650 ಕೋ. ರೂ. ವೆಚ್ಚದಲ್ಲಿ ಟಾಟಾ ಸನ್ಸ್ ನವರಿಂದ ಸಿದ್ದವಾಗಲಿದೆ ಅಯೋಧ್ಯೆಯಲ್ಲಿ ದೇವಾಲಯಗಳ ಮ್ಯೂಸಿಯಂ
27 Jun, 2024

ಬೆಂಗಳೂರು : ವಿಶ್ವ ಪ್ರಸಿದ್ಧ ರಾಮ ಮಂದಿರುವ ಇರುವ ಅಯೋಧ್ಯೆಯಲ್ಲಿ 650 ಕೋಟಿ ರೂ.ಗಳ ವೆಚ್ಚದಲ್ಲಿ ದೇವಾಲಯಗಳ ವಸ್ತುಸಂಗ್ರಹಾಲಯ ನಿರ್ಮಿಸುವ ಟಾಟಾ ಸನ್ಸ್ ಸಂಸ್ಥೆ ಮುಂದಾಗಿದೆ. ಈ ಕುರಿತ ಅವರ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಸಚಿವ ಸಂಪುಟ ಅನುಮೋದನೆ ನೀಡಿದೆ.

ಅದೇ ರೀತಿಯಲ್ಲಿ ಯೋಗಿ ನೇತ್ರತ್ವದ ಸರಕಾರದ ಸಚಿವ ಸಂಪುಟವು ಪಾರಂಪರಿಕ ಕಟ್ಟಡಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ಪ್ರಸ್ತಾಪಕ್ಕೂ ಅನುಮೋದನೆ ನೀಡಿದೆ. ಜೊತೆಗೆ ದೇವಾಲಯದ ಪಟ್ಟಣ ಅಯೋಧ್ಯೆಯಲ್ಲಿ 100 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಟಾಟಾ ಸನ್ಸ್ನ ಮತ್ತೊಂದು ಪ್ರಸ್ತಾವನೆಗೂ ಸಹ ಅನುಮೋದನೆ ನೀಡಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಹೆಲಿಪ್ಯಾಡ್ಗಳನ್ನು ನಿರ್ಮಿಸುವ ಮೂಲಕ ಲಕ್ನೋ, ಪ್ರಯಾಗ್ರಾಜ್ ಮತ್ತು ಕಪಿಲವಾಸ್ತುಗಳಲ್ಲಿ ಹೆಲಿಕಾಪ್ಟರ್ ಸೇವೆಗಳನ್ನು ಪ್ರಾರಂಭಿಸುವುದು ಸೇರಿದಂತೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಇತರ ಮಹತ್ವದ ಪ್ರಸ್ತಾಪಗಳಾಗಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಈ ಕುರಿತು ಯುಪಿ ಪ್ರವಾಸೋದ್ಯಮ ಸಚಿವ ಜೈವಿರ್ ಸಿಂಗ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿ, ಟಾಟಾ ಸನ್ಸ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ಅಡಿಯಲ್ಲಿ 650 ಕೋಟಿ ರೂಪಾಯಿ ವೆಚ್ಚದಲ್ಲಿ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಕೇಂದ್ರ ಸರ್ಕಾರದ ಮೂಲಕ ಯೋಜನೆಯನ್ನು ಪ್ರಸ್ತಾಪಿಸಿದೆ ಎಂದು ತಿಳಿಸಿದ್ದಾರೆ.

ಈ ನಿಯೋಜಿತ ಅತ್ಯಾಧುನಿಕ ವಸ್ತುಸಂಗ್ರಹಾಲಯವು ಅಂತಾರಾಷ್ಟ್ರೀಯ ಗುಣಮಟ್ಟವನ್ನು ಹೊಂದಿದ್ದು, ಭಾರತದ ಪ್ರಸಿದ್ಧ ದೇವಾಲಯಗಳ ಇತಿಹಾಸ ಮತ್ತು ವಾಸ್ತುಶಿಲ್ಪವನ್ನು ಪ್ರದರ್ಶಿಸಲಿದೆ. ಟಾಟಾ ಸನ್ಸ್ ಕೇಂದ್ರ ಸರ್ಕಾರದ ಮೂಲಕ ಈ ಯೋಜನೆಗೆ ಪ್ರಸ್ತಾಪಮಾಡಿತ್ತು. ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿಯಡಿ 650 ಕೋಟಿ ರೂ.ಗಳ ವೆಚ್ಚದಲ್ಲಿ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ಮುಂದಾಗಿತ್ತು. ದೇವಾಲಯದ ಪಟ್ಟಣದಲ್ಲಿ ಇತರ ಅಭಿವೃದ್ಧಿ ಕಾರ್ಯಗಳಿಗಾಗಿ ಹೆಚ್ಚುವರಿ 100 ಕೋಟಿ ರೂ.ಗಳ ಕಂಪನಿಯ ಪ್ರಸ್ತಾಪವನ್ನು ಕ್ಯಾಬಿನೆಟ್ ಅನುಮೋದಿಸಿದೆ ಎಂದು ಯುಪಿ ಪ್ರವಾಸೋದ್ಯಮ ಸಚಿವ ಜೈವಿರ್ ಸಿಂಗ್ ತಿಳಿಸಿದ್ದಾರೆ..

ಲಕ್ನೋದ ಕೋಥಿ ರೋಶನ್ ದುಲ್ಹಾ, ಮಥುರಾದ ಬರ್ಸಾನಾ ಜಲ್ ಮಹಲ್ ಮತ್ತು ಕಾನ್ಪುರದ ಶುಕ್ಲಾ ತಲಾಬ್ (ಕೊಳ) ಈ ಮೂರು ಪಾರಂಪರಿಕ ಕಟ್ಟಡಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಪ್ರವಾಸೋದ್ಯಮ ಫೆಲೋಶಿಪ್ ಕಾರ್ಯಕ್ರಮದಡಿ ಸಂಶೋಧಕರನ್ನು ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.
ವಸ್ತುಸಂಗ್ರಹಾಲಯದ ಕುರಿತು ಕಳೆದ ವರ್ಷವೇ ಚಿಂತನೆ ನಡೆಸಲಾಗಿದ್ದು, ಸಿಎಂ ಆದಿತ್ಯನಾಥ್ ಹಾಗೂ ಹಿರಿಯ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಈ ಕುರಿತು ಪ್ರಸ್ತಾಪ ಮಾಡಿದ್ದರು. ಈ ವೇಳೆ ದೇವಾಲಯದ ವಸ್ತುಸಂಗ್ರಹಾಲಯದ ಕಲ್ಪನೆಯನ್ನು ಮೋದಿಯವರು ಇಷ್ಟಪಟ್ಟಿದ್ದಾರೆ. ನಂತರ ಈ ಕುರಿತು ವಿವರವಾಗಿ ಚರ್ಚಿಸಲಾಗಿದೆ ಎಂದು ಯೋಜನೆ ಸಂಪೂರ್ಣ ವಿವರಣೆಗಳನ್ನು ಮಾದ್ಯಮದ ಮುಂದೆ ವಿವರಿಸಿದ್ದಾರೆ.
Publisher: ಕನ್ನಡ ನಾಡು | Kannada Naadu