ಕನ್ನಡ ನಾಡು | Kannada Naadu

ಇನ್ನುಮುಂದೆ ಯುಎಸ್ ವೀಸಾಗಾಗಿ ಅಲೆದಾಟ ತಪ್ಪಲಿದೆ ಎಂದ ಎರಿಕ್ ಗಾರ್ಸೆಟ್ಟಿ

27 May, 2024

ಬೆಂಗಳೂರು : ಬೆಂಗಳೂರಿಗರು ಯುಎಸ್ ವೀಸಾ ಸಂಬಂಧಿತ ಕೆಲಸಗಳನ್ನು ಮಾಡಿಸಲು ಇನ್ನು ಮುಂದೆ  ಚೆನ್ನೈ, ಹೈದರಾಬಾದ್ ಅಥವಾ ನವದೆಹಲಿಗೆ ಅಲೆದಾಡುವ ಪರದಾಟ ನಿಲ್ಲಲಿದೆ. ಮುಂದಿನ ವರ್ಷಾಂತ್ಯದೊಳಗೆ ಬೆಂಗಳೂರಿನಲ್ಲಯೇ ಅಮೇರಿಕನ್ ಕಾನ್ಸುಲೇಟ್  ಆರಂಭವಾಗಲಿದೆ ಎನ್ನುವ ಮಾಹಿತಿಯನ್ನು ಭಾರತದ ಯುನೈಟೆಡ್ ಸ್ಟೇಟ್ಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ತಿಳಿಸಿದಾರೆ.  


2023 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಗೆ ಭೇಟಿ ನೀಡಿ, ಅಲ್ಲಿನ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿಯಾದಾಗ, ಅವರು ಭಾರತದಲ್ಲಿ ಎರಡು ಹೊಸ ಯುಎಸ್ ಕಾನ್ಸುಲೇಟ್‌ಗಳನ್ನು ಸ್ಥಾಪಿಸುವ ಕುರಿತು ಮಾತುಕತೆ ನಡೆಸಿ ಘೋಷಣೆ ಮಾಡಿದ್ದರು. ಅಂದು ಮಾತುಕತೆ ನಡೆದ ವಿಷಯ ಇಂದಿಗೆ ಕಾರ್ಯಗತವಾಗಿದೆ. 


 ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ  ಮಾತನಾಡಿದ ಎರಿಕ್ ಗಾರ್ಸೆಟ್ಟಿ, "ಈ ಹಿಂದೆ ಪ್ರಧಾನಿ ಮೋದಿ ಅಧ್ಯಕ್ಷ ಬಿಡೆನ್ ಅವರನ್ನು ಭೇಟಿಯಾದಾಗ ಅವರು ಭಾರತದಲ್ಲಿ ಎರಡು ಕಾನ್ಸುಲೇಟ್‌ಗಳನ್ನು ಘೋಷಿಸಿದರು. ಅದರಲ್ಲಿ ಒಂದು ಬೆಂಗಳೂರಿನಲ್ಲಿ ಇರುತ್ತದೆ. ಮುಂಬರುವ ವರ್ಷದಲ್ಲಿ ಅದು ಆರಂಭವಾಗುತ್ತದೆ ಎಂದು ನಾನು ಆಶಿಸುತ್ತೇನೆ. ಈ ನಗರದಲ್ಲಿ ಯುಎಸ್‌ ದೂತಾವಾಸವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ. ನಮ್ಮೆಲ್ಲರ ಆಸೆ ಮುಂದಿನ ವರ್ಷಾಂತ್ಯಕ್ಕೆ ಕೈಗೊಳ್ಳಲಿದೆ" ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.  
ಕರ್ನಾಟಕದಿಂದ ಕನಿಷ್ಠ ನಾಲ್ಕರಿಂದ ಐದು ಲಕ್ಷ ಜನರಿಗೆ ವೀಸಾ ಸಂಬಂಧಿತ ಕೆಲಸವನ್ನು ನಗರದಲ್ಲಿ ಮಾಡಲು ಯುಎಸ್ ರಾಯಭಾರ ಕಚೇರಿ ಸಹಾಯ ಮಾಡುತ್ತದೆ ಎಂದು ಹೇಳಿದರು. ಬೆಂಗಳೂರಿನ ಜನರು ಯಾವುದೇ ಯುಎಸ್ ವೀಸಾ ಸಂಬಂಧಿತ ಕೆಲಸವನ್ನು ಪಡೆಯಲು ಚೆನ್ನೈ, ಹೈದರಾಬಾದ್ ಅಥವಾ ನವದೆಹಲಿಗೆ ಹೋಗಬೇಕಾಗಿತ್ತು. ಇದಕ್ಕಾಗಿ ₹25,000 ರಿಂದ ₹30,000 ಖರ್ಚಾಗುತ್ತಿತ್ತು. ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣಿಸುವ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳನ್ನು ಹೊಂದಿದ್ದರೂ ಸಹ, ಬೆಂಗಳೂರಿಗೆ ಕಾನ್ಸುಲೇಟ್ ಇರಲಿಲ್ಲ. ವೈಟ್‌ಹೌಸ್ ಘೋಷಣೆಯ ಬಗ್ಗೆ ನಮಗೆ ಸಂತೋಷವಾಗಿದೆ ಮತ್ತು ಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಎಂದಗಳನ್ನು ಅರ್ಪಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. 

     ಬೆಂಗಳೂರಿನಲ್ಲಿರುವ ಯುಎಸ್ ಕಾನ್ಸುಲೇಟ್  ಪ್ರತಿ ವರ್ಷ ಕರ್ನಾಟಕದಲ್ಲಿರುವ ನಾಲ್ಕ ರಿಂದ ಐದು ಲಕ್ಷ ಜನರು ರಾಜ್ಯದ ಹೊರಗೆ ಪ್ರಯಾಣಿಸದೆ ತಮ್ಮ ವೀಸಾಗೆ ಸ್ಟಾಂಪಿಂಗ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇನ್ನೂ ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕಿದೆ . ಎರಡು ದೇಶಗಳ ನಡುವಿನ ದೃಢವಾದ ಆರ್ಥಿಕ ಸಂಬಂಧ ಮತ್ತು ವಾಣಿಜ್ಯ ಸಂಬಂಧಗಳು ಹೆಚ್ಚಾಗಬೇಕಿದೆ.  ಬಾಹ್ಯಾಕಾಶ ಕ್ಷೇತ್ರ ಸೇರಿದಂತೆ ವ್ಯಾಪಾರ, ಉದ್ಯಮಗಳು ಬೆಳೆಸಬೇಕಾಗಿರುವ ಹಿನ್ನೆಲೆಯಲ್ಲಿ ನಮ್ಮ ದೇಶದ ನಾಯಕರನ್ನು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಲು ಎರಿಕ್ ಗಾರ್ಸೆಟ್ಟಿ ಅವರು ಬೆಂಗಳೂರಿಗೆ ಭೇಟಿ ನೀಡಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by