ಕನ್ನಡ ನಾಡು | Kannada Naadu

ಬಸ್ ಪ್ರಯಾಣ ದರ ಇನ್ನಷ್ಟು ದುಬಾರಿ: ದೀಪಾವಳಿ ಸಂದರ್ಭದಲ್ಲಿ ಜನರಿಗೆ ಸದ್ದಿಲ್ಲದ ಬರೆ..!

27 Oct, 2024

ಉಡುಪಿ: ಎಂದಿನಂತೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಿಂಗಳಾಂತ್ಯ ಹಾಗೂ ನವೆಂಬರ್‌ ಮೊದಲ ವಾರದಲ್ಲಿ ಸಾಲು ಸಾಲು ರಜೆಗಳಿದ್ದು, ಈ ಸಂದರ್ಭದಲ್ಲಿ ಬಸ್‌ ಟಿಕೆಟ್‌ ದರ  ಎರಡು ಪಟ್ಟು ಹೆಚ್ಚಾಗಿದ್ದು ಪ್ರಯಾಣಿಕರಿಗೆ ಜೆಬಿಗೆ ಕತ್ತರಿಹಾಕುವುದಕ್ಕೆ  ಈ ದುಬಾರಿ ಪ್ರಯಾಣ ದರ ಸಿದ್ಧವಾಗಿದೆ.
ಈ ಬಾರಿ ದೀಪಾವಳಿ ಹಬ್ಬ ವಾರಾಂತ್ಯಕ್ಕೆ ಬಂದಿದೆ. ಅದರೊಂದಿಗೆ ಕನ್ನಡ ರಾಜೋತ್ಸ್‌ವ ಹೀಗಾಗ ಸಾಲು ಸಾಲು ರಜೆಗಳು ಬಂದಿದೆ. ಶುಕ್ರವಾರ ಕನ್ನಡ ರಾಜ್ಯೋತ್ಸವ ಸಹ ಇರುವುದರಿಂದ ಊರಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹೋಗುವ ಪ್ರಯಾಣಿಕರು ಬುಕಿಂಗ್‌ಗೆ ಪ್ರಯಾಣಿಸಿದರೆ ಟಿಕೆಟ್ ಸಿಗದ ಪರಿಸ್ಥಿತಿ ಉಂಟಾಗಿದೆ. ಅದರಲ್ಲಿಯೂ ಖಾಸಗಿ ಬಸ್‌ಗಳ ಪ್ರಯಾಣ ದರ ಕಂಡು ಅವರು ಕಂಗಾಲಾಗಿದ್ದಾರೆ. ಬಸ್ ಪ್ರಯಾಣ ದರ ಮನಬಂದಂತೆ ಏರಿಸಲಾಗಿದೆ.
     ರಾಜಧಾನಿ ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ 1,000 ರೂ. ಆಸುಪಾಸಿನಲ್ಲಿದ್ದ ಟಿಕೆಟ್‌ ದರವನ್ನು 1,500ರಿಂದ 2000 ರೂ.ವರೆಗೆ ಹೆಚ್ಚಿಸಲಾಗಿದೆ. ಹಬ್ಬಕ್ಕೆ ಮುನ್ನವೇ ಟಿಕೆಟ್‌ ದರ ಹೆಚ್ಚಳ ಮಾಡಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಡಿಮ್ಯಾಂಡ್‌ ಹೆಚ್ಚಿಸಲಾಗುತ್ತಿದೆ. ರೈಲ್ವೆ ಇಲಾಖೆ ವಿಶೇಷ ರೈಲು ಓಡಾಟಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದು, ಅಲ್ಲೂ ಮುಂಗಡ ಟಿಕೆಟ್‌ ಸಿಗದ ಕಾರಣ ಬಸ್‌ ಸಂಸ್ಥೆಗಳು ಆನ್‌ಲೈನ್‌ನಲ್ಲೂ ದುಬಾರಿ ಹಣ ಪೀಕಿಸುತ್ತಿದ್ದಾರೆ.
      ಖಾಸಗಿ ಬಸ್‌ ಸಂಸ್ಥೆಗಳ ಅಕೃತ ವೆಬ್‌ಸೈಟ್‌ಗಳಲ್ಲಿ ನಮೂದಾಗಿರುವ ದರಕ್ಕೂ, ಬುಕ್ಕಿಂಗ್‌ ಮಾಡುವಾಗ ತೋರಿಸುವ ದರಕ್ಕೂ ವ್ಯತ್ಯಾಸವಿದೆ. ಉಡುಪಿಯಿಂದ ಬೆಂಗಳೂರಿಗೆ ವೆಬ್‌ಸೈಟ್‌ಗಳ ಮೇಲೆ 1,000 ರೂ. ದರ ನಮೂದಿಸಿದರೆ ಕ್ಲಿಕ್‌ ಮಾಡಿ ಸೀಟ್‌ ಆಯ್ಕೆ ಮಾಡಿದರೆ 400ರಿಂದ 700 ರೂ.ಗಳಷ್ಟು ಹೆಚ್ಚಳ ಕಂಡುಬರುತ್ತಿದೆ. ನಾನಾ ರೀತಿಯ ತೆರಿಗೆಗಳನ್ನು ಪ್ರಯಾಣಿಕರ ಮೇಲೆ ಹೇರಲಾಗುತ್ತಿದೆ.


