ಬೆಂಗಳೂರಿನಲ್ಲಿ ದುಬಾರಿಯಾದ ತರಕಾರಿ-ಹಣ್ಣು.... ಗ್ರಾಹಕರ ಜೇಬಿಗೆ ಕತ್ತರಿ
14 May, 2024
ಬೆಂಗಳೂರು: ಸಿಲಿಕಾನ್ ಸಿಟಿ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿ ಇದೇ ಇರುತ್ತದೆ. ಇಷ್ಟು ದಿನಗಳವರೆಗೆ ಮಳೆ ಇಲ್ಲದೆ ಬಿಸಿಲ ಬೆಗೆಗೆ ತತ್ತರಿಸಿ ಹೊಗಿತ್ತು. ಕಳೆದ ಕೆಲವು ದಿನಗಳಿಂದ ವರುಣನ ಕೃಪೆ ಬೆಂಗಳೂರಿಗರ ಮೇಲೆ ಆಗ್ತಾ ಇದೆ ಎನ್ನುವಾಗಲೇ ಇನ್ನೊಂದು ಶಾಖ್ ಕಾದಿದೆ. ಮಹಾನಗರ ಸದ್ಯ ಬೆವರು ಮುಕ್ತವಾಗಬಹುದು ಎನ್ನುವಾಗ, ತರಕಾರಿ ದರ ಕೇಳಿದ ಬೆಂಗಳೂರಿಗರು ನಿಂತಲ್ಲೆ ಬೆವರಲು ಶುರು ಇಟ್ಟುಕೊಂಡಿದ್ದಾರೆ.
ಇಲ್ಲಿನ ವಾತಾವರಣ ಬದಲಾಗಿದೆ. ಆದರೆ ತರಕಾರಿ ಮಾರುಕಟೆಯ ಬೆಲೆರಿಕೆಯ ವಾತಾವರಣಕ್ಕೆ ಕಡಿವಾಣ ಬಿದ್ದಂತೆ ಕಾಣುವುದಿಲ್ಲ. ಕಾರಣ ತರಕಾರಿ ಹಣ್ಣಿನ ಬೆಲೆ ಗಗನಕ್ಕೇರಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹಣ್ಣು ತರಕಾರಿ ಬೆಲೆ ದುಪ್ಪಟ್ಟು ಅಧಿಕವಾಗಿದೆ. ತರಕಾರಿ ದರ ಏಕಾ ಏಕಿ ಏರಿಕೆಯಾಗವುದುಕ್ಕೆ ತರಕಾರಿ ಮಾರಾಟಗಾರರು ಬೇರೆ ಬೇರೆ ಕಾರಣಗಳನ್ನುಹೇಳುತ್ತಾರೆ. ಬೆಸಿಗೆಯಲ್ಲಿತರಕಾರಿ ಇಳುವರಿ ಕಮ್ಮಿಯಾಗಿತ್ತು, ತರಕಾರಿಗಳನ್ನು ನೀರು ಇಲ್ಲದೇ ಬೆಳೆಯುವುದೇ ಸಾಧ್ಯವಿಲ್ಲ. ಅಂಥಹ ಪರಸ್ಥಿಯಲ್ಲಿ ರೈತರು ಬೆಳದ ತರಕಾರಿಯ ಪ್ರಮಾಣ ಕಮ್ಮಿಯಾಗಿದೆ. ಅದಕ್ಕೆ ತರಕಾರಿಯ ಬೆಲೆ ಗಗನಕ್ಕೆ ಏರುತ್ತಿದೆ ಎನ್ನುವ ಸಮಜಾಯಿಸಿಯನ್ನು ನೀಡುತ್ತಾರೆ. ಆದರೆ ರೈತರು ಮಾತ್ರ ದಲ್ಲಾಳಿಗಳು ನೀಡುವ ಅರೆ ಬರೆ ದರಕ್ಕೆ ನಾವು ಬೆಳೆದ ತರಕಾರಿ ಮಾರಾಟಮಾಡುತ್ತೇವೆ. ಅದು ಗ್ರಾಹಕರ ಬಳಿಗೆ ಬರುವಾಗ ಗಗನಕ್ಕೆ ಏರಿದ ದರ ಇರುತ್ತದೆ ಎಂದು ಎಂದು ಅಸಮಾಧಾನವನ್ನು ಹೊರಹಾಕುತ್ತಾರೆ.
