ಈ ತಿಂಗಳಲ್ಲಿ ಎರಡು ಬಾರಿ ಗರುಡವೇರಿ ಬರಲಿದ್ದಾನೆ ತಿರುಪತಿ ತಿಮಪ್ಪ
06 Aug, 2024
ತಿರುಪತಿ: ಭಕ್ತ ಪರಿಪಾಲಕ ಎಂದು ಕರೆಸಿಕೊಂಡ ಏಳುಮಲೆಯ ಒಡೆಯ ತಿರುಪತಿ ತಿಮ್ಮಪ್ಪ ಈ ಬಾರಿ ಗರುಡಾರೂಢನಾಗಿ ಭಕ್ತರಿಗೆ ದಯಪಾಲಿಸಲಿದ್ದಾನೆ. ಈ ಬಾರಿಯ ಶ್ರಾವಣದಲ್ಲಿ ಸ್ವಾಮಿವಾರಿಯು ಎರಡು ಬಾರಿ ಗರುಡವಾಹನದ ಮೇಲೆ ಸವಾರಿಯಾಗಲಿದೆ.

ಅಗಷ್ಟ ತಿಂಗಳಲ್ಲಿ ಎರಡು ವಿಶೇಷಗಳು ಬಂದಿರುವುದೇ ತಿಮ್ಮಪ್ಪ ಒಂದು ತಿಂಗಳಲ್ಲಿ ಎರಡು ಬಾರಿ ಗರುಡಾರೂಢನಾಗಲು ಕಾರಣವಾಗಿದೆ. ಆ. 9ರಂದು ಗರುಡ ಪಂಚಮಿ ಮತ್ತು ಆ.19 ಶ್ರಾವಣ ಪೌರ್ಣಮಿ ಇರುವುದರಿಂದ ತಿರುಪತಿಯಲ್ಲಿ ವಿಶೇಷ ಗರುಡ ಸೇವೆ ನಡೆಯಲಿದೆ. ಗರುಡ ಪಂಚಮಿ ಮತ್ತು ಶ್ರಾವಣಿ ಪೌರ್ಣಮಿಯ ದಿನದಂದು ತಿಮಪ್ಪ ಸ್ವಾಮಿ ಗರುಡವಾಹನದ ಮೇಲೆ ನಾಲ್ಕು ಮಹಡಿ ಬೀದಿಗಳಲ್ಲಿ ಸಂಚರಿಸಿ ಭಕ್ತರನ್ನು ಆಶೀರ್ವದಿಸುವುದು ವಾಡಿಕೆ.
ಆ. 9 ರಂದು ಗರುಡ ಪಂಚಮಿಯ ದಿನದಂದು ಸಂಜೆ 7 ರಿಂದ 9 ರವರೆಗೆ ತಿರುಮಲದ ಮಹಡಿ ಬೀದಿಗಳಲ್ಲಿ ತನ್ನಿಷ್ಟದ ವಾಹನವಾದ ಗರುಡನನ್ನು ವೆಂಕಪ್ಪನೇರಿ ಭಕ್ತಾದಿಗಳಿಗೆ ಆಶೀರ್ವಾದ ನೀಡಲಿದ್ದಾನೆ. ಗರುಡಾತನು ಶ್ರೀವಾರಿಯ ವಾಹನಗಳಲ್ಲಿ ಅಗ್ರಗಣ್ಯನು. ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ) ವತಿಯಿಂದ ಪ್ರತಿ ವರ್ಷ ಗರುಡ ಪಂಚಮಿಯನ್ನು ಶ್ರಾವಣ ಶುಕ್ಲ ಪಕ್ಷದ 5 ನೇ ದಿನದಂದು ಆಚರಿಸಲಾಗುತ್ತದೆ.
ನವವಿವಾಹಿತರು ತಮ ವೈವಾಹಿಕ ಜೀವನ ಸುಖಮಯವಾಗಿರಲು ಗರುಡಪಂಚಮಿ ಪೂಜೆಯನ್ನು ಮಾಡುತ್ತಾರೆ ಮತ್ತು ಮಹಿಳೆಯರು ತಮ ಮಗುವನ್ನು ಗರುಡನಂತೆ ಬಲಶಾಲಿ ಮತ್ತು ಒಳ್ಳೆಯ ಸ್ವಭಾವವನ್ನು ಹೊಂದಲು ಪೂಜಿಸುತ್ತಾರೆ ಎಂದು ನಂಬಲಾಗಿದೆ. ಆ. 19 ರಂದು ಶ್ರಾವಣ ಪೌರ್ಣಮಿ ಬರುತ್ತದೆ ಮತ್ತು ಟಿಟಿಡಿ ವತಿಯಿಂದ ಗರುಡ ವಾಹನ ಸೇವೆಯು ಪ್ರತಿ ತಿಂಗಳ ಹುಣ್ಣಿಮೆಯಂದು ನಡೆಸಲಾಗುತ್ತದೆ.

ಆ.19 ರಂದು ಶ್ರಾವಣ ಪೌರ್ಣಮಿಯಂದು ಪೂರ್ಣಮಿ ಗರುಡಸೇವೆ ವಿಜಂಭಣೆಯಿಂದ ನಡೆಯಲಿದೆ. ಇದರ ಅಂಗವಾಗಿ ಸಂಜೆ 7ರಿಂದ 9ರವರೆಗೆ ತಿಮಪ್ಪ ಸ್ವಾಮಿಯು ಗರುಡ ವಾಹನವೇರಿ ದೇವಸ್ಥಾನದ ನಾಲ್ಕು ಬೀದಿಗಳಲ್ಲಿ ಸಂಚರಿಸಿ ಭಕ್ತರಿಗೆ ದರ್ಶನ ನೀಡಲಿದ್ದಾರೆ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
Publisher: ಕನ್ನಡ ನಾಡು | Kannada Naadu