ಜಪಾನ್ ಸಿಇಒ ಪ್ರಕಾರ...ಜಗತ್ತಿಗೆ ಭಾರತದ ನಾಯಕತ್ವ ಬೇಕು....!
13 May, 2024
ಬೆಂಗಳೂರು- ಭಾರತ ವಿಶ್ವ ಗುರು ಎನ್ನುವುದಕ್ಕೆ ಇನ್ನೊಂದು ಪ್ರಕರಣ ಸಾಕ್ಷಿಯಾಗುತ್ತಿದೆ. ಜಪಾನಿನ ಪ್ರತಿಷ್ಟಿತ ಸಂಸ್ಥೆಯೊಂದರ ಸಿಇಒ ಈ ಮಾತನ್ನು ಹೇಳುವ ಮೂಲಕ ಭಾರತದ ಮಹತ್ವವನ್ನು ಜಾಗತೀಕ ಮಟ್ಟದಲ್ಲಿ ಇನ್ನೊಮ್ಮೆ ಸಾರಿದ್ದಾರೆ.
ಏಪ್ರಿಲ್ನಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ ಜಪಾನಿನ ಸಂಸ್ಥೆಯ ಸಿಇಒ ಇತ್ತೀಚೆಗೆ ಜಗತ್ತಿಗೆ ಭಾರತೀಯ ನಾಯಕತ್ವದ ಅಗತ್ಯವಿದೆ ಎಂದು ಹೇಳಿದರು, ಭಾರತದ ವೈವಿಧ್ಯತೆ ಮತ್ತು ಮೌಲ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಸ್ಥೆಯು ಭಾರತದ ಸಂಸ್ಕೃತಿ, ಕಲೆ ಪರಂಪರೆಯನ್ನು ಮತ್ತು ದೇಶದ ವಾಸ್ತಿವಿಕತೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ಮುಂದಾಗಿದ್ದು ದೇಶದ ಭಾರತದ ಮಹತ್ವವದ ಬಗ್ಗೆ ಕುಲಂಕೂಷವಾಗಿ ಅಧ್ಯಯನ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.
ʻಟೆಕ್ ಜಪಾನ್ನʼ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ʻನೌಟಾಕ ನಿಶಿಯಾಮಾʼ ಈ ಕುರಿತು ಮಾತನಾಡಿ ಇಂದು ಜಗತ್ತಿನಲ್ಲಿ ಸಾಕಷ್ಟು ಅಸ್ಥಿರ ವಾತಾವರಣ ಉಂಟಾಗಿದ್ದು, ಸದ್ಯ ಬಹುತೇಕ ಕಡೆಗಳಲ್ಲಿ ಅಸ್ತ್ಯವ್ಯಸ್ಥ ಪರಸ್ಥಿತಿ ಉಂಟಾಗಿದೆ. ಇಂತಹ ಪರಸ್ಥಿತಿಯಲ್ಲಿ ಜಗತ್ತನ್ನು ಮುನ್ನಡೆಸುವ ಸಾಮೃಥ್ಯ ಭಾರತಕ್ಕೆ ಇದೆ. ಆದ್ದರಿಂದ ಭಾರತ ಅಂತಹ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳವು ಅಗತ್ಯವಿದೆ ಎಂದು ಸಾಮಾಜಿಕ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಲಿಂಕ್ಡ್ಇನ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ಇಂಗಿತವನ್ನು ಭಹಿರಂಗ ಪಡಿಸಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಸ್ಪಷ್ಟ ಪಡಿಸಿದ ನೌಟಾಕ ನಶೀಯಾಮಾ ಅವರ ಪ್ರಕಾರ ʻʻಜಗತ್ತಿಗೆ ಭಾರತೀಯ ನಾಯಕತ್ವದ ಅಗತ್ಯವಿದೆ. ನಾನು ಭಾರತಕ್ಕೆ ತೆರಳಿ ಒಂದು ತಿಂಗಳಾಗಿದೆ, ಮತ್ತು ಭಾರತದಲ್ಲಿನ ಮೌಲ್ಯಗಳ ವೈವಿಧ್ಯತೆಯನ್ನು ನೋಡಿ ನಾನು ಆಶ್ಚರ್ಯಚಕಿತನಾಗಿದ್ದೇನೆ" ಎಂದು ಹೇಳಿದ್ದಾರೆ "ವಿವಿಧ ಧರ್ಮಗಳು, ಜನಾಂಗಗಳು ಮತ್ತು ಮೌಲ್ಯಗಳನ್ನು ಹೊಂದಿರುವ ದೊಡ್ಡ ದೇಶವಾಗಿದ್ದರೂ ಭಾರತವು ಒಂದು ಪ್ರಭುದ್ಧ ದೇಶವಾಗಿರುವುದು ಅದ್ಭುತವಾಗಿದೆ. ಭಾರತವು ಈಗ ಚುನಾವಣಾ ಕಾಲದಲ್ಲಿರುವುದರಿಂದ ನಾಯಕತ್ವದ ಬಗ್ಗೆ ಯೋಚಿಸಲು ಇದು ಉತ್ತಮ ಅವಕಾಶ" ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ʻಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾʼ ಮತ್ತು ʻಗೂಗಲ್ ಸಿಇಒ ಸುಂದರ್ ಪಿಚೈʼ ಅವರ ಉದಾಹರಣೆಗಳನ್ನು ಉಲ್ಲೇಖಿಸಿರುವ ನಿಶಿಯಾಮಾ, ಭಾರತವು ಸ್ಪರ್ಧೆ ಮತ್ತು ಸಹಯೋಗ ಎರಡನ್ನೂ ಸಾಕಾರಗೊಳಿಸಿದೆ ಮತ್ತು ಜಾಗತಿಕವಾಗಿ ನಾಯಕತ್ವ ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಬರೆದುಕೊಂಡಿದ್ದಾರೆ.
ನೌಟಾಕ ನಿಶಿಯಾಮಾ ಅವರ ಈ ಪೋಸ್ಟ್ಗೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶ್ವವನ್ನು ಬೆಳೆಯಲು ಸಹಾಯ ಮಾಡುವ ಭಾರತದ ಸಾಮರ್ಥ್ಯದ ಬಗ್ಗೆ ಅವರ ವಿಶ್ಲೇಷಣೆ ಮತ್ತು ಯೋಚನೆ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು.
Publisher: ಕನ್ನಡ ನಾಡು | Kannada Naadu