ಕನ್ನಡ ನಾಡು | Kannada Naadu

ದೀಪಾವಳಿಗೆ ಕ್ಷಣಗಣನೆ... ಮಾರುಕಟ್ಟೆಯಲ್ಲಿ ಬಟ್ಟೆ ವ್ಯಾಪಾರದ ಭರಾಟೆ.. 

28 Oct, 2024

           ಉಡುಪಿ  :  ಹಬ್ಬ ಹರಿದಿನಗಳು ಬಂದವು ಎಂದರೆ ಬಟ್ಟೆ ಖರೀದಿಯಲ್ಲಿ ಬಡವ ಶ್ರೀಮಂತ ಎನ್ನುವ ಬೇಧವಿಲ್ಲದೆ ತಮ್ಮ ತಮ್ಮ ಕೈಲಾದ ಮಟ್ಟಿಗೆ ಬಟ್ಟೆಯ ವ್ಯಾಪಾರ ಮಡುವುದು ಸಾಮಾನ್ಯ. ಈ ಮಂದ್ಯ ಕರಾವಳಿ ನಾಡಿನಲ್ಲಿಅತ್ಯಂತ ಪಾರಂಪರಿಕ ಉದ್ಯಮಗಳಲ್ಲಿ ಒಂದಾ ಗಿರುವ ವಸ್ತ್ರೋದ್ಯಮಕ್ಕೆ ಮೊದಲಿ ನಿಂದಲೂ ಬಹು ಬೇಡಿಕೆಯಿದೆ. ಹಬ್ಬದ ಋತು ಈಗಾಗಲೇ ಆರಂಭವಾಗಿದ್ದು, ಎಲ್ಲ ವಹಿವಾಟುಗಳು ಜಿಗಿತುಕೊಳ್ಳುತ್ತವೆ. ಮುಖ್ಯವಾಗಿ ವಸ್ತ್ರೋದ್ಯಮ ಕ್ಷೇತ್ರದ ವ್ಯಾಪಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇನ್ನಷ್ಟು ವೃದ್ಧಿಯಾಗುವ ವಿಶ್ವಾಸವಿದೆ ಎನ್ನುವುದು ಮಳಿಗೆಗಳ ಪ್ರಮುಖರ ಮಾತು.
ಸಾಂಪ್ರದಾಯಿಕ ಬಟ್ಟೆಗಳಾದ ಸೀರೆ, ಕುರ್ತಾಗಳು, ಪುರುಷರ ಪಂಚೆ, ಶರ್ಟ್‌ಗಳು, ಮಕ್ಕಳ ಬಟ್ಟೆಗಳಿಗೆ ದೀಪಾವಳಿಗೆ ಬೇಡಿಕೆಯಿದೆ. ಮನೆಯವರಿಗೆ, ಕುಟುಂಬಸ್ಥರಿಗಾಗಿ ಈ ವೇಳೆ ಬಟ್ಟೆ ಖರೀದಿಸುತ್ತಾರೆ. ಕೆಲವರು ಬ್ರಾಂಡೆಡ್‌ ಬಟ್ಟೆಗಳನ್ನು ಕೇಳಿ ಪಡೆಯುತ್ತಾರೆ. ಹೊಸ ಸ್ಟಾಕ್‌ ಈಗಾಗಲೇ ಬಂದಿದ್ದು, ಗ್ರಾಹಕರ ನಿರೀಕ್ಷೆಯಲ್ಲಿ ನಗರದ ಪ್ರಸಿದ್ಧ ಪ್ರವರ್ತಕರು  ಕಾದು ಕುಳಿತಿದ್ದಾರೆ.
      ಈಗಾಗಲೇ ಹೊಸ ಸ್ಟಾಕ್‌ಗಳು ಬಂದಿದ್ದು, ವ್ಯಾಪಾರ ಆರಂಭವಾಗಿವೆ. ದೀಪಾವಳಿ ಆಫರ್‌ ಆರಂಭವಾಗಿದ್ದು, ಕೆಲವು ಮಳಿಗೆಗಳು ನವರಾತ್ರಿಗೆ ಆರಂಭಿಸಿರುವ ಕೊಡುಗೆಗಳನ್ನು ದೀಪಾವಳಿವರೆಗೂ ಮುಂದುವರಿಸಿವೆ. ಒಂದು ಕೊಂಡರೆ ಒಂದು ಉಚಿತ ಸ್ಲೋಗನ್‌ನೊಂದಿಗೆ ಗ್ರಾಹಕರನ್ನು ಮಳಿಗೆಗಳು ಆಕರ್ಷಿಸುತ್ತಿದ್ದರೆ, ಬ್ರ್ಯಾಂಡೆಡ್‌ ವಸ್ತ್ರಗಳಿಗೆ ಶೇ.25-30ರಷ್ಟು ರಿಯಾಯಿತಿ, ನಮ್ಮಲ್ಲೇ ಅತೀ ಕಡಿಮೆ ದರ ಎಂದು ಕೆಲವು ಮಳಿಗೆಗಳು ಮಾಲಕರು ಈಗಾಗಲೇ ಪ್ರಕಟನೆಗಳನ್ನು ಹೊರಡಿಸಿದ್ದಾರೆ. ಈ ಮಧ್ಯ ಬಟ್ಟೆ ಎನ್ನುವುದು ನಾವು ಮುಟ್ಟಿ ಅದನ್ನು ಫೀಲ್‌ ಮಾಡಿ ಖರೀದಿಸುವಂತದ್ದು. ಆನ್‌ಲೈನ್‌ನಲ್ಲಿ ಚಿತ್ರ ನೋಡಿ ಖರೀದಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಅಲ್ಲಿರುವ ಚಿತ್ರಕ್ಕೂ ಬರುವ ಉತ್ಪನ್ನಕ್ಕೂ ಸಂಬಂಧವೇ ಇರುವುದಿಲ್ಲ. ಚಿನ್ನ ಮತ್ತು ಬಟ್ಟೆಯನ್ನು ಅಂಗಡಿಗೆ ಹೋಗಿ ಖರೀದಿಸಿದರೆ ನೆಮ್ಮದಿ ಎನ್ನುವ
ಅಭಿಪ್ರಾಯ ಹಲವರಲ್ಲಿದೆ. 
ದೀಪಾವಳಿಯನ್ನು ಬಹುತೇಕ ಮನೆಗಳಲ್ಲಿ ಸಾಂಪ್ರದಾಯಕವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿಯೇ ಹೊಸ ಸಾಂಪ್ರದಾಯಿಕ ಧಿರಿಸಿನಲ್ಲಿಯೇ ಅನೇಕರು ಹಬ್ಬ ಆಚರಿಸುತ್ತಾರೆ. ಇದಕ್ಕಾಗಿ ಮಹಿಳೆಯರು, ಯುವತಿಯರು ಸೀರೆ, ಲಂಗದಾವಣಿ, ಚೂಡಿದಾರ್‌ ಇತ್ಯಾದಿಗಳ ಖರೀದಿಗೆ ಹೆಚ್ಚು ಆಸಕ್ತಿ ತೋರಿದರೆ, ಪುರುಷರು ಪಂಚೆ ಶಲ್ಯ ಸಹಿತ ಧಿರಿಸು, ಕುರ್ತಾ, ಪೈಜಾಮ, ಮಕ್ಕಳು ಹೊಸ ವಿನ್ಯಾಸದ ಸಾಂಪ್ರದಾಯಿಕ ಬಟ್ಟೆಗಳ ಖರೀದಿಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂದು ಖಾಸಗಿ ಜವುಳಿ ಮಳಿಗೆಯ ಮಾಲಕರೊಬ್ಬರು ಮಾಹಿತಿ ನೀಡಿದರು. ಮುಂದಕ್ಕೆ ಕ್ರಿಸ್ಮಸ್‌, ಹೊಸ ವರ್ಷ, ಸಂಕ್ರಾಂತಿ ಹಬ್ಬಗಳು, ಮದುವೆ ಸೇರಿದಂತೆ ಶುಭ ಸಮಾರಂಭಗಳ ಸೀಸನ್‌ ಆರಂಭವಾಗುವುದರಿಂದ ಈ ಬಾರಿಯೂ ಹೆಚ್ಚಿನ ವ್ಯಾಪಾರ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ.
      ಮಂಗಳೂರಿನ ಪ್ರಮುಖ ವಸ್ತ್ರ ಮಳಿಗೆಗಳಲ್ಲಿ ಒಂದಾಗಿರುವ ಎಂ.ಪಿ.ಸಿಲ್ಕ್ಸ್‌ನ ಮಾಲಕರಾಗಿರುವ ದಿನೇಶ್‌ ಅವರ ಅಭಿಪ್ರಾಯದಂತೆ, ಮಳಿಗೆಯಲ್ಲಿ ರುವ ಬಟ್ಟೆಗಳ ವೈವಿಧ್ಯತೆ ಮತ್ತು ದರವನ್ನು ನೋಡಿಕೊಂಡು ಜನರು ಭೇಟಿ ನೀಡುತ್ತಾರೆ. ಈ ಬಾರಿ ದಸರಾ ಮತ್ತು ದೀಪಾವಳಿ ಒಂದೇ ತಿಂಗಳಿನಲ್ಲಿ ಬಂದಿದೆ. ಕೆಲವರು ದಸರಾಕ್ಕೆ ಖರೀದಿ ಮಾಡಿದ್ದಾರೆ. ಹಾಗಾಗಿ ದೀಪಾವಳಿಯ ಟ್ರೆಂಡ್‌ ಇನ್ನಷ್ಟೇ ಆರಂಭವಾಗಬೇಕಿದೆ. ಗ್ರಾಹಕರಿಗಾಗಿ ವಿಶೇಷ ಡಿಸ್ಕೌಂಟ್‌ ಸೇಲ್‌ಗ‌ಳನ್ನು ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ಪ್ರಮುಖ ವಸ್ತ್ರ ಮಳಿಗೆಗಳಲ್ಲಿ ಒಂದಾಗಿರುವ ಎಂ.ಪಿ.ಸಿಲ್ಕ್ಸ್‌ನ ಮಾಲಕರಾಗಿರುವ ದಿನೇಶ್‌ ಅವರ ಅಭಿಪ್ರಾಯದಂತೆ, ಮಳಿಗೆಯಲ್ಲಿ ರುವ ಬಟ್ಟೆಗಳ ವೈವಿಧ್ಯತೆ ಮತ್ತು ದರವನ್ನು ನೋಡಿಕೊಂಡು ಜನರು ಭೇಟಿ ನೀಡುತ್ತಾರೆ. ಈ ಬಾರಿ ದಸರಾ ಮತ್ತು ದೀಪಾವಳಿ ಒಂದೇ ತಿಂಗಳಿನಲ್ಲಿ ಬಂದಿದೆ. ಕೆಲವರು ದಸರಾಕ್ಕೆ ಖರೀದಿ ಮಾಡಿದ್ದಾರೆ. ಹಾಗಾಗಿ ದೀಪಾವಳಿಯ ಟ್ರೆಂಡ್‌ ಇನ್ನಷ್ಟೇ ಆರಂಭವಾಗಬೇಕಿದೆ. ಗ್ರಾಹಕರಿಗಾಗಿ ವಿಶೇಷ ಡಿಸ್ಕೌಂಟ್‌ ಸೇಲ್‌ಗ‌ಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸುತ್ತಾರೆ. 
 ಉಡುಪಿಯ ಜಯಲಕ್ಷ್ಮೀ ಸಿಲ್ಕ್ಸ್‌ನ ಪಾಲುದಾರರಾದ ವೀರೇಂದ್ರ ಹೆಗಡೆ ಯವರು ಮಾತನಾಡಿ  ಹಬ್ಬದ ಖರೀದಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಗ್ರಾಹಕರಿಂದ ತುಂಬ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಗ್ರಾಹಕರಿಗಾಗಿ ಲಕ್ಕಿ ಕೂಪನ್‌ ಕೊಡುಗೆಯನ್ನು ಈಗಾಗಲೇ ಘೋಷಣೆ ಮಾಡಿದ್ದೇವೆ. ಹಬ್ಬಕ್ಕೆ ಬೇಕಾದ ಎಲ್ಲ ರೀತಿಯ ಬಟ್ಟೆಗಳನ್ನು ಖರೀದಿಗೂ ನಮ್ಮಲ್ಲಿ ವ್ಯವಸ್ಥೆಯಿದೆ. ಪುರುಷರ, ಮಹಿಳೆಯರ, ಮಕ್ಕಳ ಪ್ರತ್ಯೇಕ ವಿಭಾಗವೂ ಇರುವುದರಿಂದ ಗ್ರಾಹಕರು ಕುಟುಂಬ ಸಮೇತರಾಗಿ ಬಂದು ತಮ್ಮ ಆಯ್ಕೆಯ ಬಟ್ಟೆಗಳನ್ನು ಖರೀದಿ ಮಾಡಬಹುದಾಗಿದೆ ಎಂದು ಅರುಹಿಕೊಂಡಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by