ಮಹಾನಗರದ ಸುತ್ತಮುತ್ತ ಬೇಸಿಗೆಯಲ್ಲಿ ಮಳೆ ಆರಂಭವಾಗಿ, ವಾತಾವರಣ ಸಂಪೂರ್ಣ ಅದಲು ಬದಲಾಗಿದೆ. ಪರಿಣಾಮ ಬೆಂಗಳೂರಿನಲ್ಲಿ ಹಗಲಿನಲ್ಲಿ ಮೋಡ ಕವಿದ ವಾತಾವರಣ ಇರುತ್ತಿದ್ದು ಮಧ್ಯಾಹ್ನ ಸಂಜೆಯಾಗುತ್ತಿದ್ದಂತೆ ಧಾರಾಕಾರ ಮಳೆಯಾಗುತ್ತಿದೆ. ವಾಸ್ತವದಲ್ಲಿ ಮಳೆ ಸಂದರ್ಭದಲ್ಲಿ ತರಕಾರಿ ಹಾಗೂ ಹಣ್ಣಿನ ಬೆಲೆ ಕಡಿಮೆಯಾಗುತ್ತದೆ. ಆದರೆ ಕಳೆದ ಕೆಲವು ವಾರಗಳ ಕಾಲ ಬಿರು ಬಿಸಿಲು ಇದ್ದು, ತಾಪದಿಂದ ಮಾರುಕಟ್ಟೆಗಳು ಚೆತರಿಸಿಕೊಂಡಿಲ್ಲ. ಹೀಗಾಗಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು ಇಳಿಕೆಯಾಗದೆ ಗ್ರಾಹಕರಿಗೆ ಬಿಸಿ ತಟ್ಟಿದೆ. ಕಳೆದ ವಾರ ಬಿಸಿಲು ಹೆಚ್ಚಾಗಿರುವುದರಿಂದ ಮಾರುಕಟ್ಟತೆಗೆ ತರಕಾರಿ ಹಾಗೂ ಹಣ್ಣಿನ ಪೂರೈಕೆ ತೀರಾ ಕಡಿಮೆಯಾಗಿದೆ. ನಗರದಲ್ಲಿ ತರಕಾರಿ ಹಣ್ಣುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮಾರಾಟಗಾರರು ಇದ್ದ ಅಲ್ಪ ಪ್ರಮಾಣದ ತರಕಾರಿ ಹಾಗೂ ಹಣ್ಣಿನ ಬೆಲೆಯನ್ನು ದ್ವಿಗುಣಗೊಳಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.
ಒಟ್ಟಾರೆಯಾಗಿ ತರಕಾರಿ ದರ ಏರಿದುವುದಕ್ಕೆ ಮಳೆಯೇ ಕಾರಣ ಎನ್ನುವ ಪುಕಾರು ಇರುವುದಂತು ಸತ್ಯ. ಪ್ರತಿ ಕೆಜಿ ತರಕಾರಿ ಬೆಲೆ ಕನಿಷ್ಠ 20 ರೂ.ಯಿಂದ 80 ರೂ.ಯಷ್ಟು ಏರಿಕೆಯಾಗಿದೆ. ಬೀನ್ ಹಾಗೂ ಬಟಾಣಿ ಬೆಲೆಯನ್ನು ಗ್ರಾಹಕರಿಗೆ ಕಣ್ಣೀರು ತರಿಸಿದೆ. ಒಂದು ಕೆಜಿ ಬೆಳ್ಳುಳ್ಳಿಗೆ 320 ರೂಪಾಯಿ ಆಗಿದೆ ಬೆಲೆ ಕೇಳಿ ಗ್ರಾಹಕರು ಶಾಕ್ ಆಗಿದ್ದಾರೆ. ಬೆಳ್ಳುಳ್ಳಿ ಬೆಲೆ ಬರೋಬ್ಬರಿ . ಇನ್ನೂ ಬೀನ್ಸ್ ಬೆಲೆ ಕೆಜಿಗೆ 220 ರೂಪಾಯಿ ಇದ್ದರೆ, ಹಸಿರುಮೆಣಸಿನಕಾಯಿ ಬೆಲೆ 110 ರೂಪಾಯಿ ಇದೆ. ಅಲ್ಲದೆ ಬಟಾಣಿ ಬೆಲೆ ಕೆಜಿಗೆ 200 ರೂಪಾಯಿ ದಾಟಿದೆ. ಪ್ರತೀ ಬಾರಿ ಒಂದಲ್ಲಾ ಒಂದು ತರಕಾರಿ ಬೆಲೆ ಹೆಚ್ಚಾಗುತ್ತಲೇ ಇದ್ದು ಗ್ರಾಹಕರಿಗೆ ಬೇಸರ ತಂದಿದೆ.
