ಬೀದರ್: ʻಕೃಷಿತೋ ನಾಸ್ತಿ ದುರ್ಭಿಕ್ಷ..ʼ ಎನ್ನುವ ಮಾತೊಂದು ಇದೆ. ಕೃಷಿ ಇದ್ದಲ್ಲಿ ದುಬೀಕ್ಷೆ ಎನ್ನುವುದು ಇರಲಾರದು ಎನ್ನುವುದು ಈ ಮಾತಿನ ಅರ್ಥ. ನಮ್ಮದು ಕೃಷಿ ಪ್ರಧಾನ ರಾಷ್ಟ. ಭಾರತದ ಕೇಂದ್ರ ಸರಕಾರ ಹಾಗೂ ದೇಶದ ಎಲ್ಲಾ ರಾಜ್ಯ ಸರಕಾರಗಳು ಕೃಷಿ ಕ್ಷೇತ್ರಕ್ಕೆ ಹೆಚ್ಚೀನ ಆಧ್ಯತೆ ನೀಡಲಾಗತ್ತದೆ. ಅದೇ ರೀತಿಯಲ್ಲಿ ರೈತರ ಕುರಿತು ಹೆಚ್ಚಿನ ಮುತುವರ್ಜಿವಹಿಸಿ ಕೃಷಿ ಚಟುವಟಿಕೆಗೆ ಸಹಾಯ ಸಹಕಾರ ಮಾಡುತ್ತ ಬಂದಿರುವುದು ನೋಡಿದ್ದೇವೆ.
ಆದರೆ ನಮ್ಮ ರಾಜ್ಯದಲ್ಲಿ ಕೃಷಿಕರ ಬಗ್ಗೆ ನಮ್ಮ ಸರಕಾರಕ್ಕೆ ಮಮಕಾರವೇ ಇಲ್ಲವೇ..? ಕನ್ನಡದ ಕುರಿತು ಅಭಿಮಾನವೂ ಇಲ್ಲವೇ ಎನ್ನುವ ಸಂಶಯ ಸತ್ಯವಾಗುತ್ತಿದೆ. ಅದಕ್ಕೆ ಕಾರಣ ರಾಜ್ಯದ ಗಡಿ ಬೀದರ ಜಿಲ್ಲೆಯಲ್ಲಿ ಇರುವ ಕನ್ನಡ ಕೃಷಿ ಡಿಪ್ಲೋಮಾ ಕಾಲೇಜ್ನ್ನು ನಿಲ್ಲಿಸುವ ಮೂಲಕ ತನ್ನ ಪುರುಷಾರ್ಥವನ್ನು ಸಧಿಸಲು ರಾಜ್ಯ ಸರಕಾರ ಹಾಗೂ ಕೃಷಿ ಇಲಾಖೆ ಮುಂದಾಗಿದೆ. ಕಳೆದ 12 ವರ್ಷಗಳಿಂದ ನಿರಂತರ ನಡೆದುಕೊಂಡು ಬಂದಿದ ಬೀದರ ತಾಲೂಕಿನ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನಡೆಯುತ್ತಿದ್ದ ಕನ್ನಡ ಕೃಷಿ ಡಿಪ್ಲೊಮಾ ಕೋರ್ಸ್ ಪ್ರಸಕ್ತ ಸಾಲಿನಿಂದ ಸ್ಥಗಿತಗೊಳಿಸಲು ಕರ್ನಾಟಕ ಸರ್ಕಾರ ಘನ ನಿರ್ಧಾರ ಮಾಡಿದೆ.
2012ರಲ್ಲಿ ಬಹು ನೀರಿಕ್ಷೇಯನ್ನು ಇಟ್ಟುಕೊಂದು ಅಂದಿನ ಸರಕಾರ ಪ್ರಸ್ತುತ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಕನ್ನಡ ಕೃಷಿ ಡಿಪ್ಲೊಮಾ ಕೋರ್ಸ್ಗಾಗಿ ಕಾಲೇಜ್ನ್ನು ಆರಂಭಿಸಿತ್ತು. ಈ ಕೇಂದ್ರವನ್ನು ರಾಯಚೂರಿನಲ್ಲಿ ಇರುವ ಕೃಷಿ ವಿಜ್ಞಾನ ಕೇಂದ್ರದ ಸುಪರ್ಧಿಗೆ ಇತ್ತು ಸೂಸುತ್ರವಾಗಿ ಎರಡು ವರ್ಷ ಅವಧಿಯ ಕೃಷಿ ಡಿಪ್ಲೊಮಾ ಕೋರ್ಸ್ನ್ನು ನಡೆಸಿಕೊಂಡು ಬರುತ್ತಿತ್ತು. ಎಸ್ಎಸ್ಎಲ್ಸಿ ನಂತರ ವಿದ್ಯಾರ್ಥಿಗಳು ಈ ಎರಡು ವರ್ಷ ಅವಧಿಯ ಕೃಷಿ ಡಿಪ್ಲೊಮಾ ಕೋರ್ಸ್ಗೆ ಪ್ರವೇಶ ಪಡೆದು ತಮ್ಮ ವಿಧ್ಯಾಭಾಸವನ್ನು ಮುಂದುವರೆದು ಕೃಷಿ ಕ್ಷೇತ್ರಕ್ಕೆ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಒಂದು ಲೇಕ್ಕಾಚಾರದ ಪ್ರಕಾರ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಕಲಿತು ತಮ್ಮ ವೃತ್ತಿಯಲ್ಲಿ ತೋಡಗಿಕೊಂಡಿದ್ದಾರೆ. ಇನ್ನೂಕಳೆದ ವರ್ಷವು ಎರಡು ತರಗತಿ ಸೇರಿ 90ಕ್ಕೂ ಅಧಿಕ ವಿದ್ಯಾರ್ಥಿಗಳು ಡಿಪ್ಲೊಮಾ ಪದವಿ ಓದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಕಾಲೇಜಿನಲ್ಲಿ ಪ್ರತಿ ವರ್ಷ 50 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಕಾಲೇಜಿಗಾಗಿ ಜನವಾಡ ಸಮೀಪದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ದ್ಯಾರ್ಥಿಗಳ ಅಧ್ಯಯನಕ್ಕಾಗಿ ಪ್ರತ್ಯೇಕವಾದ ಕಟ್ಟಡ ನಿರ್ಮಿಸಲಾಗಿದೆ. ಇಷ್ಟು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಸೇರಿದಂತೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತ ಬಂದಿರುವ ಈ ಕೇಂದ್ರವನ್ನು ಸರಕಾರ ಏಕಾಏಕಿ ನಿಲ್ಲಿಸುತ್ತಿದೆ. ಕಳೆದ ಒಂದು ದಶಕದಿಂದ ಯಶಸ್ವಿಯಾಗಿ ಕೋರ್ಸ್ ನಡೆಸಿಕೊಂಡು ಬರಲಾಗಿತ್ತಾದರೂ, ಸರಕಾರದ ಈ ಕ್ರಮದಿಂದ ಸಮಸ್ತ ಕನ್ನಡಿಗರು ಸೇರಿದಂತೆ, ಈ ಭಾಗದ ಜನರಲ್ಲಿ, ಕೃಷಿ ಆಸಕ್ತರಲ್ಲಿ ಹಾಗೂ ವಿದ್ಯಾರ್ಥಿಗಳ ಕಳವಳಕ್ಕೆ ಕಾರಣವಾಗಿದೆ.
ಸರಕಾರ ಈ ಕಾಲೇಜು ನಡೆಸಲು ದುಡ್ಡಿಲ್ಲ ಎನ್ನುವ ಕಾರಣ ನೀಡಿ ಈ ಬಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರೀಯೆ ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ್ನಡ ಕೃಷಿ ಡಿಪ್ಲೊಮಾ ಕೋರ್ಸ್ ಸ್ಥಗಿತಗೊಳಿಸಲು ಸರಕಾರ ಮುಂದಾಗಿದೆ. ಸರಕಾರದ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಈ ಡಿಪ್ಲೊಮಾ ಕಾಲೇಜು ತನ್ನ ಅಸ್ಥಿತ್ವ ಕಳೆದುಕೊಳ್ಳಬೇಕಾಗಿದೆ ಎನ್ನುವುದು ಒಂದು