ಕನ್ನಡ ನಾಡು | Kannada Naadu

 ಭಾರತದ ಪಾಲಿಗೆ ಕಳಸ ಪ್ರಾಯವಾಗಲಿವೆ ಈ ಪಂಚ ಪಥಗಳು.... 

26 Jun, 2024

ಬೆಂಗಳೂರು : ದೇಶಗಳ ಅಭಿವೃದ್ಧಿಯ ಮಾನದಂಡವೇ ಮೂಲಭೂತ ಸೌಕರ್ಯಗಳು ಹಾಗೂ ಆ ದೇಶದ ಜಿಡಿಪಿ. ಇವುಗಳಲ್ಲಿ ಕಾಮನ್‌ ಆಗಿರುವುದು ಹೆದ್ದಾರಿಗಳು. ಊರ ದಾರಿ ಸರಿ ಇದ್ದರೆ ಊರೂ ಸರಿ ಇದೆ ಎಂದರ್ಥ. ಅಂತಹ ಊರಿನಲ್ಲಿ ಜನ ಜೀವನವೂ ಸಹ ಸರಿ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಮತ್ತೇ ಹೇಳಬೇಕಾಗಿಲ್ಲ.  ಇದೇ ಮಾತು ನಮ್ಮ ದೇಶದಕ್ಕೂ ಅನ್ವಯಿಸುತ್ತಿದೆ.  ದೇಶದ ಹೆದ್ದಾರಿಗಳು ಥಳಥಳನೆ ನಳನಳಿಸುತ್ತಿವೆ.  ಹೊಸದಾಗಿ ಆರಂಭವಾಗಿರುವ ದೇಶದ   5 ಪ್ರಮುಖ ಹೆದ್ದಾರಿಗಳನ್ನು ಇನ್ನೂ ಮುಂದೆ  ಜಾಗತೀಕ ಮಟ್ಟದಲ್ಲಿ ಹೆಸರು ಮಾಡಲಿದೆ ಎಂದರೆ ಅತಿಶಯೋಕ್ತಿಯಲ್ಲ. 

ದೇಶದಲ್ಲಿ ಈಗಾಗಲೇ ಹಲವು ಎಕ್ಸ್‌ಪ್ರೆಸ್‌ವೇಗಳು ನಿರ್ಮಾಣವಾಗಿದ್ದರೆ, ಇನ್ನೂ ಪ್ರಮುಖ ಕೆಲವು ಹೆದ್ದಾರಿಗಳು ನಿರ್ಮಾಣ ಹಂತದಲ್ಲಿವೆ. ಹಾಗೆಯೇ ಕೆಳಗೆ ನೀಡಲಾಗಿರುವ 5 ಪ್ರಮುಖ ಹೆದ್ದಾರಿಗಳಿಂದ ಇಡೀ ಭಾರತ ದೇಶದ ಚಿತ್ರಣವೇ ಬದಲಾಗಲಿದೆ ಎಂದು ಮೋಟಾ ಓಕ್‌ ಟೇನ್ ವರದಿ ಮಾಡಿದೆ. ಹಾಗಾದರೆ ಅವುಗಳು ಯಾವುವು ಹಾಗೂ ಏನೆಲ್ಲಾ ಬದಲಾವಣೆಗಳಾಗಲಿವೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

* ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ: 


ದೇಶದಲ್ಲಿ ಅನೇಕ ಎಕ್ಸ್‌ಪ್ರೆಸ್‌ವೇಗಳನ್ನು ಕಾಣಬಹುದಾಗಿದ್ದು, ಅವುಗಳಲ್ಲಿ ದೇಶದ ಅತೀ ಉದ್ದದ ಹೆದ್ದಾರಿಗಳಲ್ಲಿ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಕೂಡ ಒಂದಾಗಿದೆ. ಇದೊಂದು ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದೆ. ಆದ್ದರಿಂದ ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳಂತಹ ನಿಧಾನ ವೇಗದ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 1,386 ಕಿಲೋ ಮೀಟರ್‌ ಉದ್ದದ ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದೆ. ಇದು ಭಾರತದ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಇನ್ನು ಈ ಹೆದ್ದಾರಿ ನಿರ್ಮಾಣದಿಂದ ವ್ಯಾಪಾರ ವಹಿವಾಟು ಸೇರಿದಂತೆ ಆರ್ಥಿಕತೆಯಲ್ಲಿ ಅಭಿವೃದ್ಧಿ ಕಾಣಬಹುದಾಗಿದೆ.

