ಕನ್ನಡ ನಾಡು | Kannada Naadu

ʻಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ ʼಎಂಬ ಥೀಮ್‌ನ ಅಡಿಯಲ್ಲಿ ʻವಿಶ್ವ ಭೂಮಿʼ ದಿನಾಚರಣೆ.

22 Apr, 2024

             ಇಂದು ಏಪ್ರಿಲ್‌ 22...  ಈ ದಿನದಂದು ಪ್ರತಿ ವರ್ಷ ವಿಶ್ವ ಭೂಮಿ ದಿನವನ್ನಾಗಿ ಆಚರಿಸಲಾಗುತ್ತದೆ. ವಾಸ್ತವದಲ್ಲಿ ಭೂಮಿಯ ರಕ್ಷಣೆಯ ಮಹತ್ವ ಅರಿಯಲು ಈ ದಿನವನ್ನು ಆಚರಿಸುವುದು ಪದ್ಧತಿ. ಸದ್ಯದ ಸ್ಥಿತಿಯಲ್ಲಿ  ಭೂಮಿಯಲ್ಲಿ ಹವಾಮಾನದ ವೈಪರಿತ್ಯ ಸಾಕಷ್ಟು ಕಾಣಲು ಸಿಗುತ್ತದೆ. ಅದರಿಂದಾಗಿ ಆಗಾಗ ಪ್ರಕೃತಿ ವಿಕೋಪಗಳ ಸಂಭವಿಸುವ ಕುರಿತು ಆಗಾಗ ಕೇಳುತ್ತಲೇ ಇರುತ್ತೇವೆ. ಇಂಥಹ ಸ್ಥಿತಿಯಂದ ಈ ದಿನ ತುಂಬಾ ಮಹತ್ವವನ್ನು ಪಡೆದುಕೊಳ್ಳುವುದು.  



              ವಿಶ್ವ ಭೂಮಿಯ ದಿನವಾದ ಇಂದು ನಾವೇಲ್ಲಾ ಸೂಕ್ಷಮಾಗಿ ಗಮನಿಸಬೇಕಾದ ಸಂಗತಿ ಎಂದರೆ, ಮರುಭೂಮಿಯಾಗಿದ್ದ ದುಬೈನಲ್ಲಿ ಪ್ರವಾಗ ಉಕ್ಕಿ ಹರಿಯುತ್ತಿದೆ. ಭಾರತದ ಹಲವು ಕಡೆ ಬರಗಾಲ ತಾಂಡವವಾಡುತ್ತಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.  ಈ ಭೂಮಿಯನ್ನು ಮನುಷ್ಯ ನಿರ್ದಯಿಯಾಗಿ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾನೆ. ಅದರ ಪರಿಣಾಮವೇ ಇಂದು ಈ ಪರಿಯ  ಪ್ರಕೃತಿ ವಿಕೋಪಗಳನ್ನು ಕಾಣುತ್ತಿರುವುದು. ಈ ಧರಣಿಯ ಮೇಲೆ ಮನುಷ್ಯ ಮಾತ್ರವಲ್ಲ, ಅದೇಷ್ಟೋ ಜೀವ ಸಂಕುಲಗಳು, ಸೂಕ್ಷಾಣುಗಳು, ಸಸ್ಯಗಳು ಇತ್ಯಾದಿಗಳನ್ನು ಭೂಮಿ ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ.   ಅವೆಲ್ಲದರ ಮಧ್ಯ ಈ ಭೂಮಿಗೆ ಕಂಟಕವಾಗಿರುವುದು ಜೀವಿ ಎಂದರೆ ಮನುಷ್ಯ ಮಾತ್ರ...!


              ವಿಶ್ವ ಭೂ ದಿನವನ್ನು ಮೊದಲ ಬಾರಿಗೆ1970 , ಏಪ್ರಿಲ್ 22ರಂದು ಆಚರಿಸಲಾಗಿತ್ತು. 1969ರಲ್ಲಿ ʻಸ್ಯಾನ್ ಫ್ರಾನ್ಸಿಸ್ಕೊʼದಲ್ಲಿ ನಡೆದ UNSEO ಸಮ್ಮೇಳನದಲ್ಲಿ ಶಾಂತಿ ಕಾರ್ಯಕರ್ತಎಂದು ಕರೆಸಿಕೊಂಡ ʻಜಾನ್ ಮೆಕ್ ಕಾನ್ನೆಲ್ʼ ಅವರು ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯ ಬಗ್ಗೆ ಪ್ರಸ್ತಾಪಿಸಿದರು. ಅದರಂತೆ ವಿಶ್ವ ಭೂ ದಿನವನ್ನು ಮೊದಲು 1970 ಮಾರ್ಚ್‌ 21ರಂದು ನಡೆಸಲು ಆರಂಭಿಕ ಪ್ರಸ್ತಾಪ ನಡೆದಿತ್ತು. ನಂತರ, ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಗೇಲಾರ್ಡ್ ನೆಲ್ಸನ್ ಏಪ್ರಿಲ್ 22,1970 ರಂದು ರಾಷ್ಟ್ರವ್ಯಾಪಿ ಪರಿಸರ ಕಾಳಜಿ ನಡೆಸಲು ಅಭಿಮಾನ ನಡೆಸಲಾಗಿತ್ತು. ಹೀಗಾಗಿ ಈ ದಿನವನ್ನು 'ಅರ್ಥ್ ಡೇ' ಅಂದರೆ ಭೂಮಿ ದಿನವಂದು ಆಚರಿಸುವ ಪದ್ಧತಿ ಜಾರಿಗೆ ಬಂತು.  
          ಜೊತೆಗೆ ಮುಖ್ಯವಾಗಿ ಭೂಮಿಯನ್ನು ಉಳಿಸಿ ಕಾಯ್ದುಕೊಳ್ಳುವ  ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳ ಶಾಲೆಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಏಪ್ರಿಲ್‌ 22 ಸೂಕ್ತ ಎನ್ನುವ ಅಭಿಪ್ರಾಯೂ ಇತ್ತು.  ಆದರೆ ಭಾರತ ಎಲ್ಲಾ ರಾಜ್ಯಗಳಲ್ಲಿ  ಈ ವೇಳೆ  ರಜಾ ದಿನಗಳಾಗಿದೆ. ಹಾಗಾಗಿ ಇಲ್ಲಿ ಶಾಲೆಗಳಲ್ಲಿ ವಿಶ್ವ ಭೂಮಿಯ ದಿನವನ್ನು ಅಷ್ಟಾಗಿ ಆಚರಿಸುವುದು ಕಂಡು ಬರುವುದಿಲ್ಲ. 
             ಪ್ರತಿ ವರ್ಷ ಈ ದಿನದಂದು ಭೂಮಿಯನ್ನು ಕಾಪಾಡಿಕೊಳ್ಳಲು ಒಂದೊಂದು ʻಥೀಮ್‌ ಘೋಷಿಸಲಾಗುತ್ತದೆʼ.  ಭೂಮಿಯನ್ನು ಮುಂದಿನ ಪೀಳಿಗೆ ಉಳಿಸುವ ಕುರಿತಂತೆ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ತುರ್ತಾಗಿ ಮಾಡಬೇಕಾದ ನೆರವು ಸೇರಿದಂತೆ ವಿವಿಧ ವಿಚಾರಗಳನ್ನು  ಚರ್ಚಿಸಲಾಗುತ್ತದೆ.  ಭೂಮಿಗೆ ಬಂದಿರುವ ಹಲವು ಆತಂಕಗಳ ಕುರಿತು ಚಿಂತನೆ ಮಾಡುವ ಅವಶ್ಯಕತೆಯೂ ಇದೆ.   ಪ್ಲಾಸ್ಟಿಕ್ ಬಳಕೆ, ತಾಪಮಾನ ಏರಿಕೆ, ಮರಳುಗಾಡು ನಿರ್ಮಾಣವಾಗುತ್ತಿರುವುದು, ಹೆಚ್ಚುತ್ತಿರುವ ಜನಸಂಖ್ಯೆ, ನಿರಂತರ ಕಾಡು ನಾಶ ಹೀಗೆ ಇದರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.  ಭೂಮಿ ಉಳಿಸುವ ಕುರಿತು ಕಾರ್ಯತತ್ಪರರಾಗದೇ, ಅನ್ಯ ಗ್ರಹದಲ್ಲಿ ಸೂರಿನ  ಕನಸು ಕಾಣುತ್ತಿದ್ದೇವೆ.


