ದೀಪಾವಳಿಗೆ ಬಂಪರ್ ಬೋನಸ್ : ಉದ್ಯೋಗಿಗಳಿಗೆ ಮರ್ಸಿಡಸ್ ಬೆಂಜ್ ಕಾರುಗಳನ್ನೇ ನೀಡಿದ ಕಂಪನಿ
19 Oct, 2024
ಚೆನ್ನೈ : ದೀಪಾವಳಿಗೆ ಕಂಪನಿಗಳು ತಮ್ಮ ಸಿಬ್ಬಂದಿಗಳಿಗೆ ಉಡುಗೋರೆ ನೀಡಿವುದು ಸಾಮಾನ್ಯ. ಉಡುಗೋರೆಯೊಂದಿಗೆ ಸಿಹಿ ತಿಂಡಿ, ಬಟ್ಟೆ, ಪಟಾಕಿಗಳನ್ನು ನೀಡುತ್ತಿರುವುದನ್ನು ನಾವು ನೋಡಿದ್ದೇವೆ. ಆದರೆ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ದೀಪವಳಿ ಬೋನಸ್ ಆಗಿ ಕಾರುಗಳನ್ನೇ ಉಡುಗೊರೆಯಾಗಿ ನೀಡಿದೆ.
ವಾಸ್ತವದಲ್ಲಿಈ ಸಂಗತಿಯು ಬೌದ್ಯೋಗಿಕ ಕ್ಷೇತ್ರದದಲ್ಲಿ ಒಂದು ರೀತಿಯ ಹಲ್‌ಚಲ್ ಸೃಷ್ಟಿಮಾಡಿದೆ. ಸಂಸ್ಥೆಗಳು ನಷ್ಟದ ದಾರಿ ಹಿಡಿದು ಉದ್ಯೋಗವೇ ಇರುವುದೇ ಕಷ್ಟ ಎನ್ನುವ ಈ ಕಾಲದಲ್ಲಿ ಈ ಸುದ್ದಿಯಿಂದ ದುಡಿಯುವ ವರ್ಗದವರು ಖುಷಿ ಪಡುತ್ತಿದ್ದಾರೆ.
ಇದು ಅಚ್ಚರಿ ಅನಿಸಿದರೂ ಇದು ನಿಜ ಸಂಗತಿ. ಸಾಮಾನ್ಯವಾಗಿ ಹಬ್ಬಗಳು ಬಂದರೆ ಕಂಪನಿಗಳು ಒಂದಿಷ್ಟು ಹಣ, ಅಥವಾ ಸಣ್ಣಪುಟ್ಟ ಉಡುಗೊರೆಗಳನ್ನು ನೀಡುವುದು ವಾಡಿಕೆ. ಆದರೆ ಚೆನ್ನೈ ಮೂಲದ ಸ್ಟ್ರಕ್ಚರಲ್ ಸ್ಟೀಲ್ ಡಿಸೈನ್ ಮತ್ತು ಡಿಟೇಲಿಂಗ್ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ 28 ಕಾರುಗಳು ಮತ್ತು 29 ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದೆ. ಕಂಪನಿ ತನ್ನ ಉದ್ಯೋಗಿಗಳ ಶ್ರಮವನ್ನು ಶ್ಲಾಘಿಸುತ್ತ, ಹ್ಯುಂಡೈ, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಮತ್ತು ಮರ್ಸಿಡಿಸ್-ಬೆನ್ಜ್‌ನಂತಹ ಬ್ರಾಂಡ್ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಸಾಧಾರಣ ಹಿನ್ನೆಲೆಯಿಂದ 2005 ರಲ್ಲಿ ಸ್ಥಾಪಿತವಾದ ಈ ಕಂಪನಿಯು ಸದ್ಯ ಸುಮಾರು 180ಕ್ಕೂ ಹೆಚ್ಚು ನುರಿತ ಉದ್ಯೋಗಿಗಳನ್ನು ಹೊಂದಿದೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಕಣ್ಣನ್ ಅವರ ಅಭಿಪ್ರಾಯದಂತೆ, ಕಂಪನಿಯು ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಅವರ ಕೊಡುಗೆಯನ್ನು ಅಳೆಯಲಾಗುತ್ತದೆ ಎಂದು ಹೇಳಿದ್ದಾರೆ. ಕಂಪನಿಯ ಯಶಸ್ಸಿನಲ್ಲಿ ಉದ್ಯೋಗಿಗಳು ದಣಿವರಿಯದ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ನಮ್ಮ ಮೆಚ್ಚುಗೆಯನ್ನು ತೋರಿಸುವುದು ನಮ್ಮ ಕರ್ತವ್ಯ. ನಮ್ಮಗೆ ನಮ್ಮ ಉದ್ಯೋಗಿಗಳೆ ನಮ್ಮ ದೊಡ್ಡ ಆಸ್ತಿ. ನಮ್ಮ ಸಿಬ್ಬಂದಿಗಳ ಅಸಾಧಾರಣ ಬದ್ಧತೆ ಮತ್ತು ಸಮರ್ಪಣಾ ಭವದ ಧಕ್ಷತೆ ಎಲ್ಲರಿಗೂ ಮಾದರಿ. ಅವರ ಶ್ರಮವೇ ಫಲವೇ ಸಂಸ್ಥೆ ಇಂದು ಬೆಳೆದು ನಿಂತಿದೆ ಎಂದು ಹೇಳಲು ನಾವು ಹೆಮ್ಮೆಪಡುತ್ತೇವೆ ಎಂದಿದ್ದಾರೆ.
ಈ ಕಂಪನಿಯು ತನ್ನ ಉದ್ಯೋಗಿಗಳಿಗೆ ಉಡುಗೊರೆ ನೀಡುತ್ತಿರುವುದು ಇದು ಮೊದಲಲ್ಲ. 2022 ರಲ್ಲಿ ಇದು ಇಬ್ಬರು ಹಿರಿಯ ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿತು. ಇದಲ್ಲದೆ ಹೆಚ್ಚುವರಿಯಾಗಿ, ಕಂಪನಿಯು ಉದ್ಯೋಗಿಗಳ ಮದುವೆಗೆ ಆರ್ಥಿಕ ಸಹಾಯವನ್ನು ಸಹ ನೀಡುತ್ತದೆ. ಈ ವರ್ಷ ಅದನ್ನು 50,000 ರಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹಂತಗಳ ಹಿಂದಿನ ಉದ್ದೇಶವು ಉದ್ಯೋಗಿ ನೈತಿಕತೆ, ಪ್ರೇರಣೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದಾಗಿದೆ ಎಂದು ಕಂಪನಿಯ ಸಂಸ್ಥಾಪಕರ ಅಭಿಪ್ರಾಯವಾಗಿದೆ.
Publisher: ಕನ್ನಡ ನಾಡು | Kannada Naadu