ಬೆಂಗಳೂರು : ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವತಿಯಿಂದ ಜುಲೈ 26 ರಂದು ಬೆಳಿಗ್ಗೆ 7.00 ರಿಂದ 4.00 ಗಂಟೆಯವರಿಗೆ ಜಿ.ಕೆ.ವಿಕೆ ಆವರಣದ ಗಣಪತಿ ದೇವಸ್ಥಾನದ ಹತ್ತಿರದಲ್ಲಿ “ರೈತ ಸಂತೆ”ಯನ್ನು ಆಯೋಜಿಸಿದೆ.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ನಡೆಸುವ ವಿಶೇಷ ಕಾರ್ಯಕ್ರಮಗಳಲ್ಲಿ ಒಂದಾದ “ರೈತ ಸಂತೆ” ಎಲ್ಲಾ ಜನ ಸಮೂಹದ ಆಕರ್ಷಣೆಗೆ ಒಳಾಗಾಗಿದ್ದು ಈ ಬಾರಿ ರೈತ ಸಂತೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಹಲವಾರು ವಿನೂತನ ವಿಷಯಗಳಿಗೆ ಸಾಕ್ಷಿಯಾಗಲಿದೆ.
ಈ ಭಾರಿ ರೈತ ಸಂತೆಯ ವಿಶೇಷತೆಗಳು - ಸಗಣಿಯಿಂದ ತಯಾರಿಸಿದ ವೈವಿಧ್ಯಮಯ ಉತ್ಪನ್ನಗಳು (ಹಣತೆಗಳು, ಗೋಡೆಗೆ ನೇತಾಕುವ ಕಲಂಕಾರಿಕೆ, ಮೊಬೈಲ್ ಸ್ಟಾಡ್, ಗಣೇಷ ಮೂರ್ತಿಗಳು ಇನ್ನೂ ಮುಂತಾದವು), ಗುಣಮಟ್ಟದ ರಾಜಮುಡಿ ಅಕ್ಕಿ, ತಜಾ ಅಣಬೆ, ಆರೋಗ್ಯಯುತ ಹಣ್ಣು ತರಕಾರಿಗಳ ಪಾನಿಯ ಮಿಶ್ರಣಗಳು (ಟೊಮ್ಯಾಟೊ, ಬೀಟ್‍ರೂಟ್, ಸೌತೇಕಾಯಿ, ನೇರಳೆ ಹಣ್ಣು ಇನ್ನೂ ಮುಂತಾದವು) ಹಾಗೂ ಅಲಂಕಾರಿಕ ಮೀನು ಮರಿಗಳು.
ಇದರ ಜೊತೆಗೆ ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳು, ಸಾವಯವ ಉತ್ಪನ್ನಗಳು, ತೋಟಗಾರಿಕೆ: ಮಾವು, ಹಲಸು ಹಣ್ಣುಗಳು, ಸುಗಂಧ ಮತ್ತು ಔಷಧೀಯ ಸಸ್ಯಗಳು, ಅಲಂಕಾರಿಕ ಗಿಡಗಳು, ಜೈವಿಕ ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳು, ಎರೆಹುಳು ಗೊಬ್ಬರ, ಸಸ್ಯ ಸಂರಕ್ಷಣೆ: ಜೈವಿಕ ಕೀಟನಾಶಕಗಳು, ಕರಕುಶಲ ವಸ್ಥುಗಳು: ಅಡಿಕೆ ಉತ್ಪನ್ನಗಳು, ರೇಷ್ಮೆ ಕೃಷಿಯ ಉಪ – ಉತ್ಪನ್ನಗಳು, ಜೇನು ಕೃಷಿ, ವಾಣಿಜ್ಯೀಕರಣ ಉತ್ಪನ್ನಗಳು, ಪಶು ಸಂಗೋಪನೆ, ಕೃಷಿ ಪ್ರಕಟಣೆಗಳು, ವಿಶ್ವವಿದ್ಯಾನಿಲಯದ ಬಗ್ಗೆ ಮಾಹಿತಿ, ತಾರಸಿ ಕೈತೋಟ/ನಗರ ತೋಟಗಾರಿಕೆ ಇನ್ನು ಮುಂತಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿರುತ್ತದೆ. ಸಾರ್ವಜನಿಕರು ಮತ್ತು ರೈತರು ಈ ವಿನೂತನ ಸಂತೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
Publisher: ಕನ್ನಡ ನಾಡು | Kannada Naadu