            ಪ್ರಪಂಚದ 190 ದೇಶಗಳಲ್ಲಿ ಇಂದು ವಿಶ್ವ ಭೂಮಿಯ ದಿನಾಚರಣೆಯನ್ನುಆಚರಿಸಲಾಗುತ್ತದೆ. ಇನ್ನೂ ಮಿಕ್ಕ ಕೆಲವು ದೇಶಗಳಲ್ಲಿ ಬೇರೆ ದಿನದಂದು ಭೂಮಿಯ ದಿನವನ್ನು ಆಚರಿಸುತ್ತಿರುವುದು ಕಂಡುಬರುತ್ತದೆ.  ಒಂದು ಅಧ್ಯಯನದ ಪ್ರಕಾರ 190 ದೇಶಗಳಲ್ಲಿ 20,000 ಕ್ಕೂ ಹೆಚ್ಚುಕಡೆಗಳಲ್ಲಿ ವರ್ಷಪೂರ್ತಿ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ  ಮೂಲಕ ಭೂ ರಕ್ಷಣೆಮಾಡಲಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಈ ವರ್ಷ, ʻಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ ʼಎಂಬ ಥೀಮ್ ಇಟ್ಟುಕೊಳ್ಳಲಾಗಿದೆ. ಕಾರಣ 2040 ರ ವೇಳೆಗೆ ಪ್ಲಾಸ್ಟಿಕ್ ಬಳಕೆಯನ್ನು ಶೇ.60ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ.
            ವಿಶ್ವ ಭೂಮಿಯ ದಿನಕ್ಕಾಗಿ ವಿಶೇಷ ಧ್ವಜ ಹಾಗೂ ಗೀತೆಯನ್ನು ಸಹ  ಇದೆ. 17 ಮಂದಿ ಅಪೊಲೊ ಸಂಸ್ಥೆಯ ಸಿಬ್ಬಂದಿಗಳು 1972 ರಲ್ಲಿ ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಭೂಮಿಯ ಪ್ರಸಿದ್ಧ ಛಾಯಾಚಿತ್ರ ಈ ಧ್ವಜದಲ್ಲಿ ಇಡಲಾಗಿದೆ.  2018ರ ಏಪ್ರಿಲ್‌ನಲ್ಲಿ ಭಾರತೀಯರು 24 ಗಂಟೆಗಳಲ್ಲಿ 50 ಮಿಲಿಯನ್ ಮರಗಳನ್ನು ನೆಟ್ಟು ಹೊಸ ದಾಖಲೆ ಬರೆದಿದ್ದು ಇಲ್ಲಿ ನೆನಪಿಸಿಕೊಳ್ಳಬೇಕು. ನಮ್ಮ ದೇಶದ ಪ್ರರಿಸರ ಅಧಿಕಾರಿಗಳ ಪ್ರಕಾರ, ವಿಶ್ವ ಭೂ ದಿನದ ಆಚರಣೆಯಿಂದ ಆರಂಭಿಸಿ ಜುಲೈ 11, 2018 ರಂದು 24 ಗಂಟೆಗಳಲ್ಲಿ 49.3 ಮಿಲಿಯನ್ ಮರಗಳನ್ನು ನೆಡಲು 800,000 ಜನರು ಒಟ್ಟಾಗಿ ಸೇರಿಕೊಂಡರು, ಒಂದೇ ದಿನದಲ್ಲಿ ನೆಡುವ ಮೂಲಕ  ಹೆಚ್ಚಿನ ಮರಗಳನ್ನು ನೆಟ್ಟ ದಾಖಲೆ ಬರೆಯಲಾಗಿತ್ತು.
          ಆದರೆ ಸಂಕಟದ ವಿಷಯ ಎಂದರೆ,  ಇಂದು ಇಡೀ ಜಗತ್ತು ಜಾಗತಿಕ ತಾಪಮಾನ ಹೆಚ್ಚುತ್ತಿರುವುದ ರಿಂದ ಕಂಗಾಲಾಗುತ್ತಿದೆ. ನಾಗರೀಕರಣ ಹೆಚ್ಚಾದಂತೆ ಕಾಡುಗಳು ಮಾಯವಾಗಿ ಕಾಂಕ್ರೇಟ್ ರಸ್ತೆ, ಕಟ್ಟಗಳು ತಲೆ ಎತ್ತಿವೆ. ಇರುವ ಅಲ್ಪ-ಸ್ವಲ್ಪ ಕಾಡು ಸಹ  ಬೆಂಕಿ ಬಿದ್ದು, ಮನುಷ್ಯನ ದಾಳಿ ದಬ್ಬಾಳಿಕೆಯಿಂದ  ನಶಿಸಿ ಹೋಗುತ್ತಿದೆ. ಕಾಡು ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ..! 


           ಈ  ಸತ್ಯ ಗೊತ್ತಿದ್ದರೂ, ಮನುಷ್ಯ ಮಾತ್ರ ತನ್ನ ದುರಾಸೆಗೆ ಪಕೃತಿಯ ಮೇಲೆ ದಬ್ಬಾಳಿಕೆ ಮಾಡುತ್ತಲೇ ಇದ್ದಾನೆ. ತನ್ನ ಈ ಕ್ಷಣದ ಬದುಕಿಗಾಗಿ ಭವಿಷ್ಯದ ಬಗ್ಗೆ ಯೋಚಿಸಿದೆ ಕಾಡನ್ನು ನಾಶಮಾಡುತ್ತಿದ್ದಾನೆ.  ಭೂಮಿಗೆ ತೊಂದರೆ ನೀಡಿದಾಗ, ಅದು ಮುನಿದು ಕೊಂಡರೆ, ಕೆಟ್ಟ ಫಲವನ್ನು  ಅನುಭವಿಸಬೇಕಾಗುತ್ತದ್ದೆ. ನಮ್ಮ ಮುಂದಿನ ಪೀಳಿಗೆಗೆ ನಾವು ನೀಡುವ ಅತಿ ದೊಡ್ಡ ಆಸ್ತಿಯೆಂದರೆ ಈ ಭೂಮಿಯ ರಕ್ಷಣೆ. ಪ್ರಕೃತಿ ಮುನಿಸಿದರೆ ಯಾವ ಆಸ್ತಿಯೂ ಉಳಿಯಲ್ಲ. ನಾನು ನನ್ನದು ಎಂದು ಮಾಡಿಟ್ಟಿರುವ ಇಮಾರತುಗಳು, ಯೋಜನೆಗಳು  ಎಲ್ಲವೂ ಪ್ರಕೃತಿ ಮಾತೆಯ ಮಡಿಲಲ್ಲಿ ಸಮಾನ್ವಿತವಾಗಲಿದೆ.
          ಅದಕ್ಕಾಗಿಯೇ ಇಂದು ಎಲ್ಲರೂ ಒಂದು ಪಣತೊಡಬೇಕಾಗಿದೆ. ಅದೇನೆಂದರೆ, ಪೀಳಿಗೆಯಿಂದ ಪೀಳಿಗೆಗೆ ಭೂಮಿಯನ್ನು ಹಚ್ಚ ಹಸಿರಾಗಿ ಉಳಿಸಲು  ಪ್ರತಿಯೊಬ್ಬರು ಕನಿಷ್ಟ ಒಂದಾದರೂ ಗಿಡ ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕಿದೆ. ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಿ, ಸಾವಯವ ವಸ್ತುಗಳಿಗೆ ಆಧ್ಯತೆ ನೀಡಿ,  ಬೈಕ್, ಕಾರು ಬದಲಿಗೆ ಸೈಕಲ್ ಹೆಚ್ಚು ಬಳಸಿ ಪ್ರಕೃತಿ ಉಳಿಸಬೇಕಾಗಿದೆ. 
 

Publisher: ಕನ್ನಡ ನಾಡು | Kannada Naadu

Login to Give your comment
Powered by