ಉಡುಪಿ, : ಕರ್ನಾಟಕ ಕರಾವಳಿ ಭಾಗದ ಭಕ್ತರು ತಿರುಪತಿಗೆ ಭೇಟಿ ನೀಡಲು ಅನುಕೂಲವಾಗುವಂತೆ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಭಾರತೀಯ ರೈಲ್ವೆ ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ. ರೈಲು ಸಂಚಾರಕ್ಕೆ ವಿಜಯದಶಮಿ ಶನಿವಾರ ಚಾಲನೆ ಸಿಗಲಿದೆ. ರೈಲುಗಳ ವೇಳಾಪಟ್ಟಿ, ದರ, ನಿಲ್ದಾಣಗಳ ಮಾಹಿತಿ ಇಲ್ಲಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಈ ಕುರಿತು ಮಾಹಿತಿ ನೀಡಿದ್ದು, 'ದೈವ ದೇವರುಗಳ ಪುಣ್ಯ ಭೂಮಿ ಕರಾವಳಿ ಮೊದಲ ಬಾರಿಗೆ ವಿಜಯದಶಮಿಯ ಪಾವನ ಸಂದರ್ಭದಲ್ಲಿ ತಿರುಪತಿ ಜತೆ ರೈಲು ಸಂಪರ್ಕ ಆರಂಭಿಸಿದೆ. ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಅವರ ವಿಶೇಷ ಮುತುವರ್ಜಿಯಿಂದ ಇದು ಸಾಧ್ಯವಾಗಿದ್ದು ,ಇದಕ್ಕಾಗಿ ಉಡುಪಿ ಜನರು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದಾರೆ.
ತಿರುಪತಿಗೆ ಹೋಗುವ ಭಕ್ತರು ಕುಂದಾಪುರದಿಂದ ರೈಲು ಹತ್ತಿದರೆ ಮರುದಿನ ಬೆಳಗ್ಗೆ 11.30ರ ವೇಳೆಗೆ ರೇಣಿಗುಂಟ ತಲುಪಬಹುದು. ರೇಣಿಗುಂಟ ತಿರುಪತಿ ನಡುವಿನ ದೂರ 9 ಕಿ. ಮೀ. ತಿರುಪತಿಯಲ್ಲಿ ಸಂಜೆ ಅಥವ ಮರುದಿನ ಬೆಳಗ್ಗೆ ದರ್ಶನ ಮುಗಿಸಿಕೊಳ್ಳಬಹುದು. ಮರು ದಿನ ಸಂಜೆ 4.45ಕ್ಕೆ ಇದೇ ರೈಲು ರೇಣುಗುಂಟಗೆ ಆಗಮಿಸಲಿದ್ದು, ಅಲ್ಲಿಂದ ಉಡುಪಿ ಕಡೆ ಸಂಚಾರವನ್ನು ನಡೆಸಲಿದೆ. "ಕರಾವಳಿ-ತಿರುಪತಿಗೆ ಸಂಚಾರ ಈಗ ಸುಲಭ, ರೈಲು ಸೇವೆ ವಿಸ್ತರಣೆ ಮಾಹಿತಿ " ಕುಂದಾಪುರ-ತಿರುಪತಿ ಸ್ಲೀಪರ್ ಕೋಚ್ ದರ 510 ರೂ.ಗಳು, ಎಸಿ ಕೋಚ್ ದರ 1,110 ರೂ.ಗಳು. ಮಂತ್ರಾಲಯಕ್ಕೆ ಹೋಗುವ ಭಕ್ತರು ಸಹ ಈ ರೈಲಿನಿಂದ ಸಂಪರ್ಕವನ್ನು ಪಡೆದು ಸಂಚಾರವನ್ನು ನಡೆಸಬಹುದು ಎಂದು ರೈಲ್ವೆ ಇಲಾಖೆ ಹೇಳಿದೆ. ಶನಿವಾರ ಸಂಜೆ ಕುಂದಾಪುರ ರೈಲು ನಿಲ್ದಾಣದಲ್ಲಿ ಈ ರೈಲನ್ನು ಸ್ವಾಗತಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕರ್ನಾಟಕ ಕರಾವಳಿ ಮತ್ತು ತಿರುಪತಿ ಸಂಪರ್ಕಿಸುವ ರೈಲು ಬೇಕು ಎಂಬುದು ಹಲವು ವರ್ಷಗಳ ಬೇಡಿಕೆ ಆಗಿತ್ತು. 2024ರ ಲೋಕಸಭೆ ಚುನಾವಣೆ ಬಳಿಕ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರವನ್ನು ಬರೆದಿದ್ದರು.
ಈ ಬೇಡಿಕೆಗೆ ರೈಲು ಸಚಿವರು ಒಪ್ಪಿಗೆ ನೀಡಿದ್ದರು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿರುವ ಕುರಿತು ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಪತ್ರವನ್ನು ಬರೆದಿದ್ದರು. ರೈಲು ನಂಬರ್ 12789/ 12790 ಕಾಚಿಗುಡ-ಮಂಗಳೂರು ಎಕ್ಸ್‌ಪ್ರೆಸ್ ರೈಲು ಮುರುಡೇಶ್ವರ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದಿದ್ದಾರೆ.
Publisher: ಕನ್ನಡ ನಾಡು | Kannada Naadu