ವಾಸ್ತವದಲ್ಲಿ ಬೆಂಗಳೂರಿನಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ತಲಾ ಒಂದು ಕೇಜಿ ಹಣ್ಣು ತರಕಾರಿಗಳ ದರಗಳ ಸಂಪೂರ್ಣ ಮಾಹಿತಿ ಇಂತಿದೆ. ಹಸಿರು ಮೆಣಸಿನ ಕಾಯಿ : 110 ರೂ. ಕ್ಯಾರೇಟ್ 95 ರೂ,. ನವಿಲುಕೋಸು 80 ರೂ., ಬದನೆಕಾಯಿ 70ರೂ,, ದಪ್ಪ ಮೆಣಸಿನಕಾಯಿ 80ರೂ., ಬೆಂಡೆಕಾಯಿ 80ರೂ., ಟೊಮೆಟೋ 35ರೂ., ಆಲೂಗಡ್ಡೆ 49 ರೂ., ಹಾಗಲಕಾಯಿ 80ರೂ., ಸೋರೆಕಾಯಿ 52 ರೂ. ಹಸಿ ಶುಂಠಿ ಬೆಲೆ 195 ರೂ., ಪಡವಲಕಾಯಿ 47 ರೂ., ಗೋರಿಕಾಯಿ 64 ರೂ., ಬಿಟ್ರೋಟ್ ಬೆಲೆ 46 ರೂ., ಈರುಳ್ಳಿ 40 ರೂ. ಆದರೆ ಬೀನ್ಸ್: 220ರೂ. ಗಡಿ ದಾಟಿದೆ. ಬೆಳ್ಳುಳ್ಳಿ: 320ರೂ., ಬಟಾಣಿ: 200 ರೂ.ದಾಟಿದೆ. ಕಳೆದ ವಾರ ಸೌತೇಕಾಯಿ ಹಾಗೂ ನಿಂಬೆಹಣ್ಣಿನ ಬೆಲೆ ಹೆಚ್ಚಾಗಿತ್ತು. ಬೇರೆ ತರಕಾರಿಗಳ ಬೆಲೆ 60ರೂ ಒಳಗೆಯೇ ಇತ್ತು. ಆದರೆ ಈ ವಾರ ಬೀನ್ಸ್, ಕ್ಯಾರೇಟ್, ಬದನೆಕಾಯಿ, ಹಸಿರುಮೆಣಸಿನಕಾಯಿ, ಟೊಮೆಟೋ, ಬಟಾಣಿ, ಬೆಳ್ಳುಳ್ಳಿ ಸತತವಾಗಿ ಏರಿಕೆಯಾಗುತ್ತಿದೆ. ಮಳೆ ಬಂದರೆ ಟೊಮೆಟೋ ಹಾಗೂ ಈರುಳ್ಳಿ ಇರುವುದಿಲ್ಲ ಬೇಗ ಹಾಳಾಗುವುದರಿಂದ ಅದರ ಬೆಲೆ ಹೆಚ್ಚಾಗುವ ಸಾಧ್ಯತೆ ಇದ್ದು ಮುಂದಿನ ವಾರ ತರಕಾರಿಗಳ ಬೆಲೆ ಕಡಿಮೆಯಾಗುವ ಸಾಧ್ಯತೆಯೊಂದು ಇದೆ ಎನ್ನಲಾಗುತ್ತಿದೆ.

ಇನ್ನೂ ತರಕಾರಿ ಕಥೆ ಹೀಗಾದರೆ ಹಣ್ಣುಗಳು ಸಹ ತನ್ನ ಬೇಡಿಕೆಗಳನ್ನು ಹೇಚ್ಚಿದಿಕೊಂಡು ಕುಳಿತಿದೆ. ಪರಿಣಾಮ ಎಲ್ಲಾ ಪ್ರಕಾರದ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದ್ದು, ಗ್ರಾಹಕರಿಗೆ ಖರೀದಿಸಲು ಬೇಸರ ತಂದಿದೆ. ಹಣ್ಣುಗಳಲ್ಲಿ ದ್ರಾಕ್ಷಿ ಬೆಲೆ ಒಂದು ಕೆಜಿಗೆ 60 ರೂಪಾಯಿಂದ 80 ರೂಪಾಯಿವರೆಗೆ ಬೆಲೆ ಇದ್ದರೆ, ಮರಸೇಬು ಹಣ್ಣು ಕೆಜಿಗೆ 190 ರೂಪಾಯಿಂದ 200 ರೂಪಾಯಿವರೆಗೆ, ದಾಳಿಂಬೆ ಹಣ್ಣಿನ ಬೆಲೆ 100 ರೂಪಾಯಿಂದ 150 ರೂಪಾಯಿವರೆಗೆ, ಇನ್ನೂ ಕಲ್ಲಂಗಡಿ 40-50 ರೂಪಾಯಿ ಇದ್ದರೆ, ಬಾಳೆಹಣ್ಣು 30-40 ರೂಪಾಯಿ ಇದೆ. ಜೊತೆಗೆ ಅನಾನಸ್ ಹಣ್ಣು 80-80 ರೂಪಾಯಿ ಇದ್ದರೆ ಆಸ್ಟ್ರೇಲಿಯಾ ಗ್ರೇಪ್ಸ್ 200-150 ರೂಪಾಯಿ, ಸಪೋಟ-60-70 ರೂಪಾಯಿ, ಸೇಬು 100-200 ರೂಪಾಯಿ, ಮಾವಿನ ಹಣ್ಣು 100-350 ರೂಪಾಯಿ, ಕಿತ್ತಾಳೆ ಹಣ್ಣು ಕೆಜಿಗೆ 100-180 ರೂಪಾಯಿ ಮಾರಾಟವಾಗುತ್ತಿದೆ.
Publisher: ಕನ್ನಡ ನಾಡು | Kannada Naadu