ಕನ್ನಡ ನಾಡು | Kannada Naadu

ದೈವದೇವರ ನಾಡಿನಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕಾಂಡ್ಲಾವನಗಳು. 

27 Oct, 2024



ಕುಂದಾಪುರ :  ದೈವದ ನಾಡಿಈಗ ಇನ್ನೊಂದು ವಿಷಯಕ್ಕೆ ಜನಪ್ರೀಯತೆಗಳಿಸುತ್ತಿದೆ.   ನಮ್ಮ ಜಿಲ್ಲೆಯ ದೈವ ದೇವರ ಜೊತೆ ಇಲ್ಲಿನ ಪಾಕಪದ್ಧತಿ ಇಷ್ಟು ದಿನ, ಜನರನ್ನು ಉಡುಪಿ- ಕುಂದಾಪುರದತ್ತ ಕೈಬಿಸಿ ಕರೆಯುತಿತ್ತು. ಇನ್ನೂ ಮುಂದೆ ಉಡುಪಿ ಜಿಲ್ಲೆಯಲ್ಲಿ ಕಾಂಡ್ಲವನಗಳು  ನಿಸರ್ಗ ಪ್ರೀಯರಿಗೆ, ಪ್ರವಾಸಿಗರಿಗೆ ಕೈಬಿಸಿ ಕೆರೆಯುವಲ್ಲಿ ತನ್ನ ಪಾತ್ರವನ್ನು ಸೃಷ್ಟಿಸಲಿವೆ.  
     ಕುಂದಾಪುರದ ಕೋಡಿ ಹಿನ್ನೀರು, ಉಪ್ಪಿನಕುದ್ರು ದ್ವೀಪ ವಲಯದ ಕಾಂಡ್ಲಕಾಡು ವಿವಿಧ ರಾಜ್ಯದ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ದೇಶ ವಿದೇಶಿ  ಪ್ರವಾಸಿಗರು ಈಗ ಕೋಡಿ ಕಾಂಡ್ಲವನದತ್ತ ಮುಖ ಮಾಡುತ್ತಿದ್ದಾರೆ. ಕುದ್ರುವಿನ ಸುತ್ತಲಿನ ಕಾಂಡ್ಲಕಾಡುಗಳು ವೈವಿಧ್ಯಮಯ ಜಾತಿಯ ಮೀನುಗಳು, ಏಡಿ, ಸಿಗಡಿ, ಮೃದ್ವಂಗಿ ಪ್ರಭೇದಗಳಿಗೆ ನೆಲೆಯಾಗಿದೆ. ದೇಶ ವಿದೇಶದ ಪಕ್ಷಿ ಸಂಕುಲಗಳಿಗೆ ಆಸರೆ ನೀಡಿದೆ. ಸಾಲಿಗ್ರಾಮ-ಪಾರಂಪಳ್ಳಿ, ಕುಂದಾಪುರ-ಕೋಡಿ, ಕುಂದಾಪುರ-ಉಪ್ಪಿನಕುದ್ರು ಪ್ರದೇಶದಲ್ಲಿ ಕಾಂಡ್ಲವನಗಳು ಟೂರಿಸಂಗೆ ಪ್ರಸಿದ್ಧಿ ಪಡೆದಿವೆ. ಟೂರಿಸಂ ಸ್ಪಾಟ್‌ಗಳಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು ನಾನಾ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದರ ಜೊತೆ ಬ್ರಹ್ಮಾವರ ತಾಲೂಕು ಸಾಲಿಗ್ರಾಮದಲ್ಲಿ ಕಯಾಕಿಂಗ್‌ ಸಾಹಸಯಾನ ಅಲ್ಲದೆ ದೋಣಿ ವಿಹಾರಕ್ಕೆ ಇಲ್ಲಿನ ಕಾಂಡ್ಲವನ ಪ್ರಸಿದ್ಧಿ ಪಡೆದುಕೊಂಡಿದೆ. 
    ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾಂಡ್ಲವನ ಕಡಿಮೆಯಿದ್ದರೂ ಅದರ ಪುನರ್‌ ಬೆಳವಣಿಗೆ ಹೆಚ್ಚಾಗುತ್ತಿದೆ ಎನ್ನುತ್ತಿದೆ ಅರಣ್ಯ ಸಮೀಕ್ಷೆ ವರದಿ. 12.61 ಚದರ ಕಿ.ಮೀ.ಗಳಲ್ಲಿ ಉತ್ತರ ಕನ್ನಡ ಜಿಲ್ಲೆ 10.47 ಚದರ ಕಿ.ಮೀ., ಉಡುಪಿ 1.69 ಚದರ ಕಿ.ಮೀ., ದಕ್ಷಿಣ ಕನ್ನಡ ಜಿಲ್ಲೆ 0.45 ಚದರ ಕಿ.ಮೀ. ಹೊಂದಿದೆ. ದಟ್ಟ ಕಾಂಡ್ಲವನ ಉಡುಪಿ ಜಿಲ್ಲೆಯಲ್ಲಿ ಹೆಚ್ಚುಗುತ್ತಿರುವುದು ಗಮನಿಸಬೇಕಾದ ಸಂಗತಿ. 
    ಕಳೆದ ಎರಡು ದಶಗಳಲ್ಲಿ ಅಪರೂಪಕ್ಕೆ ಎನ್ನುವಂತೆ ಅಲ್ಲೊ ಇಲ್ಲೊ  ಕಾಂಡ್ಲವನಗಳು ಕಾಣುತ್ತಿತ್ತು . ಈಗಿಗ  ಕರಾವಳಿಯಲ್ಲಿ ಈ ಕಾಡ್ಲಾವನಗಳೆ ಹಸಿರು ಹೊದಿಕೆಯಾಗಿ ಮಾರ್ಪಟ್ಟಿದೆ. ಕಾಂಡ್ಲಹಸಿರುವನ ಟೂರಿಸಂ ಕೇಂದ್ರವಾಗಿಯೂ ರೂಪುಗೊಂಡಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 12.61 ಚದರ ಕಿ.ಮೀ.ನಷ್ಟು ಕಾಂಡ್ಲವಿದ್ದು ದೇಶದ ಒಟ್ಟಾರೆ ಕಾಂಡ್ಲವನ ಶೇ.0.26 ರಷ್ಟು ಆವರಿಸಿಕೊಂಡಿದೆ ಎಂದರೆ ಅತಿಶಯೋಕ್ತಿಯಲ್ಲ.


ಕರ್ನಾಟಕ ಕರಾವಳಿಯಲ್ಲಿ ಪ್ರಸ್ತುತ 300 ಹೆಕ್ಟೇರ್‌ಗೂ ಮಿಕ್ಕಿಕಾಂಡ್ಲ ಕಾಡು ಪಸರಿಸಿಕೊಂಡಿದೆ.  ವಾಸ್ತವದಲ್ಲಿಕುಂದಾಪುರ ವಿಭಾಗದಲ್ಲಿ 120 ಹೆಕ್ಟೇರ್‌ಗೂ ಮಿಕ್ಕಿದೆ ಎನ್ನವುದು ಗಮನಿಸಬೇಕಾದ ಸಂಗತಿ. ಕಡಲು ಮತ್ತು ಹಿನ್ನೀರಿನಲ್ಲಿನ ಆಹಾರ ಸರಪಳಿಯ ಕೊಂಡಿಯಾಗಿ ಕಾಂಡ್ಲಕಾಡು ಕೆಲಸ ನಿರ್ವಹಿಸುತ್ತಿವೆ. ನದಿ ಕಡಲು ಸೇರುವ ಹಾದಿಯಲ್ಲಿನ ಕಾಂಡ್ಲವನಗಳು ಜೀವವೈವಿಧ್ಯದ ನೆಲೆವೀಡಾಗಿ ಮಾರ್ಪಡುತ್ತಿದ್ದು ನಾನಾ ರಾಜ್ಯಗಳಿಂದ ಪ್ರವಾಸಿಗರು ಕಾಂಡ್ಲವನ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಅದರ ಜೊತೆ ಪರಿಸರದಲ್ಲಿ ಇರುವ ಜೀವ ಸಂಕೂಲಕದ ಸೂಕ್ಷ್ಮತೆಗಳನ್ನು ಅಧ್ಯಯನ ಮಾಡುವ ಆಸಕ್ತಿರಿಗೆ ಈ ಕಾಂಡ್ಲಾಕಾಡು ಹೇಳಿಮಾಡಿದ ತಾಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಇತ್ತೀಚೀನ ದಿನಗಳಲ್ಲಿ  ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ಕಡೆಯಿಂದ ಕಾಂಡ್ಲಾಕಾಡುಗಳಲ್ಲಿ ಅಧ್ಯಯನಕ್ಕಾಗಿ ಹೆಚ್ಚು ಮಂದಿ ಆಗಮಿಸುತ್ತಿರುವುದು ಕಂಡು ಬರುತ್ತಿದೆ.  
     ಇದಕ್ಕೆಲ್ಲಾ ಕಾರಣ ಕಾಂಡ್ಲವನಗಳು ಜೀವವೈವಿಧ್ಯತೆಯ ತಾಣವಾಗಿದೆ.  ಮೀನಿನ ಸಂತಾನೋತ್ಪತ್ತಿಗೆ, ಹವಾಮಾನದಲ್ಲಿನ ವೈಪರೀತ್ಯ ತಡೆಗೆ ಜೈವಿಕ ಗುರಾಣಿಯಾಗಿ ಕೆಲಸ ನಿರ್ವಹಿಸುತ್ತಿದೆ. ನದಿಪಾತ್ರದಲ್ಲಿರುವ ಅಸಂಖ್ಯ ಕುದ್ರುಗಳ ನದಿದಂಡೆ ಕೊರತೆ ಸಹಿತ ಜನರ ರಕ್ಷಣೆಯಲ್ಲಿ ಕಾಂಡ್ಲ ತಡೆಗೋಡೆಯಾಗಿ ಕೆಲಸ ನಿರ್ವಹಿಸುತ್ತಿವೆ. ದೇಶದ ವಿವಿಧ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ಕಾಂಡ್ಲದರ್ಶನ ಮಾಡಿಸಲು ಖಾಸಗಿ ಬೋಟಿಂಗ್‌ ವ್ಯವಸ್ಥೆ ಹೆಚ್ಚುತ್ತಿದೆ. ಕಾಂಡ್ಲವನದಲ್ಲಿನ ಪಕ್ಷಿ ಸಂಕುಲ ವೀಕ್ಷಣೆ ಮಹತ್ತಿಕೆ ಪಡೆದುಕೊಳ್ಳುತ್ತಿದೆ.
    ಕಾಂಡ್ಲದ ವಿಸ್ತಾರ ದಿನೇ ದಿನೆ ಹೆಚ್ಚುತ್ತಿರುವ ಹಿಂದೆ ಅರಣ್ಯ ಇಲಾಖೆಯ ಪರಿಶ್ರಮ ಅಡಗಿದೆ. ತಮಿಳುನಾಡಿನಲ್ಲಿ ಸುನಾಮಿ ಅಪ್ಪಳಿಸಿದ ಬಳಿಕ ಅತಿವೃಷ್ಟಿ ತಡೆಗೆ ಕಾಂಡ್ಲ ಸೂಕ್ತ ಎಂಬ ಅರಿವು ಮೂಡಿದ ಬಳಿಕ ಕರ್ನಾಟಕ ಕರಾವಳಿಯಲ್ಲಿ ಕಾಂಡ್ಲ ನೆಡುವಿಕೆ ತೀವ್ರತೆ ಪಡೆದುಕೊಂಡಿತ್ತು. ಅದರ ಪರಿಣಾಮ ಎಂಬಂತೆ ಕರಾವಳಿ ಕರ್ನಾಟಕದ ಸಮುದ್ರ ಮತ್ತು ನದಿತೀರದಲ್ಲಿನ ಕಾಂಡ್ಲವನಗಳು ಮಳೆಗಾಲದ ಕಡಲಬ್ಬರ, ನದಿ ಅಬ್ಬರ ತಡೆಯುವಲ್ಲಿ ಯಶಸ್ವಿಯಾಗಿವೆ.
  ಪ್ರಸ್ತುತ ಕುಂದಾಪುರ ತಾಲೂಕಿನ ಕಾಂಡ್ಲವನ  ದೇಶ ವಿದೇಶಗಳಿಂದ ಪ್ರವಾಸಿಗರನ್ನು ತನ್ನತ್ತ ಕೈಬಿಸಿ ಕರೆಯುತ್ತದೆ. ಕುಂದಾಪುರದ ಕೋಡಿಯಲ್ಲಿ ಕಾಂಡ್ಲವನ ವೀಕ್ಷಣೆಗೆಂದು ವ್ಯವಸ್ಥೆಯಾಗಿರುವ ಬೋಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಅದರೊಂದಿಗೆ ಕಯಾಕಿಂಗ್‌ ಸಾಹಸಯಾನ ಇದ್ದು ಅದುಸಹ ಇತ್ತೀಚೆಗೆ ಪ್ರಸಿದ್ಧಿ ಪಡೆಯುತ್ತಿರುವುದು ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾರಣವಾಗುತ್ತಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by