ಬಂಜೆತನ ನಿವಾರಣಗೆ ಆರೋಗ್ಯ ಇಲಾಖೆಯ ದಿಟ್ಟ ಹಜ್ಜೆ: ಇನ್ನು ಮುಂದೆ ಸರಕಾರಿ ಆಸ್ಪತ್ರೆಗಳಲಿ ಸಿಗಲಿದೆ IVF ಚಿಕಿತ್ಸೆ
09 May, 2024
ಬೆಂಗಳೂರು : ಮಕ್ಕಳ ಕನಸು ಕಾಣುವ ಅದೇಷ್ಟೋ ದಂಪತಿಗಳಿಗೆ ಈಗ ಸರಕಾರಿ ಆಸ್ಪತ್ರ ಆಶಾದಾಯಕ ನಂಬಿಕೆಯ ಕೇಂದ್ರವಾಗಲಿದೆ. ಬಂಜೆತನ ನಿವಾರಣೆಗೆ ಲಕ್ಷಾಂತರ ರೂ. ವೆಚ್ಚದಲ್ಲಿ ಮಾಡಿಸಬೇಕಾದ ಚಿಕಿತ್ಸೆಗಳು ಇನ್ನು ಮುಂದೆ ಸರಕಾರಿ ಆಸ್ಪತ್ರೆಯಲ್ಲಿಯೂ ಸಿಗುವಂತಾಗಿದೆ. ಈ ಸುದ್ದಿ ಕೇಳುತ್ತಿದಂತೆ ಸಾಮಾನ್ಯ ಜನರ ಮೊಗದಲ್ಲಿ ನಗುವಿನ ಸೆಲೆ ಮೂಡುವುದರಲ್ಲಿ ಎರಡು ಮಾತಿಲ್ಲ.
ಇತ್ತೀಚಿನ ಒತ್ತಡದ ಒತ್ತಡ ಸೇರಿದಂತೆ ನಾನಾ ಕಾರಣಗಳಿಂದ ಹಲವು ದಂಪತಿಗಳಿಗೆ ಮಕ್ಕಳ್ಳಿಲ್ಲದ ಕೊರತೆ ಕಾಡುವುದು ಸಾಮಾನ್ಯವಾಗಿದೆ. ಹೀಗಾಗಿ ಕೆಲವರು ದೇವರಲ್ಲಿ ಹರಕೆ ಕಟ್ಟಿದರೂ , ವೈದ್ಯಕೀಯ ಚಿಕಿತ್ಸೆ ಮೊರೆ ಹೋಗುವುದು ಅನಿವಾರ್ಯವಾಗಿದೆ. ಆದರೆ ಬಂಜೆತನದ ನಿವಾರಣೆಯ ಚಿಕಿತ್ಸೆ ಎನ್ನುವುದು ಸಾಮಾನ್ಯರ ಜನರ ಪಾಲಿಗೆ ಕಬ್ಬಿಣದ ಕಡಲೆಯಂತಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿದ್ದು ಬಡ ಹಾಗೂ ಮದ್ಯಮ ವರ್ಗದವರಿಗೆ ಈ ಚಿಕಿತ್ಸೆ ಪಡೆಯೋದು ತೀರಾ ಕಷ್ಟವೇ.

ಮಕ್ಕಳಾಗದ ಸಮಸ್ಯೆಗೆ ಹಲವಾರು ಕಾರಣಗಳು ಇರುತ್ತವೆ. ತಡವಾಗಿ ಮದುವೆ, ಜೀವನದಲ್ಲಿನ ಕಮಿಟ್ ಮೆಂಟ್, ಆರ್ಥಿಕತೆ ಹೊರೆ ಹಾಗೂ ದಂಪತಿಗಳ ನಡುವಿನ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಸಾಕಷ್ಟು ಜನ ದಂಪತಿಗಳು ಮಕ್ಕಳಾಗದ ಸಮಸ್ಯೆಯನ್ನ ಎದುರಿಸುವ ಪ್ರಕರಣಗಳು ಕಾಣವುದು ಸಾಮಾನ್ಯ.
ಈ ಎಲ್ಲ ಸಮಸ್ಯೆಗಳನ್ನು ದೂರ ಮಾಡಲು ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್ ನೀಡಿದೆ. ಮಕ್ಕಳಾಗದ ಬಡ ತಾಯಂದಿರಿಗೆ ಆರೋಗ್ಯ ಇಲಾಖೆ ಹೊಸ ಗಿಫ್ಟ್ ನೀಡಿದ್ದು ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹೊಸ ದುಬಾರಿ ಚಿಕಿತ್ಸೆಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ಪರಿಚಯಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಬಂಜೆತನದಿಂದ ಬಳಲುವ ಬದಲು ಮಕ್ಕಳನ್ನ ಪಡೆಯಲು ಐವಿಎಫ್ ನಂತಹ ಚಿಕಿತ್ಸೆಯನ್ನ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಈ ಹಿಂದೆ ಐವಿಎಫ್ ಚಿಕಿತ್ಸೆ ಎನ್ನುವುದನ್ನು ಕೇವಲ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಡೆಯಬೇಕಿತ್ತು. ಪರಿಣಾಮ ಈ ಚಿಕಿತ್ಸೆಯನ್ನ ಬಡ ಹಾಗೂ ಮದ್ಯಮ ವರ್ಗದವರಿಗೆ ಪಡೆಯೋದು ಕಷ್ಟದ ಮಾತಾಗಿತ್ತು. ಐವಿಎಫ್ ಚಿಕಿತ್ಸೆ ಎಷ್ಟೋ ಪೋಷಕರು ಪಡೆಯಲು ಸಾಧ್ಯವಾಗದ ಕಾರಣಕ್ಕೆ ಮಕ್ಕಳು ಪಡೆಯಲು ಸಾಧ್ಯವಾಗದೆ ಸಂಕಷ್ಟ ಎದುರಿಸುತ್ತಿದ್ದರು. ಪರಸ್ಥಿತಿಯನ್ನು ಅರಿತ ಆರೋಗ್ಯ ಇಲಾಖೆ ಈ ಸಮಸ್ಯೆಗೆ ಒಂದು ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ. ಮಕ್ಕಳಾಗದ ದಂಪತಿಗಳಿಗೆ ಆರೋಗ್ಯ ಇಲಾಖೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿರುವುದು ಸಮಾಜದ ಎಲ್ಲ ವರ್ಗದ ಜನರು ಸ್ವಾಗತಿಸುವ ಕಾರ್ಯವಾಗಿದೆ.