4-8-ಲೇನ್ ಪ್ರವೇಶ-ನಿಯಂತ್ರಿತ ಎಕ್ಸ್‌ಪ್ರೆಸ್‌ವೇ 24 ಗಂಟೆಗಳಿಂದ 12 ಗಂಟೆಗಳವರೆಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದೆ. ಅಲ್ಲದೆಭ ಇದನ್ನು 12 ಲೇನ್‌ಗಳಿಗೆ ವಿಸ್ತರಣೆ ಮಾಡಲುಬಹುದು ಎನ್ನುವ ಮಾಹಿತಿ ತಿಳಿದುಬಂದಿದೆ.

* ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: 



ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮೂಲಕ ಹಾದುಹೋಗುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, 10 ಪ್ಯಾಕೇಜ್‌ಗಳ ಕಾಮಗಾರಿಗಳ ಪ್ರಸ್ತುತ ಕಾಮಗಾರಿಯನ್ನು ನೋಡುವುದಾದರೆ, ಈ ಯೋಜನೆಯು 2025ರ ಜೂನ್‌ ವೇಳೆಗೆ ಮುಗಿಯಲಿದೆ ಎನ್ನುವ ಮಾಹಿತಿ ಇದೆ.

ಈ ಹೈಸ್ಪೀಡ್ ಕಾರಿಡಾರ್ ಬೆಂಗಳೂರು-ಚೆನ್ನೈ  ಎರಡು ನಗರಗಳ ನಡುವಿನ ಸಂಪರ್ಕ ಕಲ್ಪಿಸಲಿದೆ.  ಅಲ್ಲದೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಮಾರ್ಗದ ಉದ್ದಕ್ಕೂ ಕೈಗಾರಿಕಾ ವಲಯಕ್ಕೆ ಪ್ರಯೋಜನ ಆದಂತಾಗಲಿದೆ.

* ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ: 



ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 16, 2021ರಂದು ಯುಪಿಇಐಡಿಎಯ ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. 340.8 ಕಿಲೋ ಮೀಟರ್‌ ಉದ್ದದ ಈ ಎಕ್ಸ್‌ಪ್ರೆಸ್‌ವೇ ಭಾರತದಲ್ಲೇ ಅತಿ ಉದ್ದವಾಗಿದ ಹೆದ್ದಾರಿಯಾಗಲಿದೆ. ಉತ್ತರ ಪ್ರದೇಶದ ಘಾಜಿಪುರ ದಿಂದ ಲಖನೌಗೆ ಸಂಪರ್ಕ ಕಲ್ಪಿಸುತ್ತದೆ.

ಈ ಹೆದ್ದಾರಿಯು ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳನ್ನು ಸಂಪರ್ಕ ಕಲ್ಪಿಸಲಿದೆ. ಈ ಎಕ್ಸ್‌ಪ್ರೆಸ್‌ವೇ ರಾಜ್ಯದ ಪೂರ್ವ ಭಾಗಕ್ಕೆ ತಡೆರಹಿತ ಸಂಪರ್ಕವನ್ನು ಕಲ್ಪಿಸಲಿದೆ. ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಾರಣವಾಗಲಿದೆ. ಅಲ್ಲದೆ, ಪ್ರವಾಸೋದ್ಯಮ, ವ್ಯಾಪಾರ, ವಹಿವಾಟುಗಳಿಗೂ ತುಂಬಾ ಸಹಾಯ ಆಗಲಿದೆ.

