ಬೆಂಗಳೂರು: ಇನ್ನೂ ಮುಂದೆ ಕೆಂಪೇಗೌಡ ಅಂತಾರಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶೀಯ ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೌಲಭ್ಯಗಳನ್ನು ನೀಡುವ ಹಿನ್ನೆಲೆಯಲ್ಲಿ ಭರಿದಂದ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ.
ಬೆಂಗಳೂರು ಕೆಂಪೇಗೌಡ ಅಂತಾರಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಕಾಮಗಾರಿಯನ್ನು ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ (ಬಿಐಎಎಲ್)ನವರು ಮುಂದಿನ ಎರಡು ತಿಂಗಳೊಳಗಾಗಿ ಆರಂಭಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಟರ್ಮಿನಲ್ 1 ನವೀಕರಣ ಕಾರ್ಯವು 2026ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಇದರಿಂದಾಗಿ ದೇಶೀಯ ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೌಲಭ್ಯಗಳು ಸಿಗಲಿದೆ. ಇನ್ನು "ಇದರ ನವೀಕರಣದ ಕಾಮಗಾರಿಯೂ ಆಗಸ್ಟ್ 2024ರ ವೇಳೆಗೆ ಪ್ರಾರಂಭವಾಗುತ್ತದೆ. ಅಲ್ಲದೆ ಇದೀಗ ಕಾಮಗಾರಿಗೆ ಸುಗಮಗೊಳಿಸುವ ದೃಷ್ಟಿಯಿಸಮದ ಪೂರ್ವಸಿದ್ಧತಾ ಚಟುವಟಿಕೆಗಳು ನಡೆಯುತ್ತಿವೆ" ಎಂದು BIAL ಮೂಲದಿಂದ ಮಾಹಿತಿ ಲಭ್ಯವಾಗಿದೆ.
ಮೇ 24, 2008ರಂದು ಕಾರ್ಯಾಚರಣೆಯನ್ನು ಆರಂಭಿಸಿದ ವಿಮಾನನಿಲ್ದಾಣದ ಟರ್ಮಿನಲ್ 1ರಲ್ಲಿ ದೇಶೀಯ ವಿಮಾನಗಳಿಗೆ ಮಾತ್ರ ಕಾರ್ಯನಿರ್ವಹಣಗೆ ಅವಕಾಶ ನೀಡಲಾಗಿತ್ತು. ಟರ್ಮಿನಲ್ 2ನಲ್ಲಿ ಕೆಲವು ದೇಶೀಯ ವಿಮಾನಗಳ ಜೊತೆಗೆ ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆಗೆ ಮೀಸಲಾಗಿದೆ. ಟರ್ಮಿನಲ್-2ನಲ್ಲಿ ಜನವರಿ 15, 2023ರಂದು ದೇಶೀಯ ವಿಮಾನಗಗಳ ಕಾರ್ಯಾಚರಣೆ ಮತ್ತು ಸೆಪ್ಟೆಂಬರ್ 12, 2023ರಂದು ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳು ಆರಂಭವಾದವು. ಇನ್ನು ನವೀಕರಣ ಹಿನ್ನೆಲೆ ಟರ್ಮಿನಲ್-1ರ ಕೊಠಡಿಗಳ ಸ್ಥಳಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ಪಶ್ಚಿಮ ಬಸ್ ಬೋರ್ಡಿಂಗ್ ಗೇಟ್ಗಳ ಕೆಡವುವಿಕೆ ಮತ್ತು ಕಚೇರಿ ಸ್ಥಳಗಳ ಸ್ಥಳಾಂತರ ಸೇರಿದಂತೆ ಕೆಲಸಗಳೊಂದಿಗೆ ಕಾಮಗಾರಿ ಪ್ರಾರಂಭವಾಗುತ್ತದೆ. ಪ್ರಾಥಮಿಕ ಹಂತಗಳು 2025ರ ಆರಂಭದಲ್ಲಿ ಪ್ರಾರಂಭವಾಗುವ ಪ್ರಮುಖ ಕೆಲಸಗಳಿಗೆ ದಾರಿ ಮಾಡಿಕೊಡಲಾಗಿದೆ.
ಬ್ಯಾಗೇಜ್ ಹ್ಯಾಂಡ್ಲಿಂಗ್ ಸಿಸ್ಟಮ್ಸ್, ಚೆಕ್-ಇನ್, ಸೆಕ್ಯುರಿಟಿ, ಡಿಪಾರ್ಚರ್ ಲಾಂಜ್ಗಳು/ಹೋಲ್ಡ್ ರೂಮ್ಗಳು ಮತ್ತು ವರ್ಗಾವಣೆ ಭದ್ರತೆಯಂತಹ ಸೌಲಭ್ಯಗಳ ವ್ಯವಸ್ಥೆ ಈ ಕಾಮಗಾರಿಯಲ್ಲಿ ಇರಲಿದೆ. ಪ್ರಯಾಣಿಕರನ್ನು ಆಕರ್ಶಿಸಲು ಹೆಚ್ಚು ಸೌಕರ್ಯಗಳು ಮತ್ತು ಕಾರ್ಯಾಚರಣೆಯ ಸೌಲಭ್ಯಗಳಿಗೆ ಅನುಗುಣವಾಗಿ ನವೀಕರಣ ಮಾಡಲಾಗುತ್ತದೆ. ಈಗಾಗಗಲೇ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳು ಟರ್ಮಿನಲ್-2ಗೆ ಸ್ಥಳಾಂತರಗೊಂಡಿದ್ದು, ಇದೀಗ ಇಲ್ಲಿ ಟರ್ಮಿನಲ್-1ರ ದೇಶೀಯ ವಿಮಾನಗಳ ಕಾರ್ಯಚರಣೆ ಮಾಡಲು ಅನುವು ಮಾಡಿಕೊಡಲಾಗುತ್ತದೆ," ಎಂದು ಬಿಐಎಎಲ್ ವಕ್ತಾರರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಾರ್ಯಾಚರಣೆಗೆ ಅಡ್ಡಿಯಾಗುವುದನ್ನು ತಪ್ಪಿಸಲು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಟರ್ಮಿನಲ್-1ರಲ್ಲಿ ಪ್ರಸಕ್ತ ಅಭಿವೃದ್ಧಿ ಕಾಮಗಾರಿಯನ್ನು ಮಾಡಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಮತ್ತೊಂದೆಡೆ "2026ರ ಅಂತ್ಯದ ವೇಳೆಗೆ ಕೆಲಸಗಳು ಬಹುತೇಕ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಿದೆ,
ಪ್ರಮುಖವಾಗಿ ಈ ಅಭಿವೃದ್ಧಿ ಕಾಮಗಾರಿಯು, ಚೆಕ್-ಇನ್ ಬ್ಯಾಗೇಜ್ ಇಲ್ಲದೆ ಪ್ರಯಾಣಿಕರಿಗೆ ಮೀಸಲಾದ ಪ್ರವೇಶವನ್ನು ಒಳಗೊಂಡಿರುತ್ತದೆ. ವಿಶ್ರಾಂತಿಗಾಗಿ ಸ್ಥಳವಕಾಶ, ಯುವ ಪ್ರಯಾಣಿಕರನ್ನು ರಂಜಿಸಲು ಮಕ್ಕಳ ಆಟದ ಪ್ರದೇಶ, ಶೌಚಾಲಯಗಳು, ಸುಧಾರಿತ ಎಸ್ಕಲೇಟರ್ಗಳು, ಎಲಿವೇಟರ್ಗಳು ಸೇರಿದಂತೆಯೆ ಅಗತ್ಯ ಸುಧಾರಿತ ಸೇವೆಗಳು ಇರಲಿದೆ.
