ಕನ್ನಡ ನಾಡು | Kannada Naadu

ಭಾರಿ ಮಳೆ ಹಿನ್ನೆಲೆಯಲ್ಲಿ ಚೆನ್ನೈ- ಬೆಂಗಳೂರು ನಡುವೆ ರೈಲು ಸಂಚಾರ ರದ್ದು

16 Oct, 2024



ಚೆನ್ನೈ, ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಚೆನ್ನೈನಿಂದ ಬೆಂಗಳೂರಿಗೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನ ಕೆಲವು ಕಡೆ ಭಾರೀ ಮಳೆ ಸುರಿಯುತ್ತಿದೆ.

ಕಳೆದ ಎರಡು ದಿನಗಳಿಂದ ಚೆನ್ನೈನಲ್ಲಿ ಬಿಟ್ಟುಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಭಾರತೀಯ ಹವಾಮಾನ ಇಲಾಖೆ ತಮಿಳುನಾಡು ರಾಜ್ಯಾದ್ಯಂತ ಹೆಚ್ಚು ಮಳೆಯಾಗುವ ಮೂನ್ಸುಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ತ್ರೀವ ಮಳೆಯ ಪರಿಣಾಮ ರೈಲ್ವೆ ಇಲಾಖೆ ಇಂದು ಚೆನ್ನೈನಿಂದ  ಬೆಂಗಳೂರು ಹಾಗೂ ಮೈಸೂರಿಗೆ ಸಂಚರಿಸುವ ಕೆಲವು ರೈಲುಗಳನ್ನು ರದ್ದುಗೊಳಿಸಿದೆ. ಮಳೆಯಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ರೈಲುಗಳನ್ನು ರದ್ದುಗೊಳಿಸಿದೆ.
ಯಾವ್ಯಾವ ರೈಲುಗಳು ರದ್ದು:
(ರೈಲು ಸಂಖ್ಯೆ)
ಚೆನ್ನೈ-ಬೆಂಗಳೂರು – 12657
ಚೆನ್ನೈ-ಬೆಂಗಳೂರು – 12607, 12608
ಚೆನ್ನೈ-ಮೈಸೂರು – 12609
ಮೈಸೂರು-ಚೆನ್ನೈ – 12610
ಚೆನ್ನೈ-ಬೆಂಗಳೂರು – 12027
ಬೆಂಗಳೂರು-ಚೆನ್ನೈ – 12028
ಮೈಸೂರು- ಬೆಂಗಳೂರು – 20623
ಬೆಂಗಳೂರು-ಮೈಸೂರು – 20624
ಮೈಸೂರು-ಚೆನ್ನೈ ಸೆಂಟ್ರಲ್‌ -16022

Publisher: ಕನ್ನಡ ನಾಡು | Kannada Naadu

Login to Give your comment
Powered by