ಕನ್ನಡ ನಾಡು | Kannada Naadu

50 ಪ್ರಯಾಣಿಕರಿದ್ದ ವಿಮಾನ ನಾಪತ್ತೆ

24 Jul, 2025

    ಬೆಂಗಳೂರು : 50 ಪ್ರಯಾಣಿಕರಿದ್ದ ರಷ್ಯಾ ವಿಮಾನವೊಂದು ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ರಷ್ಯಾದ AN-24 ವಿಮಾನದಲ್ಲಿ 50 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಚೀನಾ ಗಡಿಯತ್ತ ತೆರಳುತ್ತಿದ್ದ ವಿಮಾನ ಸಂಪರ್ಕ ಕಳೆದುಕೊಂಡಿದೆ.

ಅಂಗಾರ ಏರ್ ಲೈನ್ಸ್ ನ ಈ ವಿಮಾನ ಅಮುರ್ ನ ಟಿಂಡಾ ನಗರಕ್ಕೆ ತೆರಳುತ್ತಿತ್ತು. ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡಾಗ ವಿಮಾನ ತನ್ನ ಗಮ್ಯಸ್ಥಾನದಿಂದ ಕೆಲವೇ ಮೀಟರ್ ದೂರದಲ್ಲಿತ್ತು ಎಂದು ತಿಳಿದುಬಂದಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by