ಅರ್ಧ ಶತಮಾನ ಕಂಡ ʻಕಾವೇರಿʼ ಇನ್ನು ನೆನಪು ಮಾತ್ರ..!
09 May, 2024
ಬೆಂಗಳೂರು : ಆ ಥಿಯೇಟರ್ ನಿಂದ ಒಂದು ಜಂಕ್ಷನ್ ಗೆ ಹೆಸರು ಬಂದಿತ್ತು. ಆದರೆ ಇನ್ನು ಮುಂದೆ ಹೆಸರು ಮಾತ್ರ ಉಳಿಯಲಿದ್ದು, ಥಿಯೇಟರ್ ಇರಲಾರದು ಎನ್ನುವ ಕೊರಗು ಎಲ್ಲಿರಿಗೂ ಕಾಡಲಿದೆ. ಬರೋಬ್ಬರಿ 50 ವರ್ಷದ ಹಿಂದಿ ಮಾತು. ಅಂದರೆ 1974ರ ಜನವರಿ 11 ಅಣ್ಣಾವ್ರ 'ಬಂಗಾರದ ಪಂಜರ' ಸಿನಿಮಾ ಮೂಲಕ ಲೋಕಾರ್ಪಣೆಯಾದ ಕಾವೇರಿ ಇನ್ನು ಮುಂದೆ ಇರಲಾರದು..!
ವರನಟ ಡಾ.ರಾಜಕುಮಾರ್ ಅವರ 'ಬಂಗಾರದ ಪಂಜರ' ಸಿನಿಮಾ ಮೂಲಕ ಆರಂಭವಾಗಿದ್ದ ಐಕಾನಿಕ್ 'ಕಾವೇರಿ' ಚಿತ್ರಮಂದಿರ ಇನ್ನು ನೆನಪು ಮಾತ್ರ. ಏಕೆಂದರೆ ಒಂದು ಕಡೆ ಓಟಿಟಿ, ಸಿನಿಮಾಲ್ ಗಳ ಹಾವಳಿ ಮತ್ತೊಂದರೆ ಮೊದಲಿನಂತರ ಸಾಲು ಸಾಲು ಸಿನಿಮಾ ರೀಲೀಸ್ ಆಗುತ್ತಿಲ್ಲ. ಹೀಗಾಗಿ ಸಿನಿಮಾ ನಡೆಸುವುದು ಸವಾಲಾಗಿದೆ.ಈ ಕಾರಣದಿಂದ ಈ ಚಿತ್ರಮಂದಿರ ಸ್ಥಗಿಗೊಳ್ಳಲಿದೆ. ಬೆಂಗಳೂರು ಮೆಜೆಸ್ಟಿಕ್ ಕಪಾಲಿ ಥಿಯೇಟರ್ ಬಿಟ್ಟರೆ ನಂತರ ಅತೀ ಹೆಚ್ಚು ಜನರು ಕೂತು ವೀಕ್ಷಿಸಬಹುದಾಗಿದ್ದ ದೊಡ್ಡ ಚಿತ್ರಮಂದಿರ ಇದಾಗಿತ್ತು.
1974ರಲ್ಲಿ ಆರಂಭವಾಗಿದ್ದ ಕಾವೇರಿ ಚಿತ್ರಮಂದಿರದಲ್ಲಿ ಅಣ್ಣಾವ್ರ 'ಬಂಗಾರದ ಪಂಜರ' ಸಿನಿಮಾ ಮೂಲಕ ಸಿಂಗಲ್ ಸ್ಕ್ರೀನ್ ನ ಈ ಕಾವೇರಿ ಚಿತ್ರಮಂದಿರ ಆರಂಭವಾಗಿತ್ತು. ಹಾಗಾಗಿ ಇತ್ತೀಚೆಗಷ್ಟೇ 50 ವರ್ಷ ಪೂರೈಸಿದ್ದಕ್ಕಾಗಿ ಕಾವೇರಿಯು ಸುವರ್ಣ ಮಹೋತ್ಸವ ಆಚರಿಸಿಕೊಂಡಿತ್ತು. ಆ ಖುಷಿಯಲ್ಲಿಯೇ ಇರುವಾಗ ಚಿತ್ರಮಂದಿರ ಸ್ಥಗಿತಗೊಳ್ಳುವ ಸುದ್ದಿ ಹೊರ ಬಂದಿದೆ.
ಈ ಕಾವೇರಿ ಚಿತ್ರಮಂದಿರದ ಜಾಗದಲ್ಲಿ ಮುಂದಿನ ದಿನಗಳಲ್ಲಿ ವಾಣಿಜ್ಯ ಕಟ್ಟಡ ತಲೆ ಎತ್ತಲಿದೆಯಂತೆ. ಅದಕ್ಕಾಗಿ ಈ ಐಕಾನಿಕ್ ಕಾವೇರಿ ಥಿಯೇಟರ್ ತನ್ನ ವೈಭವದ ಓಟವನ್ನು ಕೊನೆಗೊಳಿಸಲಿದೆ. ಆರಂಭದಿಂದಲೇಅಂದಿನ ಕಾಲದಿಂದಲೇ ಕಳೆದ ಕೆಲವು ವರ್ಷಗಳವರೆಗೆ ಈ ಥಿಯೇಟರ್ನಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಿದ್ದರು. ಆ ನೆನಪುಗಳು ಬೆಂಗಳೂರು ನಿವಾಸಿಗಳಿಗೆ ಅವಿಸ್ಮರಣಿಯವಾಗಿ ಉಳಿದು ಬಿಡಲಿದೆ.

