕ ವಿನ್ಯಾಸದ ಗೂಡುದೀಪ ಸಹಿತ ಸಾಂಸ್ಕೃತಿಕ ಪರಂಪರೆ. ಸಾಂಪ್ರದಾಯಿಕ ವಿಭಾಗ, ಆಧುನಿಕ ವಿನ್ಯಾಸದ ಗೂಡುದೀಪ ಸಹಿತ ಸಾಂಸ್ಕೃತಿಕ ಪರಂಪರೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ಈ ಸ್ಪರ್ಧೆಗಳನ್ನು ಆಯೋಜಿಸಲಾಯಿತು ಎಂದು ಪುತ್ತಿಗೆ ಶ್ರೀಗಳು ತಿಳಿಸಿದರು. ಇದೊಂದು ನಮ್ಮ ಪರಂಪರೆಯ ಜೊತೆ ಕಲೆಯನ್ನು ತಮ್ಮೊಳಗೆ ಮೈಗೂಡಿಸಿಕೊಳ್ಳುವ ಸೃಜನಾತ್ಮಕ ಕಲೆ. ಗೂಡುದೀಪ ನಿರ್ಮಾಣದ ಕಲೆಯನ್ನು ಮಕ್ಕಳಲ್ಲಿ ಸಂರಕ್ಷಿಸಿ ಪ್ರೋತ್ಸಾಹಿಸಲು ಮುಂದಾಗಿರುವ ಯುವಕ ಯುವತಿಯರು, ಮಕ್ಕಳಿಗೆ ಅನುಗ್ರಹಪತ್ರ ವಿತರಿಸಲಾಯಿತು.
Publisher: ಕನ್ನಡ ನಾಡು | Kannada Naadu