ಇನ್ನು ಮುಂದೆ ಸರ್ಕಾರದಿಂದ ಮಕ್ಕಳಾಗದವರಿಗೆ ಐವಿಎಫ್ ಚಿಕಿತ್ಸೆ ಅವಶ್ಯ ಇದ್ದವರಿಗೆ ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆಯನ್ನ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಆರ್ಥಿಕ ಹೊರೆಯಿಂದಾಗಿ ಇಷ್ಟು ದಿನ ಎಷ್ಟೋ ದಂಪತಿಗಳಿಗೆ ಮಕ್ಕಳನ್ನ ಮಾಡಿಕೊಳ್ಳುವ ಆಸೆ ಇದ್ದರೂ, ಸಹ ಚಿಕಿತ್ಸೆಗೆ ಲಕ್ಷಾಂತರ ಹಣವಿಲ್ಲದೇ ಮಕ್ಕಳನ್ನ ಪಡೆಯದೇ ಹಿಂದೇಟು ಹಾಕುತ್ತಿದ್ರು. ಆದರೆ ಬಹಳ ಬೇಡಿಕೆ ಇರೋ IVF ಚಿಕಿತ್ಸೆಯನ್ನ ಸರ್ಕಾರ ಕಡಿಮೆ ವೆಚ್ಚದಲ್ಲಿ ನೀಡಲು ಮುಂದಾಗಿದ್ದು, ಯಾರು ಬೇಕಾದರೂ IVF ಚಿಕಿತ್ಸೆ ಪಡೆಯಬಹು ಎನ್ನಬಹುದಾಗಿದೆ.
ಈಗಾಗಲೇ ಪ್ರಾಥಮಿಕ ಹಂತದಲ್ಲಿ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಆರಂಭಿಸಲಾಗುವುದು. ಬಂಜೆತನ ನಿವಾರಣೆಯ ಬಹು ನಿರೀಕ್ಷಿತ IVF ಚಿಕಿತ್ಸೆಯಲ್ಲಿ ಅಂಡಾಣು ಮತ್ತು ವೀರ್ಯಾಣುವನ್ನು ದೇಹದ ಹೊರಗೆ ಫಲ ನೀಡಲು ಇಟ್ಟು, ನಂತರ ಮಹಿಳೆ ಗರ್ಭಾಶಯಕ್ಕೆ ಇಂಜೆಕ್ಟ್ ಮಾಡುವ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ಸದ್ಯ ಇದು ಬಡ ಹಾಗೂ ಮದ್ಯಮ ವರ್ಗದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬರ್ತಿರೋದು ಬಹಳ ಸಂತೋಷದ ವಿಷಯವಾಗಿದ್ದು, ಹಣದ ಸಮಸ್ಯೆಯಿಂದ ಮಕ್ಕಳನ ಮೇಲಿನ ಆಸೆಯನ್ನ ಕೈಬಿಟ್ಟ ಅನೇಕ ದಂಪತಿಗಳು ಇದು ವರವಾಗಲಿದೆ.

ಈ ಬಗ್ಗೆ ಸಂತಸ ಹಂಚಿಕೊಂಡ ಕೆ.ಸಿ. ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ ಇಂದಿರಾ ಅವರು ಈ ಯೋಜನೆ ಮಕ್ಕಳಿಲ್ಲ ಎಂದು ಕನವರಿಸುವ ದಂಪತಿಗಳಿಗೆ ಇದು ವರವಾಗಲಿದೆ. IVF ಚಿಕಿತ್ಸೆ ಪಡೆಯುವುದು ಎಂದರೆ ಒಂದು ವರ್ಗದ ಜನರಿಗೆ ಮಾತ್ರ ಎನ್ನುವ ಮಾತು ಸಹ ಇನ್ನುಮುಂದೆ ಹುಸಿಯಾಗಲಿದೆ. ಬಡವರು ಸಹ ಸರಕಾರಿ ಆಸ್ಪತ್ರಯಲ್ಲಿ ಈ ಚಿಕಿತ್ಸೆಯ ಪ್ರಯೋಜನ ಪಡೆದು ಜೀವನದಲ್ಲಿ ಖುಷಿಯಾಗಿ ಇರುವಂತಾಗುವ ದಿನಗಳು ಮುಂದಿನ ದಿಗಳಲ್ಲಿ ಬರಲಿದೆ ಎಂದು ಹೇಳಿದ್ದಾರೆ.
Publisher: ಕನ್ನಡ ನಾಡು | Kannada Naadu