ಇಲ್ಲಿ 1300 ಆಸನ ವ್ಯವಸ್ಥೆ ಇದ್ದು, ಮಿನಿ ಬಾಲ್ಕನಿ ಸಹ ಇತ್ತು. ಒಂದೆರಡು ಸಿನಿಮಾಗಳ ಶೂಟಿಂಗ್ ಸಹ ಇಲ್ಲಿ ನಡೆದಿದೆ. ಸದ್ಯ ಥಿಯೇಟರ್ ಸ್ಥಗಿತಗೊಂಡ ಕಾರಣ ಇಲ್ಲಿ ಹೊಸ ಕಟ್ಟಡ ನಿರ್ಮಿಸುವ ಕೆಲಸ ಆರಂಭವಾಗುತ್ತಿದೆ. 5 ವರ್ಷಗಳಿಂದ ಆದಾಯ ಕುಸಿತ ದಶಕಗಳಿಂದ ಸಿನಿಮಾ ಪ್ರದರ್ಶನ ನಡೆಸಿಕೊಂಡು ಬಂದ ಈ ಥಿಯೇಟರ್ ಅನ್ನು ಇಂದು ಮುಚ್ಚಲು ನನಗೆ ಅತೀವ ಬೇಸರವಾಗಿದೆ. ಆದರೆ ಕಳೆದ 5 ವರ್ಷಗಳಲ್ಲಿ ಆದಾಯ ಸಂಗ್ರಹದಲ್ಲಿ ಭಾರೀ ಹಿನ್ನಡೆ ಆಗಿದೆ.
50 ವರ್ಷಗಳ ಹಿಂದೆ ರಂಗಭೂಮಿಯನ್ನು ಕಟ್ಟಿ ಬೆಳೆಸಿದ ತಂದೆ ನರಸಿಂಹಯ್ಯನವರ ಈ ಪರಂಪರೆ ಮುಂದುವರೆಸಿದ್ದರು, ಇದೀಗ ಅನಿವಾರ್ಯವಾಗಿ ಚಿತ್ರಮಂದಿರ ಸ್ಥಗಿಗೊಳಿಸಬೇಕಾಗಿದೆ ಎಂದು ಥಿಯೇಟರ್ ಮಾಲೀಕ ಪ್ರಕಾಶ್ ನರಸಿಂಹಯ್ಯ ಅವರು ಬೇಸರದಲ್ಲಿಯೇ ತಿಳಿಸುತ್ತಿದ್ದಾರೆ.
ಬದಲಾದ ಸನ್ನಿವೇಶದಲ್ಲಿ ಒಟಿಟಿ ಅಲೆ ಶುರುವಾಗಿದೆ. ಓಟಿಟಿ, ಮಲ್ಪಿಫ್ಲೆಕ್ಸ್ಗಳ ಹಾವಳಿ ಮತ್ತು ಬದಲಾದ ಕಾಲಘಟ್ಟದಲ್ಲಿ ಅನೇಕ ಸಿನಿಮಾ ಪ್ರದರ್ಶನಗಳ ಮೂಲಕ ಅರ್ಧ ಶತಮಾನ ಕಂಡ ಕಾವೇರಿ ನಿಲ್ಲಿಸುವುದು ತೀರಾ ಬೇಸರದ ಸಂಗತಿ. ಇಲ್ಲಿ ಅನೇಕ ದಿಗ್ಗಜರ ಸಿನಿಮಾ ಪ್ರದರ್ಶನ ಕಂಡಿವೆ. ಅಲ್ಲದೇ 'ಪುನೀತ್ ರಾಜಕುಮಾರ್' ಅವರ 'ಪರಮಾತ್ಮ' ಸಿನಿಮಾದ ದೃಶ್ಯಗಳನ್ನು ಈ ಥಿಯೇಟರ್ನಲ್ಲಿ ಸೆರೆ ಹಿಡಿಯಲಾಗಿತ್ತು. ಇವೆಲ್ಲವೂ ನೆನಪು ಮಾತ್ರ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸರ್ವನಾಶಕ್ಕೆ ಕಾರಣವಾಗಿದೆ. ಅಲ್ಲದೇ ಸಿನಿಮಾ ನೋಡುವ ಶೈಲಿಯು ಬದಲಾಗಿದೆ. ಇದೀಗ ಎಲ್ಲವೂ ಆನ್ಲೈನ್ ಆಗಿಬಿಟ್ಟಿದೆ. ಇದಕ್ಕೆಲ ಕೊರೊನಾ ಸಾಂಕ್ರಾಮಿಕವೂ ಒಂದು ಕಾರಣವಾಯಿತು ಎಂದು ಅವರು ಭಾವುಕರಾಗಿ ಹೇಳಿದರು.
Publisher: ಕನ್ನಡ ನಾಡು | Kannada Naadu