ಪ್ರವಾಹಕ್ಕೆ ಸಿಲುಕಿದ ದುಬೈ ಸಂತ್ರಸ್ತರಿಗೆ ಸಹಾಯ ಹಸ್ತ
01 May, 2024
ದುಬೈ : ಸುನಾಮಿಗೂ ನಾಚಿಸುವ ಮಹಾ ಮಳೆ ಸುರಿದ ಪರಿಣಾಮ ದುಬೈ ಭೀಕರ ಪ್ರವಾಹ ಕಂಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಇನ್ನೂ ಆ ಪ್ರವಾಹದಲ್ಲಿ ಅಬು ಧಾಬಿನ ಬಹುತೇಕ ಭಾಗಗಳು ಜಲಾವೃತವಾಗಿದ್ದು ಅಲ್ಲಿ ನೆಲೆಸಿರುವ ಜನರ ಪರಿಸ್ಥಿತಿ ಹೇಳತೀರದಂತಾಗಿದೆ.
ಭಾರೀ ಮಳೆ ಹಾಗೂ ಪ್ರವಾಹ ಹಿನ್ನೆಲೆಯಲ್ಲಿ ಶಾರ್ಜಾ ಅಜ್ಮಾನ್ ಭಾಗದಲ್ಲಿ ಕಳೆದ ಒಂದು ವಾರದಿಂದಲೂ ಮನೆಯಿಂದ ಹೊರ ಬರಲಾಗದೆ ಜನರು ಪರದಾಡುತ್ತಿದ್ದಾರೆ. ಅಂಥವರನ್ನು ನಮ್ಮ ಕನ್ನಡಿಗರು ನೆರವಿಗೆ ನಿಂತಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಸಂಕಷ್ಟದಲ್ಲಿ ಇರುವ ಜನರಿಗೆ ಕನ್ನಡಿಗರು, ರಕ್ಷಣೆಕಾರ್ಯ ಮಾಡಿ ಆಹಾರ ವಿತರಣೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ದುಬೈ ಕನ್ನಡ ಸಂಘಗಳು ಹೆಮ್ಮೆಯಿಂದ ಕನ್ನಡಿಗರ ಸೇವೆ ನೆನೆಸಿಕೊಳ್ಳುತ್ತಿದ್ದಾರೆ.
ಪ್ರವಾಹದಲ್ಲಿ ಸಿಲುಕಿದ್ದವರಲ್ಲಿ ಭಾರತೀಯರು ಸೇರಿದಂತೆ ಇತರ ವಿದೇಶಿಯ ಸೇರಿದ್ದಾರೆ. ಅವರಿಗೆ ಆಹಾರ ಪದಾರ್ಥ, ನೀರು ಮತ್ತು ಇನ್ನಿತರ ಅವಶ್ಯಕ ವಸ್ತುಗಳನ್ನು ಕೊಡುವ ಕೆಲಸವನ್ನು ಹೆಮ್ಮೆಯ ದುಬೈ ಕನ್ನಡ ಸಂಘ ಮಾಡಿ ಮಾನವೀಯತೆ ಮೆರೆದಿದೆ. ದುಬೈ ಕನ್ನಡ ಸಂಘದ ಕೊಡಗಿನ ರಫೀಕಲಿ, ಮಂಡ್ಯದ ಹಾದಿಯ, ಮಡಿಕೇರಿ ಪ್ರತಾಪ್, ಶಿವಮೊಗ್ಗದ ಸಂತೋಷ್, ಬೆಂಗಳೂರಿನ ಅರ್ಪಿತಾ, ಶಿವಮೊಗ್ಗ ಅಯ್ಯುಬ್, ನಝೀರ ಮಂಡ್ಯ ಮತ್ತು ಅಬ್ರಾರ್ ಅವರು ಸೇರಿ ಹಲವು ಕನ್ನಡಿಗರು ಸಂಕಷ್ಟದಲ್ಲಿ ಇರುವ ಜನರ ಸೇವೆಯನ್ನುನಿರಂತರವಾಗಿ ಮಾಡುತ್ತಿದ್ದಾರೆ.
ಪ್ರವಾಹದಲ್ಲಿ ಸಿಲುಕಿದ ವಾಹನಗಳು ಸಂಚಾರ ಮಾಡದಂತಹ ಸ್ಥಳಗಳಿಗೆ ದೋಣಿ ಬಳಸಿಕೊಂಡು ಆಹಾರ ಪದಾರ್ಥಗಳು ಸೇರಿದಂತೆ ಅವಶ್ಯಕ ವಸ್ತುಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ದುಬೈನಲ್ಲಿರುವ ಎಂಬಿಎಮ್ ಕ್ಲಿನಿಕ್ ಜೊತೆ ಸೇರಿ ಉಚಿತ ಅರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಔಷಧಿಯನ್ನು ತಲುಪಿಸುವಲ್ಲಿ ನಮ್ಮ ಹೆಮ್ಮೆಯ ಕರ್ನಾಟಕದ ಕನ್ನಡ ತಂಡ ಮಾಡುತ್ತಿದೆ ಎನ್ನುವ ಮಾಹಿತಿ ಕನ್ನನಾಡಿಗೆ ಲಭ್ಯವಾಗಿದೆ. ದುಬೈನಲ್ಲಿ ಇರುವ ಕನ್ನಡಿಗರ ಬಗ್ಗೆ ಕನ್ನಡನಾಡು ಹೆಮ್ಮೆಪಡುತ್ತಿದೆ.
Publisher: ಕನ್ನಡ ನಾಡು | Kannada Naadu