ಬೆಂಗಳೂರು, :ಕೆ.ಎಸ್.ಆರ್.ಟಿ.ಸಿ ಸಂಸ್ಥೆಯಲ್ಲಿ ಸುಮಾರು 10 ವರ್ಷಗಳಿಗೂ ಮೇಲ್ಪಟ್ಟು ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಅರ್ಜಿಸಲ್ಲಿಸಿದ್ದ 14 ಮೃತರ ಅವಲಂಬಿತರುಗಳಿಗೆ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕಚೇರಿ ಸಹಾಯಕ (ಸ್ವಚ್ಚತೆ) ಹುದ್ದೆಗೆ ನೇಮಕಾತಿ ಆದೇಶ ವಿತರಣೆ ಮಾಡಿದರು.
ಕಳೆದ 1 ವರ್ಷದಲ್ಲಿ ಒಟ್ಟಾರೆ 212 ಮೃತರ ಅವಲಂಬಿತರುಗಳಿಗೆ ಅನುಕಂಪದ ಆಧಾರದ ನೇಮಕಾತಿ ಮಾಡಲಾಗಿದೆ. ಕರಾಸಾಪೇದೆ (Security Guard) 107, ಕಚೇರಿ ಸಹಾಯಕ (ಸ್ವಚ್ಚತೆ) 46, ತಾಂತ್ರಿಕ ಸಹಾಯಕ 37, ಚಾಲಕ / ನಿರ್ವಾಹಕ / ಚಾಲಕ ಕಂ ನಿರ್ವಾಹಕ 22 ಹೀಗೆ ಒಟ್ಟು 212 ಹುದ್ದೆಗಳಿಗೆ ನೀಡಲಾಗಿದ್ದು, ಈ ದಿನ ನೀಡಿರುವ ಆದೇಶ ಸೇರಿ 226 ಅನುಕಂಪದ ನೌಕರಿ ಆದೇಶ ವಿತರಣೆ ಮಾಡಲಾಗಿದೆ.
ಕರಾಸಾಪೇದೆ (Security Guard) ಹುದ್ದೆಗಳಿಗೆ 50 ಮೃತರ ಅವಲಂಬಿತರುಗಳಿಗೆ ಮುಂದಿನ ಒಂದು ವಾರದಲ್ಲಿ ದೇಹದಾಢ್ರ್ಯತೆ ಹಾಗೂ ದೈಹಿಕ ಸಾಮಥ್ರ್ಯ ಪರೀಕ್ಷೆ ನಡೆಸುವ ಮೂಲಕ ಅನುಕಂಪದ ನೇಮಕಾತಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ.
ಇಂದು ಮಾನ್ಯ ಮುಜರಾಯಿ ಮತ್ತು ಸಾರಿಗೆ ಸಚಿವರು 14 ಮೃತರ ಅವಲಂಬಿತರುಗಳಿಗೆ ಕಚೇರಿ ಸಹಾಯಕ (ಸ್ವಚ್ಚತೆ) ಹುದ್ದೆಗೆ ನೇಮಕಾತಿ ಆದೇಶ ವಿತರಣೆ ಮಾಡಿರುತ್ತಾರೆ.
ಈ ಸಂಧರ್ಭದಲ್ಲಿ ಮಾನ್ಯ ಉಪಾಧ್ಯಕ್ಷರಾದ ಮೊಹಮ್ಮದ್ ರಿಜ್ವಾನ್ ನವಾಬ್, ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂಪಾಷ, ನಿರ್ದೇಶಕರು (ಸಿ ಮತ್ತು ಜಾ) ಡಾ. ನಂದಿನಿದೇವಿಕೆ, ಹಾಗೂ ನಿರ್ದೇಶಕರು (ಮಾಹಿತಿ ತಂತ್ರಜ್ಞಾನ) ಇಬ್ರಾಹಿಂ ಮೈಗೂರ್ ಅವರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu