ಬೆಂಗಳೂರು : ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ, ಇತಿಹಾಸದಲ್ಲಿ ಇದೇ ಮೊದಲು ಅಂತರರಾಷ್ಟ್ರೀಯ ಪ್ರಾಣಿಗಳ ವಿನಿಮಯ ಮಾಡಲಾಗುತ್ತಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ನವದೆಹಲಿಯ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಪಡೆದ ಅನುಮೋದನೆ ಮತ್ತು ಇತರ ಇಲಾಖೆಗಳಿಂದ ಪಡೆದ ನಿರಾಕ್ಷೇಪಣಾ ಪ್ರಮಾಣಪತ್ರ ಮತ್ತು ಅನುಮೋದನೆಯಂತೆ 4 ಏμÁ್ಯದ ಆನೆಗಳು, 1 ಗಂಡು ಮತ್ತು 3 ಹೆಣ್ಣು (ಸುರೇಶ್ - 8 ವರ್ಷ, ಗೌರಿ - 9 ವರ್ಷ, ಶ್ರುತಿ - 7 ವರ್ಷ ಮತ್ತು ತುಳಸಿ - 5 ವರ್ಷ) ಜಪಾನ್‍ನ ಹಿಮೇಜಿ ಸೆಂಟ್ರಲ್ ಪಾರ್ಕ್‍ನ ಹಿಮೇಜಿ - ಸಫಾರಿ ಪಾರ್ಕ್‍ಗೆ ಕಳುಹಿಸಲಾಗುತ್ತಿದೆ.
ಈ ಪ್ರಾಣಿ ವಿನಿಮಯವು ಕಾರ್ಯಕ್ರಮವು ಬಹು ದೊಡ್ಡ ವಿನಿಮಯದ ಭಾಗವಾಗಿದ್ದು, ಪ್ರತಿಯಾಗಿ, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ (4 ಚೀತಾ, 4 ಜಾಗ್ವಾರ್, 4 ಪೂಮಾ, 3 ಚಿಂಪಾಂಜಿ ಮತ್ತು 8 ಕ್ಯಾಪುಚಿನ್ ಕೋತಿಗಳು) ಬರಲಿವೆ. ಆನೆಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಸಾಕಾದ ಕಾನ್ಸೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕತಾರ್ ಏರ್ವೇಸ್‍ನ ಸರಕು ವಿಮಾನ ಬಿ777-200ಎಫ್ ಮೂಲಕ ಜುಲೈ 24 ಮತ್ತು 25 ರಂದು ಸಾಗಿಸಲಾಗುತ್ತಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಹಿಮೇಜಿ ಸೆಂಟ್ರಲ್ ಪಾರ್ಕ್ - ಸಫಾರಿ ಪಾರ್ಕ್‍ಗೆ ಒಟ್ಟು ಸಾಗಣೆ ಸಮಯ ಸುಮಾರು 20 ಗಂಟೆಗಳು. ಕಳೆದ 6 ತಿಂಗಳುಗಳಿಂದ ಈ ಸಾಗಣೆಗಾಗಿ ಪ್ರಾಣಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಆನೆಗಳು ಉತ್ತಮ ಆರೋಗ್ಯದಿಂದಿದ್ದು ಪ್ರಯಾಣ ಮಾಡಬಹುದಾಗಿರುತ್ತದೆ ಎಂದು ಖಾತರಿ ಪಡಿಸಿಕೊಳ್ಳಲಾಗಿದೆ.
ಮೈಸೂರು ಮೃಗಾಲಯದಿಂದ ಮೇ 2021 ರಲ್ಲಿ ಜಪಾನ್‍ನ ಟೊಯೊಹಾಶಿ ಮೃಗಾಲಯಕ್ಕೆ 3 ಆನೆಗಳನ್ನು ಕಳುಹಿಸಿದ ನಂತರ ಇದು ಜಪಾನ್‍ಗೆ ಆನೆಗಳ ವಿನಿಮಯದ ಎರಡನೇ ಬ್ಯಾಚ್ ಆಗಿದೆ. ಹಿಮೇಜಿ ಸೆಂಟ್ರಲ್ ಪಾರ್ಕ್‍ನ ಇಬ್ಬರು ಪಶುವೈದ್ಯರು ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬ ಜೀವಶಾಸ್ತ್ರಜ್ಞೆ ಪ್ರಾಣಿಗಳೊಂದಿಗೆ ಪ್ರಯಾಣಿಸುತ್ತಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಒಟ್ಟು 8 ಜನರು, ಹೊಸ ಪರಿಸರಕ್ಕೆ ಒಗ್ಗಿಕೊಳ್ಳಲು ಆನೆಗಳಿಗೆ ತರಬೇತಿ ನೀಡಲು ಎರಡು ವಾರಗಳ ಕಾಲ ಹಿಮೇಜಿ ಸೆಂಟ್ರಲ್ ಪಾರ್ಕ್‍ಗೆ ಭೇಟಿ ನೀಡಿ ಅಲ್ಲಿಯೇ ಇರುತ್ತಾರೆ. ಇದಲ್ಲದೆ, ಹಿಮೇಜಿ ಸೆಂಟ್ರಲ್ ಪಾರ್ಕ್‍ನ ಆನೆ ಪಾಲಕರಿಗೆ ಮೇ 12 ರಿಂದ ಮೇ 25, 2025 ರವರೆಗೆ ಸುಮಾರು 20 ದಿನಗಳ ಕಾಲ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ತರಬೇತಿ ನೀಡಲಾಗಿತ್ತು. ಈ ಐತಿಹಾಸಿಕ ಪ್ರಯಾಣವನ್ನು ಕೈಗೊಳ್ಳಲು ಲಾಜಿಸ್ಟಿಕ್ಸ್, ಆಹಾರ ಮತ್ತು ಪಶುವೈದ್ಯಕೀಯ ಆರೈಕೆಗಾಗಿ ಎಲ್ಲಾ ಸಿದ್ದತೆಗಳನ್ನು ಮಡಿಕೊಳ್ಳಲಾಗಿದೆ. ಹಿಮೇಜಿ ಸೆಂಟ್ರಲ್ ಪಾರ್ಕ್ - ಸಫಾರಿ ಪಾರ್ಕ್‍ಗೆ ಏಷ್ಯನ್ ಆನೆಗಳನ್ನು ಸೇರಿಸುವುದು, ಜಪಾನ್‍ನ ಜನರಿಗೆ ಉದ್ಯಾನವನಕ್ಕೆ ಭೇಟಿ ನೀಡಲು ಮತ್ತು ಈ ಸಸ್ತನಿಯ ವರ್ಚಸ್ಸು ಮತ್ತು ಬುದ್ಧಿವಂತಿಕೆಯನ್ನು ಪ್ರಶಂಸಿಸಲು ಒಂದು ಉತ್ತಮ ಅವಕಾಶವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu