ಕನ್ನಡ ನಾಡು | Kannada Naadu

ನಮ್ಮ ಮೆಟ್ರೋ ಗೆ ಇನ್ನೂ 20 ಹೆಚ್ಚುವರಿ ಮೆಟ್ರೋ ರೈಲುಗಳ ಸೇರ್ಪಡೆ

06 Apr, 2024

ಬೆಂಗಳೂರು : ಬೆಂಗಳೂರಿನಲ್ಲಿ ಸಾರ್ವಜನಿಕರು ಮತ್ತು ಉದ್ಯೋಗಿಗಳ ಅಚ್ಚುಮೆಚ್ಚಿನ ಸಾರಿಗೆಯಾದ ನಮ್ಮ ಮಟ್ರೋ ಭಾರೀ ಜನಮನ್ನಣೆಗೆ ಪಾತ್ರವಾಗಿದೆ. ಆರಂಭವಾದಾಗಿನಿಂದಲೂ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದ್ದರಿಂದ ಈ ಎರಡು ಮಾರ್ಗಗಳಲ್ಲಿ ಹೆಚ್ಚುವರಿಯಾಗಿ 20 ರೈಲುಗಳನ್ನು ಸೇರ್ಪಡೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವ್ಯಾವ ಮಾರ್ಗಗಗಳಲ್ಲಿ ಹಾಗೂ ಯಾವಾಗ ಸೇರ್ಪಡೆ ಮಾಡಲಾಗುತ್ತದೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.
ನೇರಳೆ, ಹಸಿರು ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುತ್ತದೆ. ಅದರಲ್ಲೂ ನೇರಳೆ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆಗೆ ತುಸು ಹೆಚ್ಚಾಗಿಯೇ ಇರುತ್ತದೆ. ಆದ್ದರಿಂದ ಈ ಮಾರ್ಗಗಗಳಿಹೆ 20 ಹೆಚ್ಚುವರಿ ಮೆಟ್ರೋ ರೈಲುಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಇದೇ ವರ್ಷಾಂತ್ಯದ ಈ ರೈಲುಗಳ ಪೂರೈಕೆ ಮಾಡುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ
ಇದೀಗ ಪ್ರತಿನಿತ್ಯ ಪೀಕ್ ಅವರ್‌ನಲ್ಲಿ ಹಾಗೂ ವಾರಾಂತ್ಯ ಬಂತೆಂದರೆ ಸಾಕು ಏಕೈಕ ಇಂಟರ್‌ಚೇಂಜ್ ನಿಲ್ದಾಣ ಮೆಜೆಸ್ಟಿಕ್, ನೇರಳೆ ಮಾರ್ಗದ ಎಂ.ಜಿ.ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ, ವೈಟ್ ಫೀಲ್ಡ್ ಹಾಗೂ ಹಸಿರು ಮಾರ್ಗದ ನಿಲ್ದಾಣದಲ್ಲಿ ಭಾರೀ ಪ್ರಯಾಣಿಕರ ದಟ್ಟಣೆ ನಿರ್ಮಾಣವಾಗುತ್ತಿದೆ. ಅಷ್ಟೇ ಅಲ್ಲದೆ, ಮೆಟ್ರೋಗಳಲ್ಲಿಯೂ ಪ್ರಯಾಣಿಕರ ದಂಡೇ ಇರುತ್ತದೆ. ಇನ್ನು ಕಳೆದ ಕೇವಲ ಮೂರು ತಿಂಗಳಲ್ಲಿ 6.5 ಲಕ್ಷ ದಿಂದ 7.5 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು 2019ರ ಬಿಎಂಆ‌ರ್‌ಸಿಎಲ್ ಚೀನಾದ ಸಿಆ‌ರ್‌ಆರ್ ಒಪ್ಪಂದದಂತೆ 216 ಬೋಗಿಗಳು (36 ರೈಲು) ಮಹಮಾರಿ ಕೋವಿ, ಮೇಡ್ ಇನ್ ಇಂಡಿಯಾ ಪಾಲಿಸಿ ಸೇರಿ ಇತರೆ ತಾಂತ್ರಿಕ ಕಾರಣದಿಂದ ನಿರೀಕ್ಷಿಸಿದ ಸಮಯಕ್ಕೆ ಬಂದಿಲ್ಲ. ಕಳೆದ ಫೆಬ್ರವರಿಯಲ್ಲಿ ಹಳದಿ ಮಾರ್ಗಕ್ಕೆ ಬೇಕಾದ 6 ಬೋಗಿಯ ಒಂದು ರೈಲು ಚೀನಾದಿಂದ ಬಂದಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಮತ್ತೊಂದು ಚಾಲಕರಹಿತ ರೈಲು ಪೂರೈಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತದೆ.
ಬಾಕಿ 34 ರೈಲುಗಳನ್ನು ಚೀನಾದ ಸಿಆರ್‌ಆರ್‌ಸಿ ಕಂಪನಿಯ ಭಾರತದ ಸಹವರ್ತಿ ತಿಹಾಫರ್ ರೈಲ್ ಸಿಸ್ಟಮ್ಸ್ ಕಂಪನಿ ಒದಗಿಸಲಿದೆ. ಈ ಪೈಕಿ ಡಿಬಜಿ (ಡಿಸ್ಟೆನ್ಸ್ ಟು ಗೋ) ಸಿಗ್ನಲಿಂಗ್ ವ್ಯವಸ್ಥೆಯ 20 ರೈಲುಗಳು, ಸಿಬಿಟಿಸಿ ತಂತ್ರಜ್ಞಾನದ 14 ರೈಲುಗಳು ಸೇರಿವೆ. ಹಸಿರು-ನೇರಳೆ ಮಾರ್ಗಕ್ಕೆ 20 ಡಿಟಿಜಿ ರೈಲುಗಳು ಬರಬೇಕಿದೆ. ಇದೇ ವರ್ಷಾಂತ್ಯದ ವೇಳೆಗೆ ತೀತಾಫರ್ ಕಂಪನಿ ಈ ರೈಲುಗಳ ಪೂರೈಕೆ ಮಾಡುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಚಾಲಕರಹಿತ ರೈಲುಗಳಂತೆ ಈ ರೈಲುಗಳು ಕೂಡ ಹೊಸ ಮಾದರಿಯ ವಿನ್ಯಾಸದಲ್ಲಿ ಇರಲಿವೆ. ಆದ್ದರಿಂದ ಹೆಚ್ಚಿನ ತಪಾಸಣೆಗೆ ಒಳಗೊಳ್ಳಲಿವೆ. ಪ್ರಯಾಣಿಕರ ತೊಂದರೆ ನಿವಾರಣೆಗೆ ಆದಷ್ಟು ಬೇಗ ಈ ರೈಲುಗಳನ್ನು ಸೇರ್ಪಡೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by