ಕನ್ನಡ ನಾಡು | Kannada Naadu

ಎಚ್ಚರ..! ಎಚ್ಚರ ..!! ಇವರು ನಕಲಿ ಪ್ರವೀಣರು ...!!!  : ಬೆಳ್ಳುಳ್ಳಿಯನ್ನೂ ಬಿಡದ ಚೀನಿಗರು 

30 Apr, 2024

ಬೆಂಗಳೂರು: ನಕಲಿತನ ಹುಟ್ಟಿದ್ದೇ ಚೀನಾದಲ್ಲಿ..! ಎನ್ನುವ ಮಾತು ಇನ್ನೊಮ್ಮೆ ಸತ್ಯವಾಗುತ್ತಿದೆ. ಜನರ ಜೀವದ ಜೊತೆಗೆ ನಿತ್ಯವೂ ಆಟವಾಡುತ್ತ ತನ್ನ ಬೇಳೆ ಬೆಯಿಸಿಕೊಳ್ಳುತ್ತಿರುವ ಚೀನಿಯರು ಈಗ ಇನ್ನೊಂದು ಹೆಜ್ಜೆ ಮುಂದೆ ಬಂದು ನಮ್ಮ ಆರೋಗ್ಯದ ಮೇಲೆ ಗದಾಪ್ರಹಾರಕ್ಕೆ ಮುಂದಾಗಿದ್ದಾರೆ. ಚೈನಾದ ವಸ್ತುಗಳನ್ನು ಎಷ್ಟೇ ಭಹಿಷ್ಕರಿಸಿದರೂ ಒಂದಿಲ್ಲೊಂದು ರೀತಿಯಲ್ಲಿ ಮಾರುಕಟ್ಟೆ ಪ್ರವೇಶ ಮಾಡುವ ಮೂಲಕ ತಮ್ಮ ನೀಚಬುದ್ದಿಯನ್ನು ಪ್ರದರ್ಶನ ಮಾಡುತ್ತಲೇ ಇರುತ್ತಾರೆ. 
 
ಜನರ ಆರೋಗ್ಯದ ದೃಷ್ಟಿಯಿಂದ ನಕಲಿ ಪದಾರ್ಥಗಳ ಹಾವಳಿ ತಪ್ಪಿಸಲು ಸರ್ಕಾರ ಅದೆಷ್ಟೇ ಮುಂಜಾಗ್ರತೆ ತೆಗೆದುಕೊಳ್ಳುತ್ತಿದ್ದರೂ ನೀರಿನಲ್ಲಿ ಹುಣುಸೆಹಣ್ಣು ತೊಳೆದಂತಾಗುತ್ತಿದೆ.  ಏಷ್ಟೆ ಪ್ರಯತ್ನ ಮಾಡಿದರೂ ಇತ್ತೀಚಿನ ದಿನಗಳಲ್ಲಿ  ನಕಲಿ ಪದಾರ್ಥಗಳ ಹಾವಳಿ ಮಾತ್ರ ನಿಲ್ಲುವುದೇ ಇಲ್ಲದಾಗಿದೆ. ಈ ಮಧ್ಯ ಲೆಕ್ಕಕ್ಕೆ ಸಿಗದಷ್ಟು ಚೀನಾದ ನಕಲಿ ವಸ್ತುಗಳು ನಮಗ್ಯಾರಿಗೂ ಅರಿವಿಲ್ಲದಂತೆಯೇ ಭಾರತದ ಮಾರುಕಟ್ಟೆಗೆ ಪ್ರವೇಶಿಸಿ ಸುಲಭವಾಗಿ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಅವುಗಳ ನೇರ ಸಿಕಾರಿ ನಮ್ಮ ಜನರಾಗಿದ್ದಾರೆ. ಇಂಥಹ ವಸ್ತುಗಳ ಪೈಕಿ ಈಗ ಚೀನಾದ ಬೆಳ್ಳುಳ್ಳಿಯೂ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ..! 
 
  ಇಲ್ಲಿಯವರೆಗೆ ನಾವು ಬೆಳ್ಳುಳ್ಳಿ ಖರಿಸುವಾಗ ನಾಟಿ ಬೆಳ್ಳುಳ್ಳಿ ಹಾಗೂ ಜವಾರಿ ಬೆಳ್ಳುಳ್ಳಿ ಎನ್ನುವುದನ್ನು ಪರೀಕ್ಷೆ ಮಾಡುತ್ತಿದ್ದೇವು. ಇದರೊಂದಿಗೆ ಗಾತ್ರದಲ್ಲಿ ಚಿಕ್ಕದ್ದು, ದೊಡ್ಡದ್ದು ಎಂದು ನೋಡಿ ಖರಿದಿಸುತ್ತದ್ದೇವು. ಬೆಳ್ಳುಳ್ಳಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕ ಪ್ರತಿಜೀವಕವಾಗಿದ್ದು, ಬರಪೂರ ಪ್ರಮಾಣದಲ್ಲಿ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಆದರೆ ಈಗ ಇಂಥಹ ಅಮೂಲ್ಯವಾಗಿರುವ ಬೆಳ್ಳುಳ್ಳಿಗೆ ಇನ್ನೊಂದು ಕಾಂಪಿಟಿಟರ್‌ ಸೇರಿಸಬೇಕಾದ ಸ್ಥಿತಿ ಇದೆ. ಸೂಕ್ತವಾಗಿ ವಾಸನೆಯನ್ನು ನೋಡಿ ಇದು ಅಸಲಿಯೋ ಅತವಾ ನಕಲಿಯೋ ಎನ್ನುವುದನ್ನು ಸಹ ನೋಡಿಕೊಳ್ಳುವ ಸ್ಥಿತಿ ನಮಗೆ ಬಂದು ಬಿಟ್ಟಿದೆ.  
 
ಇನ್ನುಂದೆ ಪ್ರತಿ ಬಾರಿ  ಬೆಳ್ಳುಳ್ಳಿ ಖರೀದಿಸುವಾಗಲೂ ಅದರ ವಾಸನೆ ಪರಿಶೀಲಿಸಿ ಖರೀದಿಸಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಭಾರತ ಸರ್ಕಾರದಿಂದ ನಿಷೇಧಕ್ಕೊಳ್ಳಗಾದ ಚೀನಾದ ಬೆಳ್ಳುಳ್ಳಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಪ್ರಯತ್ನಿಸುತ್ತಿದೆ. ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಆಯುವೇರ್ದದಲ್ಲಿ ಬೆಳ್ಳುಳ್ಳಿಯ ಮಹತ್ವವನ್ನು ಅರಿತು, ಭಾರತೀಯ ಬೆಳ್ಳುಳ್ಳಿಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಸುಮಾರು 10 ವರ್ಷಗಳ ಹಿಂದಿನಿಂದಲೇ ಕ್ರಮಕ್ಕೆ ಮುಂದಾಗಿತ್ತು. ಆ ಹಿನ್ನೆಲಯಲ್ಲಿ ಚೀನಾದ ಬೆಳ್ಳುಳ್ಳಿಯನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಆದರೆ, ಈಗ ಚೀನಾದ ಬೆಳ್ಳುಳ್ಳಿ ನಮ್ಮ ದೇಶದಲ್ಲಿ ಅಕ್ರಮವಾಗಿ ಮಾರುಕಟ್ಟೆ ಪ್ರವೇಶಿಸಲು ಯತ್ನಿಸುತ್ತಿದ್ದು, ಕೆಲವೆಡೆ ಸ್ಥಳೀಯ ಬೆಳ್ಳುಳ್ಳಿಯೊಂದಿಗೆ ಕಲಬೆರಕೆಯಾಗುತ್ತಿದೆ ಎನ್ನುವ ಕೂಗು ಕೇಳಿಬರುತ್ತಿದೆ.
ಚೀನಾದ ಬೆಳ್ಳುಳ್ಳಿಗಳನ್ನು ಗುರುತಿಸುವುದು ತೀರಾ ಸುಲಭ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅವು ಗ್ರಾತ್ರದಲ್ಲಿ ತೀರಾ  ದೊಡ್ಡದಾಗಿ ಇರುತ್ತವೆ. ನಮ್ಮ ದೇಶದ ಬೆಳ್ಳುಳ್ಳಿಗಿಂತ ತೀರಾ ಬೆಳ್ಳಗೆ ಇರುತ್ತವೆ. ಸಾಮಾನ್ಯ ಬೆಳ್ಳುಳ್ಳಿಯಂತೆ ಸಿಪ್ಪೆ ಸುಲಿದರೂ ಅದಕ್ಕೆ ಯಾವುದೇ ವಾಸನೆ ಇರುವುದಿಲ್ಲ. ಜೊತೆಗೆ ಬೇಗನ ಕೊಳೆಯಲು ಶುರುವಾಗುತ್ತದೆ. ಇದು ಈಶಾನ್ಯ ಮತ್ತು ಉತ್ತರ ಭಾರತದ ಭಾಗಗಳಲ್ಲಿ ಕಂಡುಬರುತ್ತದೆ. ಇದು ದೊಡ್ಡದಾಗಿರುವ ಬೆಳ್ಳುಳ್ಳಿಯಾಗಿದ್ದು, ದಕ್ಷಿಣ ಭಾರತದಲ್ಲಿ ಬೆಳೆಯುವ ಬೆಳ್ಳುಳ್ಳಿ ಚಿಕ್ಕದಾಗಿರುತ್ತದೆ. ವಾಸ್ತವದಲ್ಲಿ ದಕ್ಷಿಣ ಭಾರತದಲ್ಲಿನ ಬೆಳ್ಳುಳ್ಳಿಗೆ ಹೆಚ್ಚಿನ ತುಷ್ಟಿಗುಣ ಇರುವುದರಿಂದ ಇವು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಇನ್ನೂ ಚೈನೀಸ್ ಬೆಳ್ಳುಳ್ಳಿ ನಮ್ಮ ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. ನಮ್ಮಲ್ಲಿ ಇನ್ನೇನೂ ಕೊಲಾಹಲ ಸೃಷ್ಟಿಸುವ ಮುನ್ನವೇ ಇವುಗಳ ಬಳಕೆಗೆ ಕಡಿವಾಣ ಹಾಕಬೇಕು. ಇತರ ಚೀನೀ ವಸ್ತುಗಳಂತೆ ಇದನ್ನು ನಿಲ್ಲಿಸಬೇಕು ಎನ್ನುವುದು ತಜ್ಞರ ಸಲಹೆಯಾಗಿರುತ್ತದೆ.
 
ಯಾವುದೇ ಬೇರುಗಳಿಲ್ಲದೆ ಇರುವ  ಈ ಬೆಳ್ಳುಳ್ಳಿಯನ್ನುಸಾಮಾನ್ಯವಾಗಿ ಗುರುತಿಸುವುದು ತುಂಬಾ ಸುಲಭ. ಕೆಲವು ಸಂದರ್ಭಗಳಲ್ಲಿ, ಈ ಬೆಳ್ಳುಳ್ಳಿ ಬಿಳಿಯಾಗಿ ಕಾಣುವಂತೆ ಮಾಡಲು ಕ್ಲೋರಿನ್‌ ಬಳಸಿದ ದೃವದಲ್ಲಿ ಅದ್ದಿ ತೊಳೆಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಶಿಲೀಂಧ್ರಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಮೀಥೈಲ್ ಬ್ರೋಮೈಡ್ನೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿದೆ. ಚೈನೀಸ್ ಬೆಳ್ಳುಳ್ಳಿ ಯಾವುದೇ ಕಟುವಾದ ವಾಸನೆ ಅಥವಾ ಕಟುವಾದ ರುಚಿಯನ್ನು ಹೊಂದಿಲ್ಲ. ಆದರೆ, ನೋಡಲು ಉತ್ತಮವಾಗಿ ಕಾಣುತ್ತದೆ. ಭಾರತದಲ್ಲಿ ಬೆಳೆಯುವ ಬೆಳ್ಳುಳ್ಳಿ ಸದ್ಯ ಜಾಗತಿಕ ಮಾರುಕಟ್ಟೆ ಉತ್ತಮ ಫಲಿತಾಶ ಇರುವ ಬೆಳ್ಳುಳ್ಳಿಯಾಗಿದೆ. ದೇಶದಲ್ಲಿ ಬೆಳ್ಳುಳ್ಳಿಯ ಉತ್ಪಾದನೆಯು ಅಧಿಕವಾಗಿದೆ. ಪ್ರತಿ ಕೆಜಿ ಬೆಳ್ಳುಳ್ಳಿಯ ಸಗಟು ದರ 100 ರಿಂದ 250 ರೂ. ಆಗಿರುತ್ತದೆ.
 
  ಈ ಬಗ್ಗೆ ಬೆಂಗಳೂರಿನಲ್ಲಿಯೂ ಸಗಟು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸುತ್ತದ್ದಾರೆ. ಬೆಂಗಳೂರಿನ ಸಗಟು ಬೆಳ್ಳುಳ್ಳಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ದೀಪಕ್ ಜೆ ಶಾ ಅವರು ಮಾತನಾಡಿ, ಚೀನಾದ ಬೆಳ್ಳುಳ್ಳಿ ಮತ್ತು ಚೈನೀಸ್ ಬಿಳಿ ಈರುಳ್ಳಿ ನಮ್ಮ ಮಾರುಕಟ್ಟೆ ಪ್ರವೇಶಿಸಲು ನಾವು ಬಿಡುವುದಿಲ್ಲ. ಇದನ್ನು ನಿಷೇಧಿಸಲಾಗಿದ್ದು, ಮಾರಾಟ ಮಾಡಲು ಇಲ್ಲಿನ ವ್ಯಾಪಾರಿಗಳಿಗೆ ಅನುಮತಿ ನೀಡಿರುವುದಿಲ್ಲ. ಇದು ಯಾವುದೇ ಆರೋಗ್ಯ ಪ್ರಯೋಜನಗಳನ್ನು ಹೊಂದಿಲ್ಲ ಎನ್ನುವ ಪೂರ್ವಮಾಹಿತಿ ನಮಗೆ ಲಭ್ಯವಾಗಿದೆ. 
ಇನ್ನು ಈ ಮಧ್ಯವೂ ಚೀನಾದ ಈ ಬೆಳ್ಳುಳ್ಳಿ ಮತ್ತು ಈರುಳ್ಳಿಗಳು ಅಕ್ರಮವಾಗಿ ಮಾರುಕಟ್ಟೆಗೆ ಬಂದರೆ ಅನಾಹುತವಾಗುವ ಎಲ್ಲಾ ಸಾಧ್ಯತೆಗಳು ಇವೆ. ಆದ್ದರಿಂದ ನಮ್ಮ ವ್ಯಾಪಾರಿಗಳು ಎಚ್ಚರದಂತಿ ಇದ್ದು ಪ್ರತಿ ಸಗಟನ್ನು ಪರೀಕ್ಷೆ ಮಾಡಿಯೇ ಮುಂದಿನ ಕ್ರಮ ಜರುಗಿಸುವಂತೆ  ತಿಳಿಸುವ ಮೂಲಕ ಎಲ್ಲರಿಗೂ ಎಚ್ಚರಿಸಲಾಗಿದೆ ಎಂದು ಹೇಳಿದ್ದಾರೆ. 
 
 
 
 
 
 

Publisher: ಕನ್ನಡ ನಾಡು | Kannada Naadu

Login to Give your comment
Powered by