ಕನ್ನಡ ನಾಡು | Kannada Naadu

ಹಂಗಾರಕಟ್ಟೆ ಕಲಾಕೇಂದ್ರ ವಿದ್ಯಾರ್ಥಿಗಳ ಸಮಾವೇಶ.

26 Oct, 2024



ಕೋಟ : ಐವತ್ತು ವರ್ಷದ ಇತಿಹಾಸವಿರುವ ಗುಂಡ್ಮಿಯ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿಯ ವಿದ್ಯಾರ್ಥಿಗಳ ಸಮಾವೇಶ ಕಲಾಕೇಂದ್ರದ ಸದಾನಂದ ರಂಗಮಂಟಪದಲ್ಲಿ ನಡೆಯಿತು. ಧಾರ್ಮಿಕ ಮುಖಂಡ ಕೋಟದ ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ ಸಮಾವೇಶ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ ಕುಂದರ್ ವಹಿಸಿದ್ದರು. ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಸಮಾವೇಶದ ಉದ್ದೇಶವನ್ನು ತಿಳಿಸಿದರು. ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ವಿದ್ಯಾರ್ಥಿಗಳ ವ್ಯಕ್ತಿ ಚಿತ್ರ ಪುಸ್ತಕ ನಮ್ಮವರು ಬಿಡುಗಡೆಗೊಳಿಸಿ ಮಾತನಾಡಿ, ಯಕ್ಷಗಾನ ಕಲೆ ಮನೋರಂಜನೆಗೆ ಮಾತ್ರ ಸೀಮಿತವಾಗಿಲ್ಲ. ಅದು ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ನಿರ್ವಹಣೆ, ಬೆಳವಣಿಗೆಗೆ ಸಹಕಾರಿ ಎಂದರು. ಯಕ್ಷಗಾನ ಬದುಕಿಗೆ ಆಸರೆಯಾಗುವ ಜೊತೆಗೆ ಸಂಸ್ಕೃತಿಯನ್ನು ಎತ್ತಿ ಹಿಡಿದ ದೊಡ್ಡ ಕಲೆ. ಯಕ್ಷಗಾನ ಕಲಾಕೇಂದ್ರವನ್ನು ಹುಟ್ಟುಹಾಕಿದ, ಬೆಳವಣಿಗೆಗೆ ಕಾರಣವಾದವರನ್ನು ಅಭಿನಂದಿಸುತ್ತೇವೆ ಎಂದರು. ಸಾಹಿತಿ ಪ್ರೊ.ಉಪೇಂದ್ರ ಸೋಮಯಾಜಿ ಶಾಲೆ ಮತ್ತು ಶಿಷ್ಯರ ಸಂಬಂಧದ ಬಗ್ಗೆ ವಿವರಿಸಿದರು. ಯಕ್ಷ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ, ಮಟಪಾಡಿ ಚಂದ್ರಶೇಖರ ಕಲ್ಕೂರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿದರು. ಬೈಲೂರು ಸುಬ್ರಹ್ಮಣ್ಯ ಐತಾಳ್ ವಂದಿಸಿದರು. ಲಂಬೋದರ ಹೆಗಡೆ ನಿರೂಪಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by