ಬೆಂಗಳೂರು, : ಕರ್ನಾಟಕ ಔಷದ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಮೆ. ಅಕ್ಯುರಾ ಖೇರ್ ಫಾರ್ಮಾಸ್ಯೂಟಿಕಲ್ಸ್ ಪ್ರೈ ಲಿಮಿಟೆಡ್ ಅವರ ಕ್ಯಾಲ್ಸಿವಿಲ್-ಎಕ್ಸ್ಟಿ ಟ್ಯಾಬ್ಲೆಟ್ಸ್ (ಕ್ಯಾಲ್ಸಿಯಂ ವಿಟಮಿನ್ ಡಿ3, ಮಿಥೈಲ್ಕೋಬಾಲಮಿನ್, ಎಲ್-ಮಿಥೈಲ್ಪೋಲೇಟ್ ಕ್ಯಾಲ್ಸಿಯಂ & ಪಿರಿಡಾಕ್ಸೋಲ್ 5 ಫಾಸ್ಪೇಟ್ ಟ್ಯಾಬ್ಲೆಟ್ಸ್). ಮೆ.ಸ್ಯಾಂಕ್ಟಸ್ ಗ್ಲೋಬಲ್ ಪಾರ್ಮುಲೇಷನ್ಸ್ ಲಿಮಿಟೆಡ್ನ ಅಸೇಕ್ಲೋಫೆನಕ್ ಅಂಡ್ ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್ (ಜಿಮೋಲ್-ಅಸೇ). ಮೆ.ಪಾರ್ಕ್ ಪಾರ್ಮಾಸ್ಯುಟಿಕಲ್ನ ಅಮೋಕ್ಸಿಲಿನ್ & ಪೊಟ್ಯಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐಪಿ (ಕ್ಲಾವ್ಪಾರ್ಕ್ 375). ಮೆ.ಮಲಿಕ್ ಲೈಫ್ಸೈನ್ಸ್ಸ್ ಪ್ರೈ. ಲಿಮಿಟೆಡ್ನ ಕ್ಲಾರೆನ್ಸ್ 625 (ಅಮೋಕ್ಸಿಲಿನ್&ಪೋಟಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐಪಿ 625 ಎಂಜಿ). ಮೆ. ಅಕಮ್ಸ್ ಡ್ರಗ್ಸ್ ಮತ್ತು ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ನ ಅಸೇಕ್ಲೋಫೆನಕ್, ಪ್ಯಾರಸೆಟಮೋಲ್ & ಸೆರಾಟಿಯೊಪೆಪ್ಟೀಡೆಸ್ ಟ್ಯಾಬ್ಲೆಟ್ಸ್ (ಟ್ವಾಗಿಕ್ ಎಸ್ಪಿ). ಮೆ. ಎಲಿಕೆಮ್ ಫಾರ್ಮಾಸ್ಯೂಟಿಕಲ್ಸ್ ಪ್ರೈ ಲಿಮಿಟೆಡ್ನ ಡೆಲೋಟ್ರೀಲ್-1 (ಕ್ಲೋನಾಜೆಪೆಮ್ ಮೌತ್ ಡಿಸೋಲ್ವಿಂಗ್ ಟ್ಯಾಬ್ಲೆಟ್ಸ್ 1 ಎಂಜಿ). ಮೆ. ಸುಪ್ರೆಕ್ಸ್ ಲ್ಯಾಬೋರೇಟರಿಸ್ನ ಲೋಪೆರಮೈಡ್ ಹೈಡ್ರೋಕಲೋರೈಡ್ ಟ್ಯಾಬ್ಲೆಟ್ಸ್ ಐಪಿ 2ಎಂಜಿ (ಲೋಮೋಕೇರ್). ಮೆ. ಮೆಡಿಕಾಮೆನ್ ಆರ್ಗಾನಿಕ್ಸ್ ಲಿಮಿಟೆಡ್ನ ಅಸಿಕ್ಲೋವಿರ್ ಟ್ಯಾಬ್ಲೆಟ್ಸ್ ಐಪಿ 200 ಎಂಜಿ. ಮೆ. ಸೂಪರ್ಕ್ಯೂರ್ ಬಯೋಟೆಕ್ ಪ್ರೈ. ಲಿಮಿಟೆಡ್ನ ಮೆಫೆಸ್ಪಾಸ್ (ಮೆಫಾನಾಮಿಕ್ ಅಸಿಡ್ & ಡಿಸೈಕ್ಲೋಮೈನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐಪಿ). ಮೆ. ಶ್ರೀ ರಾಮ್ ಹೆಲ್ತ್ಕೇರ್ ಪ್ರೈ.ಲಿಮಿಟೆಡ್ನ ಅಲ್ಮೆಫ್ಕೇಮ್-ಸ್ಪಾಸ್ (ಮೆಫೇನಾಮಿಕ್ ಅಸಿಡ್ & ಡಿಸೈಕ್ಲೋಮೈನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐಪಿ). ಮೆ. ಪಶ್ವಿಮ್ ಬಂಗಾ ಫಾರ್ಮಾಸ್ಯೂಟಿಕಲ್ಸ್ನ ಕಾಂಪೌಂಡ್ ಸೋಡಿಯಂ ಲ್ಯಾಕ್ವೆಟ್ ಇನ್ಜೆಕ್ಷನ್ ಐಪಿ (ರಿಂಗರ್ಸ್ ಲ್ಯಾಕ್ವೆಟ್ ಐಪಿ). ಮೆ. ಪಶ್ಚಿಮ್ ಬಂಗಾ ಫಾರ್ಮಾಸ್ಯೂಟಿಕಲ್ಸ್ನ ಕಾಂಪೌಂಡ್ ಸೋಡಿಯಂ ಲ್ಯಾಕ್ವೆಟ್ ಇನ್ಜೆಕ್ಷನ್ ಐಪಿ (ರಿಂಗರ್ಸ್ ಲ್ಯಾಕ್ವೆಟ್ ಐಪಿ), ಕಾಂಪೌಂಡ್ ಸೋಡಿಯಂ ಲ್ಯಾಕ್ವೆಟ್ ಇನ್ಜೆಕ್ಷನ್ ಐಪಿ (ರಿಂಗರ್ಸ್ ಲ್ಯಾಕ್ವೆಟ್ ಐಪಿ). ಮೆ. ಡೆಕ್ಕನ್ ಹೆಲ್ತ್ಕೇರ್ ಲಿಮಿಟೆಡ್ನ ರೆಜುಮಾ ಕ್ಯಾಪ್ಸೂಲ್ಸ್ (ಮಿಥೈಲ್ಕೋಬಾಲಮಿನ್, ಫಿರಿಡಾಕ್ಸಿನ ವಿಟ್ ಬಿ6, ಬೆನ್ಪೋಟಿಯಮೈನ್, ಅಲ್ಫಾಲಿಪೋಯಿಕ್ ಆಸಿಡ್, ಪೋಲಿಕ್ ಆಸಿಡ್ & ಇನೋಸಿಟಾಲ್ ಕ್ಯಾಪ್ಸೂಲ್ಸ್) (ಸ್ಪೂರಿಯಸ್). ಮೆ. ಡೆಕ್ಕನ್ ಹೆಲ್ತ್ಕೇರ್ ಲಿಮಿಟೆಡ್, ಪ್ಲಾಟ್ನ ಮಾಂಟಾಲ್ ಟ್ಯಾಬ್ಲೆಟ್ಸ್ (ಮಲ್ಟಿವಿಟಮಿನ್ಸ್, ಸೆಲೆನೀಯಂ, ಐರನ್ ಅಂಡ್ ಜಿಂಕ್ ಟ್ಯಾಬ್ಲೆಟ್ಸ್) (ಸ್ಪೂರಿಯಸ್) ಔಷಧಿಗಳನ್ನು/ಕಾಂತಿವರ್ಧಕಗಳನ್ನು ಉತ್ತಮ ಗುಣಮಟ್ಟದ್ದಲ್ಲವೆಂದು ಘೋಷಿಸಿರುತ್ತಾರೆ.
ಈ ಔಷಧಿಗಳನ್ನು / ಕಾಂತಿವರ್ಧಕಗಳನ್ನು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದೆಂದು ಸೂಚಿಸಿದೆ. ಯಾರಾದರೂ ಸದರಿ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರಲು ಕೋರಿದೆ ಹಾಗೂ ಸಾರ್ವಜನಿಕರು ಉಪಯೋಗಿಸಬಾರದೆಂದು ಔಷಧ ನಿಯಂತ್ರಕರು (ಪ್ರ) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu