ಕನ್ನಡ ನಾಡು | Kannada Naadu

ಗುಪ್ತವಾಗಿಯೇ ಸಿದ್ದವಾಗುತ್ತಿದೆ ಬೆಂಗಳೂರಿನ ಮೊದಲ ಕಾರ್ ರೇಸಿಂಗ್ ಟ್ರ್ಯಾಕ್..!

03 Jun, 2024


ಬೆಂಗಳೂರು:  ಸಿಲಿಕಾನಿಕ್‌ ಸಿಟಿ ಬೆಂಗಳೂರು ಪ್ರತಿ ದಿನ ಒಂದಿಲ್ಲೊಂದು ಹೊಸತನಕ್ಕೆ ಕಾರಣವಾಗುತ್ತಲೇ ಇರುತ್ತದೆ. ಅವುಗಳಲ್ಲಿ ಕೆಲವು ಕ್ಷಣಿಕವಾಗಿ ಜನರ ಮನಸ್ಸನ್ನು ಸೇಳೆದರೆ ಇನ್ನೂ ಕೆಲವು ಶಾಶ್ವತವಾದ ಅಭಿವೃದ್ಧಿ ಎಂದು ಹೇಳ ಬಹುದಾಗಿದೆ. ಅಂತಹದ್ದೆ ಒಂದು ಬದಲವಾಣೆಗೆ ಬೆಂಗಳೂರು ಸಿದ್ದವಾಗಿರುವುದರಿಂದ ಜಾಗತೀಕ ಮಟ್ಟದಲ್ಲಿ ಬೆಂಗಳೂರು ಮತ್ತೊಮ್ಮೆ ಹೆಸರು ಮಾಡಲಿದೆ ಎನ್ನುವ ಭರವಸೆ ಮೂಡುತ್ತಿದೆ. 
      ಅಂತಹ ಜಾಗತೀಕ ಮಟ್ಟದಲ್ಲಿ ಜನರು ಇಷ್ಟಪಡುವ ದುಬಾರಿ ಕ್ರೀಡೆ ಎಂದು ಗುರುತಿಸಿಕೊಂಡ ಮೋಟಾರ್‌ ರೇಸಿಂಗ್‌ ಟ್ರ್ಯಾಕ್‌ ಸಿದ್ದವಾಗುತ್ತಿದೆ. ಜಾಗತೀಕ ಮಟ್ಟದ ರೇಸಿಂಗ್‌ ಪ್ರೀಯಿಗೆ ಇನ್ನು ಮುಂದೆ ನಮ್ಮ ಬೆಂಗಳೂರು ವೇದಿಕೆಯಾಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಡಾ. ಶಿವರಾಮ ಕಾರಂತ್ ಲೇಔಟ್‌ನಲ್ಲಿ ಬೆಂಗಳೂರಿನ ಮೊದಲ ಮೋಟಾರ್‌ಸ್ಪೋರ್ಟ್ ರೇಸ್ ಟ್ರ್ಯಾಕ್ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ. ಈ ಯೋಜನೆ ಮೋಟಾರ್‌ ಸ್ಪೋರ್ಟ್‌ ಪ್ರೀಯರ ಪಾಲಿಗೆ ಸಂತಸದ ಸುದ್ದಿಯಾಗಿದೆ. 
     ಎಲ್ಲವೂ ಅಂದುಕೊಂಡಂತೆ ನಡೆದರೆ 2026ರ ವೇಳೆಗೆ ದೇವನಹಳ್ಳಿ ಬಳಿಯಲ್ಲಿ ನಗರದ ಏಕೈಕ ಹಾಗೂ ಮೊದಲ ರೇಸ್ ಟ್ರ್ಯಾಕ್  ಸಿದ್ಧಗೊಳ್ಳುವ ನಿರೀಕ್ಷೆಯಿದೆ. ರೇಸ್ ಟ್ರ್ಯಾಕ್ ಫಲಪ್ರದವಾಗುವ ಕುರಿತು ಈಗಾಗಲೇ ವಿವಿಧ ಹಂತಗಳಲ್ಲಿ  ಚರ್ಚೆಗಳು ನಡೆಯುತ್ತಿದ್ದು,  ಈ ವರ್ಷದ ನವೆಂಬರ್ ಅಂತ್ಯಕ್ಕೆ ಶಿವರಾಮ ಕಾರಂತ ಲೇಔಟ್‌ನಲ್ಲಿ ರೇಸ್ ಟ್ರ್ಯಾಕ್ ಸಿದ್ಧಗೊಳ್ಳಬಹುದು ಎನ್ನುವ ಮಾತು ಸಹ ರೇಸಿಂಗ್‌ ಪ್ರೀಯರ ವಲಯದಲ್ಲಿ ಕೇಳಿಬರುತ್ತಿದೆ. ಇನ್ನೊಂದು ಕಡೆ ನವೆಂಬರ್‌ನೊಳಗೆ ಟ್ರ್ಯಾಕ್ ರಚಿಸಲು ಸೋಮಶೆಟ್ಟಿ ಹಳ್ಳಿಯ ಉದ್ದೇಶಿತ 25 ಎಕರೆ ಕ್ರೀಡಾಂಗಣದ ಸುತ್ತಲಿನ ಲೇಔಟ್‌ನಲ್ಲಿ 2.5 ಕಿಮೀ ಜಾಗವನ್ನು ಮೀಸಲಿಡಲಾಗಿದೆ ಎಂದು ಬಿಡಿಎ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ. 


  ಸದ್ಯದಲ್ಲಿ ಸಿದ್ದಮಾಡುವ ಟ್ರ್ಯಾಕ್‌ನ 2.5 ಕಿಮೀ ಜಾಗವು ಕ್ರೀಡಾಂಗಣವನ್ನು ಸುತ್ತುವರೆದಿರುವ ಲೂಪ್ ರೂಪದಲ್ಲಿ ವ್ಯವಸ್ಥೆ ಮಾಡಬಹುದಾಗಿದೆ.  ಈವೆಂಟ್‌ನ ಅವಧಿಯಲ್ಲಿ ಮಾತ್ರ ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಪ್ಲಾನ್‌ ಮಾಡಲಾಗುತ್ತಿದೆ.  ರೇಸಿಂಗ್‌ ಕ್ರೀಡಾಕೂಟ ನಡೆಯುವ ಕೆಲವು ದಿನಗಳವರೆಗೆ ಮಾತ್ರ ಸದ್ಯ ನಿಯೋಜಿತ ಜಾಗವನ್ನು ಸ್ವಾಧಿನದ ಪಡಸಿಕೊಂಡ, ಅದಕ್ಕೆ ಬೇಕಾದ  ಉನ್ನತೀಕರಣ ಮತ್ತು ರೇಸಿಂಗ್‌ಗೆ ಬ್ಯಾರಿಕೇಡಿಂಗ್ ಮತ್ತು ಇತರ ಕೆಲಸಗಳನ್ನು ಮಾಡಲಾಗುವುದು ಎನ್ನಲಾಗಿದೆ. ರೇಸಿಂಗ್ ಇಲ್ಲದೆ ಇದ್ದಾಗ, ಬಿಡಿಎ ಮಂಜೂರು ಮಾಡಿದವರಿಗೆ ರಸ್ತೆ ಮುಕ್ತವಾಗರಲಿದೆ ಎಂದು ಸ್ಪಷ್ಟಪಡಿಸಲಾಗುತ್ತಿದೆ. 
    ಇನ್ನು ಶಾಶ್ವತ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರತ್ಯೇಕ ಜಾಗವನ್ನು ಮೀಸಲಿಡಲಾಗಿದೆ. ಉದ್ದೇಶಿತ ಕ್ರೀಡಾಂಗಣದ ಸುತ್ತಲಿನ ರಸ್ತೆಗಳನ್ನು ಬಹು ಕ್ರೀಡಾ ಸೌಲಭ್ಯಕ್ಕೆ ನೀಡಲಾಗಿದೆ. ಈಗಾಗಲೇ ಕ್ರೀಡಾಂಗಣಕ್ಕೆ ಜಾಗ ಮೀಸಲಿಡಲಾಗಿದೆ. ಇದನ್ನು ನಿರ್ಮಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 


 ಬೆಂಗಳೂರಿನಲ್ಲಿ ಭವಿಷ್ಯದ ಮೋಟಾರ್‌ ರೇಸಿಂಗ್‌ ಈವೆಂಟ್‌ಗಳನ್ನು ನಡೆಸಬೇಕು. ಆಮೂಲಕವೂ ಜಾಗತೀಕ ಮಟ್ಟದಲ್ಲಿ ಬೆಂಗಳೂರು ಗುರುತಿಸಿಕೊಳ್ಳುವುದು. ಅದಕ್ಕಾಗಿ ಬೆಂಗಳೂರಿನಲ್ಲಿ  ರೇಸಿಂಗ್‌ ಟ್ರ್ಯಾಕ್‌ ನಿರ್ಮಾಣ ಮಾಡುವಂತೆ ರೇಸಿಂಗ್ ಈವೆಂಟ್‌ಗಳ ಸಂಘಟಕರು ಇತ್ತೀಚೆಗೆ ಬಿಡಿಎ ಅಧ್ಯಕ್ಷರು ಮತ್ತು ಆಯುಕ್ತರಲ್ಲಿ ವನವಿಮಾಡಿಕೊಂಡಿದ್ದನ್ನು ಈ ಸಂದರ್ಭದಲ್ಲಿ ಅಧಿಕಾರಿಗಳು ನೆನಪಿಸಿಕೊಂಡಿದ್ದಾರೆ. ಆದ್ದರಿಂದ ಮಹಾನಗರದ ವಿವಿಧ ಜಾಗಗಳನ್ನು ಪರಿಶೀಲಿಸಲಾಗಿ ಅಂತಿಮವಾಗಿ ಡಾ. ಶಿವರಾಮ ಕಾರಂತ್ ಲೇಔಟ್‌ ಅನ್ನು ಫೈನಲ್ ಮಾಡಲಾಗಿದೆ ಎನ್ನಲಾಗುತ್ತಿದೆ. 
ಡಾ. ಶಿವರಾಮ ಕಾರಂತ್ ಲೇಔಟ್ ಒಟ್ಟು 3,546 ಎಕರೆಗಳನ್ನು ಒಳಗೊಂಡಿದೆ, 17 ಹಳ್ಳಿಗಳಲ್ಲಿ ವ್ಯಾಪಿಸಿದೆ. ಸೈಟ್ ಹಂಚಿಕೆಗಾಗಿ ಅಧಿಸೂಚನೆಯೊಂದಿಗೆ ಮುಂದುವರಿಯಲು ಕರ್ನಾಟಕ ಹೈಕೋರ್ಟ್‌ನಿಂದ ಹಸಿರು ನಿಶಾನೆಗೆ ಕಾಯುತ್ತಿದೆ. ಇಂಡಿಯನ್ ರೇಸಿಂಗ್ ಲೀಗ್ ಈವೆಂಟ್‌ಗಳು ಮತ್ತು ಫಾರ್ಮುಲಾ 4-ಸಂಬಂಧಿತ ಈವೆಂಟ್‌ಗಳನ್ನು ಇಲ್ಲಿ ಆಯೋಜಿಸುವ ಸಾಧ್ಯತೆಯಿದೆ ಎಂದು ಮೋಟಾರ್‌ಸ್ಪೋರ್ಟ್ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   ಜೊತೆಗೆ ಬಿಡಿಎದೊಂದಿಗೆ ರೇಸಿಂಗ್ ಈವೆಂಟ್ ಸಂಘಟಕರು ಮುಂದಿನ 5 ವರ್ಷಗಳ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಗತ್ಯವಿದ್ದರೆ ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು ಮತ್ತು ವರ್ಷಕ್ಕೆ ಎರಡು ಬಾರಿ ಕೆಲವು ದಿನಗಳವರೆಗೆ ಸ್ಥಳಾವಕಾಶದ ಅಗತ್ಯವಿದ್ದ ಜಾಗವನ್ನು ನೀಡಬಹದು ಎನ್ನುವ ಇರಾದೆಯನ್ನು ಬಿಡಿಎ ತೋರಿಸುತ್ತದೆ. ಈಗಾಗಲೆ ಡಾ.ಶಿವರಾಮ ಕಾರಂತ ಲೇಔಟ್‌ಗೆ ಸಂಬಂಧಿಸಿದಂತೆ ವಾಜ್ಯವು ಕರ್ನಾಟಕ ಹೈಕೋರ್ಟ್ ನಲ್ಲಿದೆ. ಅದರ ವಿಚಾರಣೆ ಜೂನ್ 6ಕ್ಕೆ ನಡೆಯಲಿದೆ. ಸದ್ಯ ಲೇಔಟ್‌ನಲ್ಲಿ ಒಟ್ಟು 34,000 ನಿವೇಶನಗಳು ಬರುತ್ತಿದ್ದು, ಸುಮಾರು 10,000 ಸಾರ್ವಜನಿಕರಿಗೆ ಹಂಚಿಕೆಯಾಗಲಿದೆ. ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡುವವರೆಗೆ ಈ ಕುರಿತು  ಯಾವುದೇ ಅಧಿಕೃತ ಸೂಚನೆ ನೀಡದಿದ್ದರೂ ಬಹುನೀರಿಕ್ಷಿತ ರೇಸಿಂಗ್‌ ಟ್ರಾಕ್‌ ಪ್ಲಾನ್‌ ಗೌಪ್ಯವಾಗಿಯೇ ಸಿದ್ದಪಡಿಸಲಾಗಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by