* ದೆಹಲಿ-ಕತ್ರಾ ಎಕ್ಸ್‌ಪ್ರೆಸ್‌ವೇ:



 ಈ ಹೆದ್ದಾರಿಯು ರಾಷ್ಟ್ರೀಯ ರಾಜಧಾನಿ ದೆಹಲಿಯನ್ನು ಕತ್ರಾದೊಂದಿಗೆ ಸಂಪರ್ಕಿಸುತ್ತದೆ. ಇದು ಪೂಜ್ಯ ವೈಷ್ಣೋ ದೇವಿ ದೇಗುಲಕ್ಕೆ ಭೇಟಿ ನೀಡಬಯಸುವ ಯಾತ್ರಾರ್ಥಿಗಳಿಗೆ ತುಂಬಾ ಸುಲಭದ ಮಾರ್ಗವಾಗಲಿದೆ. ಈ ಮೂಲಕ ಇದು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಅಲ್ಲದೆ, ಸ್ಥಳೀಯ ಆರ್ಥಿಕತೆಯ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತಿದೆ.

* ಗಂಗಾ ಎಕ್ಸ್‌ಪ್ರೆಸ್‌ವೇ



ಮಹಾಕುಂಭ ಮೇಳಕ್ಕೆ ದೇಶದ ವಿವಿಧ ಭಾಗಗಳಿಂದಲೇ ಅಲ್ಲದೆ, ವಿದೇಶಗಳಿಂದಲೂ ಇಲ್ಲಿಗೆ ಭೇಟಿ ನೀಡುತ್ತಾರೆ. ಯಾತ್ರಿಕರ ಪ್ರಯಾಣ ಸುಗಮಗೊಳಿಸಲು ಬಹುಶಃ ಈ ಎಕ್ಸ್‌ಪ್ರೆಸ್‌ವೇ ತುಂಬಾ ಸಹಾಯ ಆಗಲಿದೆ. 2025ರ ಮಹಾಕುಂಭಕ್ಕೂ ಮುನ್ನವೇ ಈ ಎಕ್ಸ್‌ಪ್ರೆಸ್‌ವೇಯನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಈ ಹೆದ್ದಾರಿಯಲ್ಲಿ  6-ಲೇನ್ ಎಕ್ಸ್‌ಪ್ರೆಸ್‌ವೇಗಳು ಇರಲಿವೆ.

ಇದು ಮುಂದಿನ ದಿನಗಳಲ್ಲಿ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ, ಪ್ರಯಾಗರಾಜ್-ವಾರಣಾಸಿ ಎಕ್ಸ್‌ಪ್ರೆಸ್‌ವೇ ಮತ್ತು ಮೀರತ್-ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯೊಂದಿಗೆ ಸಂಪರ್ಕ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಇದರ ಒಟ್ಟು ಉದ್ದ 1,047 ಕಿಲೋ ಮೀಟರ್‌ ಆಗಿದ್ದು, ಅದರಲ್ಲಿ 594 ಕಿಲೋ ಮೀಟರ್‌ ಮಂಜೂರಾಗಿದೆ. ಈ ಹೆದ್ದಾರಿಯು ಗಂಗಾ ನದಿಗೆ ಸಮಾನಾಂತರವಾಗಿ ಸಾಗಲಿದ್ದು, ಉತ್ತರ ಪ್ರದೇಶದ ಎಲ್ಲಾ ಪ್ರಮುಖ ನಗರಗಳನ್ನು ಒಳಗೊಂಡಿದೆ. ಮೀರತ್ ಮತ್ತು ಪ್ರಯಾಗರಾಜ್ ನಡುವಿನ ಪ್ರಯಾಣದ ಸಮಯವನ್ನು 12 ಗಂಟೆಗಳಿಂದ 6 ಗಂಟೆಗಳವರೆಗೆ ಕಡಿಮೆ ಮಾಡಲಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by