ಕನ್ನಡ ನಾಡು | Kannada Naadu

ವಾ.ಕ.ರ.ಸಾ.ಸಂಸ್ಥೆಯ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗಕ್ಕೆ ಪ್ರಶಂಸನಾ ಪತ್ರ ವಿತರಣೆ

07 Oct, 2024

 

ಬೆಂಗಳೂರು, :
 
  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸೆಪ್ಟೆoಬರ್ 2024 ರ ಮಾಹೆಯಲ್ಲಿ 09 ವಿಭಾಗಗಳಲ್ಲಿ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗವು ಉಳಿದ ವಿಭಾಗಗಳಿಗಿಂತ ನಿಗದಿಪಡಿಸಿದ ಗುರಿ ಸಾಧನೆ ಮಾಡಿರುವುದರಿಂದ ಇಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗ. ಎಂ, ಅವರು ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಮ್ ಸಿದ್ದಲಿಂಗೇಶ, ವಿಭಾಗೀಯ ಸಂಚಾರ ಅಧಿಕಾರಿಗಳಾದ ಕೆ.ಎಲ್. ಗುಡೆಣ್ಣವರ, ವಿಭಾಗೀಯ ಯಾಂತ್ರಿಕ ಅಭಿಯಂತರರಾದ ಪ್ರವೀಣ ಈಡೂರ ರವರು ಹಾಗೂ ವಿಭಾಗದ ವ್ಯಾಪ್ತಿಯ ನಾಲ್ಕು ಘಟಕಗಳ ಘಟಕ ವ್ಯವಸ್ಥಾಪಕರರುಗಳಿಗೆ ಪ್ರಶಂಸನಾ ಪತ್ರ ವಿತರಿಸಿ ಅಭಿನಂದಿಸಿದರು.

ನಂತರ ವ್ಯವಸ್ಥಾಪಕ ನಿರ್ದೇಶಕರು ಶ್ರೀಮತಿ ಪ್ರಿಯಾಂಗ. ಎಂ, ಅವರು ಮಾತನಾಡಿ, ಸಾರ್ವಜನಿಕ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಸಮಯಕ್ಕೆ ಸರಿಯಾಗಿ ವಾಹನಗಳ ಕಾರ್ಯಾಚರಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಈ ದಿನಗಳಲ್ಲಿ ದಸರಾ, ದೀಪಾವಳಿ ಹಾಗೂ ವಿಶೇಷ ಕಾರ್ಯಕ್ರಮಗಳ ನಿಮಿತ್ಯ ಜನ ಸಂಚಾರ ಹೆಚ್ಚಾಗಿ ಇರುವದರಿಂದ ಹಾಲಿ ಆಚರಣೆಯಲ್ಲಿರುವ ಎಲ್ಲಾ ಅನುಸೂಚಿಗಳನ್ನು ರದ್ದುಗೊಳಿಸದೇ ನಿಗದಿತ ವೇಳೆಗೆ ಆಚರಣೆ ಮಾಡುವುದು. ವಾರಾಂತ್ಯ / ವಿಶೇಷ ದಿನಗಳಲ್ಲಿ ಅವಶ್ಯಕತೆ ಹಾಗೂ ಪ್ರಯಾಣಿಕರ ಬೇಡಿಕೆಗನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಿಸುವಂತೆ ತಿಳಿಸಿದರು.

 ಈ ಸಂದರ್ಭದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರಾದ ವಿವೇಕಾನಂದ ವಿಶ್ವಜ್ಞ, ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾದ, ಜಿ ವಿಜಯಕುಮಾರ ಹಾಗೂ ಅಧಿಕಾರಿಗಳಾದ ರವಿ ಅಂಚಗಾವಿ, ಎಸ್ ಎಲ್ ನಾಗಾವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by