ಟರ್ಮಿನಲ್ 1 ಮತ್ತು 2ರಲ್ಲಿ ವಾರ್ಷಿಕ 52 ಮಿಲಿಯನ್ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಇನ್ನು ಟರ್ಮಿನಲ್ ನವೀಕರಣ ಪೂರ್ಣಗೊಂಡ ನಂತರ, ಒಟ್ಟು ಪ್ರಯಾಣಿಕರ ಸಾಮರ್ಥ್ಯವು 60 ಮಿಲಿಯನ್ಗೆ ಹೆಚ್ಚಾಗಲಿದೆ. ಟರ್ಮಿನಲ್-2ನ ನೇ ಹಂತದಲ್ಲಿ 20 ಮಿಲಿಯನ್ ಸಾಮರ್ಥ್ಯದ ಪ್ರಯಾಣಿಕರು ಪ್ರಯಾಣಿಕರು ಪ್ರಯಾಣ ಮಾಡಲಿದ್ದಾರೆ. ಈ ಮೂಲಕ ಇದು ವಿಮಾನ ನಿಲ್ದಾಣದ ದಕ್ಷಿಣ ಭಾಗದಲ್ಲಿ 40 ಪ್ರತಿಶತ ಪ್ರದೇಶದ ಅಭಿವೃದ್ಧಿ ಹೊಂದಿದ್ದು, ಇದು 45 ಮಿಲಿಯನ್ ಪ್ರಯಾಣಿಕರನ್ನು ಪೂರೈಸಲಿದೆ.
ಇತ್ತೀಚೆಗೆ ಅಂತಾರಾಷ್ಟ್ರೀಯ ಕಾರ್ಯಾಚರಣೆಯನ್ನು ಆರಂಭಿಸಿದ ಟರ್ಮಿನಲ್-2, ಪ್ರಸ್ತುತ ಗಂಟೆಗೆ ಗರಿಷ್ಠ 1,400 ದೇಶಿಯ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದ್ದು, ಗಂಟೆಗೆ 1,300 ಅಂತರಾಷ್ಟ್ರೀಯ ಸೇವೆಯ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಇದು ಒಟ್ಟಾರೆ ಸಾಮರ್ಥ್ಯದ 45-50 ಪ್ರತಿಶತದಷ್ಟು ಕಾರ್ಯನಿರ್ವಹಿಸುತ್ತಿದೆ. ಈ ವಿಸ್ತರಣೆಯು ಹೆಚ್ಚುತ್ತಿರುವ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಮತ್ತು ಸೇವೆಯ ವಿಸ್ತರಣೆಯೇ ಪ್ರಮುಖ ಆದ್ಯೆತೆಯಾಗಿ ಕೆಲಸ ಆರಂಭವಾಗಿದೆ ಎಂದು ವಿಮಾನಯಾನ ಪ್ರಾಧಿಕಾರ ಹೇಳಿಕೊಂಡಿದೆ.
ಮುಂಬರುವ ಟರ್ಮಿನಲ್-3 ಸ್ಥಿತಿಯ ಕುರಿತು ಸೂಚನೆ ನೀಡಿದ ಅಧಿಕಾರಿಗಳು, 2030ರ ದಶಕದ ಆರಂಭದಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-3 ವಿಮಾನ ಸೇವೆಗೆ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಈ ಮೂಲಕ ವಾರ್ಷಿಕವಾಗಿ 90-100 ಮಿಲಿಯನ್ ಪ್ರಯಾಣಿಕರನ್ನು ಹೆಚ್ಚಳವಾಗಲಿದ್ದಾರೆ. ಈ ಮೂಲಕ ಬೆಂಗಳೂರು ಕೆಂಪೇಗೌಡ ಅಂತಾರಷ್ಟ್ರೀಯ ವಿಮಾನ ನಿಲ್ದಾಣ ಜಾಗತೀಕ ಮಟ್ಟದಲ್ಲಿ ಹೆಸರು ಮಾಡಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
Publisher: ಕನ್ನಡ ನಾಡು | Kannada Naadu