ವಾದವಾಗಿದೆ. ರಾಜ್ಯದಲ್ಲಿ ಐದು ಯೋಜನೆಗಳನ್ನು ಸಾಂಘವಾಗಿ ನಡೆಸಿಕೊಂಡು ಬರುತ್ತಿರುವ ರಾಜ್ಯ ಸರಕಾರಕ್ಕೆ ಭವಿಷ್ಯದಲ್ಲಿ ಕೃಷಿಕರನ್ನು ಕೃಷಿ ತಜ್ಞರನ್ನು ತಯಾರು ಮಾಡಬೇಕಿದ್ದ ವಿದ್ಯಾ ಕೇಂದ್ರವನ್ನು ನಡೆಸುವುದಕ್ಕೆ ಹಣಕಾಸಿನ ಸಮಸ್ಯೆ ಎನ್ನುತ್ತಿರುವುದು ಬೇಜವಾಬ್ದಾರಿಯ ನಿರ್ಧಾರ ಎಂದು ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ಸರಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಇನ್ನೂ ಕೃಷಿ ಡಿಪ್ಲೋಮಾ ಕೋರ್ಸ್ ಏಕಾ ಏಕಿ ನಿಂತು ಹೋಗಿರುವ ಬಗ್ಗೆ ಕಾಲೇಜಿನ ಪ್ರಾಂಶೂಪಾಲರಾದ ಡಾ. ಆರಾಧ್ಯ ಜಾದವ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸರಕಾರ ಕೋಟ್ಯಾಂತರ ರೂ. ಖರ್ಚುಮಾಡಿ ಕೃಷಿ ಡಿಪ್ಲೋಮಾ ಕಾಲೇಜನ್ನು ಸ್ಥಾಪಿಸಿತ್ತು. ಅದಕ್ಕೆ ಕಾರಣ ಕೆವಲ 2 ವರ್ಷದ ಡಿಪ್ಲೊಮಾ ಕೋರ್ಸ್ನಿಂದ ಕೃಷಿಕ ವಿದ್ಯಾರ್ಥಿಗಳಿಗೆ, ಈ ತರಬೇತಿ ಪಡೆಯುವವರಿಗೆ ಹೆಚ್ಚಿನ ಹೊರೆ ಬೀಳುತ್ತಿರಲಿಲ್ಲ. ಎರಡು ವರ್ಷದಲ್ಲಿ ಡಿಪ್ಲೋಮಾ ಮುಗಿಸಿ ಉದ್ಯೋಗಕ್ಕೋ ಹೆಚ್ಚಿನ ವಿಧ್ಯಾಭಾಸಕ್ಕೂ ಅಥವಾ ಸ್ವಂತ ಕೃಷಿಗೋ ವಿದ್ಯಾರ್ಥಿಗಳು ತೊಡಗಿಕೊಳ್ಳುತ್ತದ್ದರು. ಮಕ್ಕಳ ಬದುಕು ಹಸನಾಗುತ್ತಿತ್ತು. ಈಗ ಸರಕಾರದ ಈ ನಿರ್ಧಾರದಿಂದ ನಮ್ಮ ಕಾಲೇಜಿನ ಪರಸ್ಥಿತಿ ಇದ್ದು ಇಲ್ಲದಂತಾಗಿದೆ. ಸರಕಾರದ ಈ ನಿರ್ಧಾರಿಂದ ಕಾಲೇಜಿನಲ್ಲಿ ಇರುವ ಎಲ್ಲಾ ಅತ್ಯಾಧುನಿಕ ಉಪಕರಣಗಳು ತುಕ್ಕು ಹಿಡಿಯುತ್ತಿವೆ. ಕ್ಲಾಸ್ ರೂಂಮ್ಗಳು ಧೂಳು ತುಂಬಿ ಉಪಯೋಗಿಸುವೇ ಕಷ್ಟವಾಗುತ್ತಿದೆ. ನಿರಂತರ 12 ವರ್ಷಗಳ ಕಾಲ ನಡೆಯುತ್ತಿದ್ದ ಕೃಷಿ ಡಿಪ್ಲೋಮಾ ಕಾಲೇಜನ ತರಗತಿಗಳು ಬಂದಾಗಿರುವುದು ಗ್ರಾಮೀಣ ಭಾಗದ ಮಕ್ಕಳಿಗೆ ಭಾರೀ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮುತುವರ್ಜಿ ವಹಿಸಿ ಕೃಷಿ ಡಿಪ್ಲೊಮಾ ಕಾಲೇಜು ನಿಲ್ಲದಂತೆ ನೋಡಿಕೊಳ್ಳಬೇಕು. ಒಂದು ವೆಳೆ ದುಡ್ಡಿನ ಕೊರತೆಯಿಂದ ಈ ಕಾಲೇಜು ನಿಂತರೆ ನಮ್ಮ ರಾಜ್ಯದ ಸ್ಥಿತಿಗೆ ನಾವೇ ಅಸಹ್ಯ ಪಡಬೇಕಾಗುವ ಕಾಲ ಇದು ಎನ್ನುವಂತಾಗುವುದು. ಈ ಬಾಗದ ಜನಪ್ರತಿನಿಧಿಗಳು ಸಹ ಈ ಕೃಷಿ ಡಿಪ್ಲೋಮಾ ಕಾಲೇಜು ನಿಲ್ಲದಂತೆ ನೋಡಿಕೊಳ್ಳುವ ಜವಾಬ್ದಾರಿ ಅವರ ಹೆಗಲಿಗೂ ಇದೆ ಎನ್ನುವುದನ್ನು ಮರೆಯಬಾರದು. ಸ್ವತಃ ಕೃಷಿ ಹಿನ್ನಲೆಯಿಂದ ಬಂದಿರುವ ಕೃಷಿ ಸಚಿವರು, ಮುಖ್ಯಂತ್ರಿಗಳು ಈ ಬಗ್ಗೆ ಅಸಡ್ಡೆ ತೋರದೆ ಕನ್ನಡ ಕೃಷಿ ಡಿಪ್ಲೋಮಾ ಕಾಲೇಜ ಪ್ರಾರಂಭಕ್ಕೆ ಜವಾಬ್ದಾರಿ ವಹಿಸಬೇಕಾಗಿದೆ.
Publisher: ಕನ್ನಡ ನಾಡು | Kannada Naadu