         ಖಾಸಗಿ ಬಸ್‌ಗಳಲ್ಲಿ 1,500 ರೂ.ಗಳಿಂದ 4,000 ರೂ.ನಷ್ಟು ಟಿಕೆಟ್‌ ದರವಿದೆ. ಈ ದರ ಹೆಚ್ಚಳ ಅ. 30ರಿಂದ ನ. 3ರವರೆಗೂ ಇದೆ. ರಾತ್ರಿ 9-10 ಗಂಟೆಯ ಬಳಿಕ ಹೊರಡುವ ಬಹುತೇಕ ಬಸ್‌ಗಳಲ್ಲಿ ಸೀಟ್‌ ಈಗಾಗಲೇ ಭರ್ತಿಯಾಗಿದ್ದು, ಬೆರಳೆಣಿಕೆಯಷ್ಟೇ ಸೀಟ್‌ಗಳು ಖಾಲಿ ಇದೆ ಎಂದು ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ ಕರಾವಳಿ ಮೂಲದ ಪ್ರಯಾಣಿಕ ಮಹೇಶ್‌ ಎಂ. ತಿಳಿಸಿದ್ದಾರೆ.
ದಿನಂಪ್ರತಿ ಓಡಾಡುವ ಬಸ್‌ಗಳ ಟಿಕೆಟ್‌ ಬಹುತೇಕ ಮುಂಗಡ ಬುಕ್ಕಿಂಗ್‌ ಆಗಿದೆ. ಬೇಡಿಕೆ ಗಮನಿಸಿಕೊಂಡು ಹೆಚ್ಚುವರಿ ಬಸ್‌ ಇಳಿಸುವುದಕ್ಕೆ ಖಾಸಗಿ ಬಸ್‌ ಮಾಲೀಕರು ಮುಂದಾಗಿದ್ದು, ಟಿಕೆಟ್‌ಗೆ ದುಪ್ಪಟ್ಟು ಹಣ ನಿಗದಿಯಾಗಿದೆ. ಲಗೇಜ್‌ಗಳಿಗೂ ಹೆಚ್ಚುವರಿ ಹಣ ತೆಗೆದುಕೊಳ್ಳಲಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಮಧ್ಯ ಸರಕಾರ ಬಸ್‌ ದರ ಏರಿಕೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿತ್ತು.  ಆ ಭರವಸೆ ಎಂದಿನಂತೆ ಎನ್ನುವುಸು ಈ ಬಾರಿ ಮತ್ತೊಮ್ಮೆ ಸಾಭಿತಾಗಿದೆ. 

ಕೆಎಸ್‌ ಆರ್‌ ಟಿ ಸಿ ಯಿಂದ ಪ್ರತಿದಿನ ಓಡಾಡುವ ಬಸ್‌ಗಳ ದರದಲ್ಲಿ ಹೆಚ್ಚಳವಿಲ್ಲಿ ದಿದ್ದರೂ,  ಹಬ್ಬಕ್ಕಾಗಿ ಹೆಚ್ಚುವರಿಯಾಗಿ ಹಾಕಿರುವ ಬಸ್‌ಗಳಿಗೆ ಶೇ. 20ರಷ್ಟು ದರವನ್ನು ಹೆಚ್ಚಳ ಮಾಡಲಾಗುತ್ತದೆ. ಮಂಗಳೂರು, ಉಡುಪಿ, ಕುಂದಾಪುರ ಸಹಿತ ಈ ತನಕ 18ಕ್ಕೂ ಅಧಿಕ ಹೆಚ್ಚುವರಿ ಬಸ್‌ಗಳನ್ನು ಹಾಕಲಾಗಿದೆ ಎಂದು ಸಾರಿಗೆ ಸಂಸ್ಥೆಯ ಮೂಲಗಳಿಂದ ತಿಳಿದು ಬಂದಿದೆ.
"ಕಾಂಟ್ರ್ಯಾಕ್ಟ್ ಕ್ಯಾರೇಜ್‌ ಬಸ್‌ಗಳಾಗಿರುವುದರಿಂದ ಟಿಕೆಟ್‌ಗಳಿಗೆ ನಿರ್ದಿಷ್ಟ ದರ ಎಂದು ಆರ್‌ಟಿಒ ನಿಗದಿಪಡಿಸಿಲ್ಲ. ಆದರೆ ಬಸ್‌ ಟಿಕೆಟ್‌ಗೆ ಬೇಡಿಕೆ ಇದೆ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಟಿಕೆಟ್‌ ದರ ಹೆಚ್ಚಿಸುವಂತೆಯೂ ಇಲ್ಲ. ಪ್ರಯಾಣಿಕರಿಂದ ದೂರು ಬಂದರೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.



  

Publisher: ಕನ್ನಡ ನಾಡು | Kannada Naadu

Login to Give your comment
Powered by