ಕನ್ನಡ ನಾಡು | Kannada Naadu

ಶಾಸಕ ಲಕ್ಷ್ಮಣ ಸವದಿ ಕಾರು ಅಪಘಾತ

09 Jun, 2025

 ಬೆಳಗಾವಿ: ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಪ್ರಯಾಣಿಸುತ್ತಿದ್ದ ಕಾರು ಹಾಗೂ ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿಯ ದರೂರ್ ಬಳಿ ನಡೆದಿದೆ.

ಲಕ್ಷ್ಮಣ ಸವದಿ ಅಥಣಿಯಿಂದ ಗೋಕಾಕ್ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಅವರ ಕಾರಿಗೆ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಲಕ್ಷ್ಮಣ ಸವದಿ ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದ ಬಳಿಕ ಲಕ್ಷ್ಮಣ ಸವದಿ ಬೇರೆ ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. 

ಇಂದು ಸಾಯಂಕಾಲ 4:00 ಸುಮಾರಿಗೆ ಈ ಅಪಘಾತ ಸಂಭವಿಸಿದ್ದು ಶಾಸಕ ಲಕ್ಷ್ಮಣ್ ಸವದಿ ಕುಳಿತಿದ್ದ ಕಾರ್ ಗೆ ಗೂಡ್ಸ ವಾಹನ ಡಿಕ್ಕಿಯಾಗಿದೆ.ಈ ಅಘಾತದಲ್ಲಿ ಗೂಡ್ಸ್ ವಾಹನ ಚಾಲಕನ ನಿರ್ಲಕ್ಷ ವೆಂದು ಮೇಲ್ನೋಟಕ್ಕೆ ಕಂಡುಬದಿದೆ.

ಅಪಘಾತದ ಬಳಿಕ ಶಾಸಕ ಲಕ್ಷ್ಮಣ ಸವದಿ ಕೆಳಗಿಳಿದು ಗೂಡ್ಸ ವಾಹನ ಚಾಲಕನ ಅರೋಗ್ಯ ವಿಚಾರಿಸಿದ್ದಾರೆ. ಅಪಘಾತದಲ್ಲಿ ಎರಡು ವಾಹನ ಸವಾರರಿಗೆ ಯಾವುದೆ ಗಾಯಗಳಾಗಿರುವುದಿಲ್ಲ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by